ರಾಜೇಶ್
ಚಾಮರಾಜನಗರ: ತಾಲೂಕಿನ ಮೂಡಲ ಹೊಸಹಳ್ಳಿಯ ರಾಜೇಶ(40) ಮೇ 26ರಿಂದ ಕಾಣೆಯಾಗಿದ್ದಾರೆ. ಈ ಸಂಬಂಧ ರಾಜೇಶನ ತಂದೆ ಬೆಳ್ಳಪ್ಪ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈತ ಸಾಧಾರಣ ಮೈಕಟ್ಟು, ಎಣ್ಣೆಗಂಪು ಬಣ್ಣ, 5.5 ಅಡಿ ಎತ್ತರವಿದ್ದಾನೆ. ಈತನ ಬಗ್ಗೆ ಮಾಹಿತಿ ದೊರೆತವರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಅಥವಾ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುಧಾ
ಚಾಮರಾಜನಗರ: ಮಧುವನಹಳ್ಳಿಯ ಕುಮಾರಸ್ವಾಮಿ ಎಂಬವರ ಪತ್ನಿ ನಾಪತ್ತೆಯಾಗಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಮಧುವನಹಳ್ಳಿಯ ಸುಧಾ ಎಂಬಾಕೆ ಮೇ 14ರಿಂದ ಕಾಣೆಯಾಗಿದ್ದು, ಪ್ರಕರಣ ದಾಖಲಾಗಿದೆ. 28 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಮಾತನಾಡುತ್ತಾರೆ. ಕ್ರೀಂ ಬಣ್ಣದ ನೈಟಿ ಧರಿಸಿದ್ದಾರೆ. ಇವರ ಪತ್ತೆಯಾದಲ್ಲಿ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ದೂ.08224 - 252051 ಅಥವಾ ಚಾಮರಾಜನಗರ ಜಿಲ್ಲಾ ನಿಯಂತ್ರಣ ಕೊಠಡಿ ದೂ. 08226 - 222398ಗೆ ಮಾಹಿತಿ ನೀಡಲು ಕೊಳ್ಳೇಗಾಲ ಗ್ರಾಮಾಂತರ ಠಾಣೆ ಸಬ್ ಇನ್ಸ್ಪೆಕ್ಟರ್ ಎಂ. ಶಿವಣ್ಣ ತಿಳಿಸಿದ್ದಾರೆ.
ಬಸವದೇವರು
ಗುಂಡ್ಲುಪೇಟೆ: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಚನ್ನಬಸವದೇವರು(52) ಕಾಣೆಯಾಗಿದ್ದಾರೆ ಎಂದು ತೆರಕಣಾಂಬಿ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಅವರ ಪತ್ನಿ ಗುರುಮಲ್ಲಮ್ಮ ದೂರು ದಾಖಲಿಸಿದ್ದಾರೆ. ಕನ್ನಡ ಭಾಷೆ ತಿಳಿದಿದ್ದು, ಮನೆಯಿಂದ ಹೊರ ಹೋಗುವಾಗ ಬಿಳಿ ಷರ್ಟ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಇವರ ಬಗ್ಗೆ ಮಾಹಿತಿ ದೊರೆತರೆ ಪೊಲೀಸರಿಗೆ ತಿಳಿಸುವಂತೆ(08229- 232235) ಮನವಿ ಮಾಡಿದ್ದಾರೆ.