ಚಾಮರಾಜನಗರ

ಉರ್ಕಾತೇಶ್ವರಿ ಅಮ್ಮನ ಹಬ್ಬ

ಚಾಮರಾಜನಗರ: ತಾಲೂಕಿನ ಉಮ್ಮತ್ತೂರು ಗ್ರಾಮದ ಉರ್ಕಾತೇಶ್ವರಿ ಅಮ್ಮನವರ ಹಬ್ಬವು ಜ.29ರಿಂದ ಜ.31ರವರೆಗೆ ನಡೆಯಲಿದೆ. ಜ.29ರ ಮಂಗಳವಾರ ಸಾಯಂಕಾಲ ನವಗ್ರಹ ಹೋಮ, ಗಣಪತಿ ಹೋಮ, 108 ಮಹಿಳೆಯರಿಂದ ದೀಪದ ಆರತಿ ಪೂಜೆ, ಉರ್ಕಾತೇಶ್ವರಿ ಮಹಾಯಾಗ, ಮಹಾಲಕ್ಷ್ಮಿ ಹೋಮ, ಅಷ್ಟಲಕ್ಷ್ಮಿ ಹೋಮ, ಉತ್ಸವ ಮೂರ್ತಿಗೆ ಅಭಿಷೇಕ, ಕಳಸಾರಾಧನೆ ಮತ್ತು ಕಣ್ಣು ತೆರೆಸುವ ಪೂಜೆ ನಡೆಯಲಿದೆ. ಜ.30ರ ಬುಧವಾರ ಬೆಳಗ್ಗೆ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ, ಅನ್ನದಾನ, ಸಂಜೆ ಹೊಸ ವಿಗ್ರಹದ ಅಲಂಕಾರಿಕ ಪಲ್ಲಕ್ಕಿ ಉತ್ಸವದ ಮೆರವಣಿಗೆ , ಜ.31ರಂದು ಅಭಿಷೇಕ, ಕರುಪ್ಪುಸ್ವಾಮಿಗೆ ಪೂಜೆ ನಡೆಯುತ್ತವೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಉರ್ಕಾತೇಶ್ವರಿ ದೇವಸ್ಥಾನದ ಟ್ರಸ್ಟ್ ಕೋರಿದೆ.
ರಿಯಾಯಿತಿ ದರದಲ್ಲಿ ಕೃಷಿ ಉಪಕರಣ
ಚಾಮರಾಜನಗರ: ಜಿಲ್ಲಾ ಕೃಷಿ ಇಲಾಖೆ ವತಿಯಿಂದ 2012-13ನೇ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಯೋಜನೆ ಮತ್ತು ಲಘು ನೀರಾವರಿ ಯೋಜನೆಗಳಲ್ಲಿ ಕೃಷಿ ಯಂತ್ರೋಪಕರಣಗಳನ್ನು ಶೇ.50ರ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಲಭ್ಯವಿರುವ ಗೋಮತಿ ರೋಟಾವೇಟರ್, ಶಕ್ತಿಮಾನ್ ರೋಟಾವೇಟರ್, ವಿಎಸ್‌ಟಿ ಪವರ್ ಟಿಲ್ಲರ್, 9, 5 ಹಲ್ಲಿನ ಕಲ್ಟಿವೇಟರ್, ಮೇವು ಕತ್ತರಿಸುವ ಯಂತ್ರ, ಹೈ ಸ್ಪೀಡ್ ಪೆಟ್ರೋಲ್ ಎಂಜಿನ್ ಸ್ಪ್ರೇಯರ್, ಬ್ಯಾಟರಿಚಾಲಿತ ಸ್ಪ್ರೇಯರ್, ತುಂತುರು ನೀರಾವರಿ ಉಪಕರಣಗಳನ್ನು ಆಸಕ್ತಿಯುಳ್ಳ ರೈತರು ಸೂಕ್ತ ದಾಖಲಾತಿ ಮತ್ತು ರೈತರ ವಂತಿಕೆಯೊಂದಿಗೆ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಸವಲತ್ತು ಪಡೆದುಕೊಳ್ಳಬೇಕೆಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಅ.16ರ CJPಯ ಪ್ರತಿಭಟನೆಗೆ ತಡೆ ನೀಡಲು ಹೈಕೋರ್ಟ್ ನಕಾರ!

ಕಾಕ್ರೋಚ್ ಜನತಾ ಪಾರ್ಟಿ, ಕಾಂಗ್ರೆಸ್ ಎರಡೂ ಒಂದೇ; ಇಲ್ಲಿ ನಿಮ್ಮನ್ನು ಯಾರೂ ಬಂಧಿಸಲ್ಲ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ!

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

Indian Stock Market: ಕೊನೆಗೂ ಪುಟಿದಿದ್ದ ಭಾರತೀಯ ಷೇರು ಮಾರುಕಟ್ಟೆ, ಸೆನ್ಸೆಕ್ಸ್ ದಾಖಲೆಯ ಏರಿಕೆ