ಕ.ಪ್ರ.ವಾರ್ತೆ ್ಣ ಚಾ.ನಗರ ್ಣ ಮಾ.29
ಜಿಲ್ಲೆಯಲ್ಲಿ ನಡೆಯುವ ವಿಧಾನಸಭೆ ಚುನಾವಣೆ ವೇಳೆ ಚುನಾವಣಾ ಅಪರಾಧಗಳಿಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ ದಾಖಲು ಮಾಡಿ ಕ್ರಮ ವಹಿಸಲು ನಾಲ್ಕೂ ವಿಧಾನಸಭಾ ಕ್ಷೇತ್ರಗಳಿಗೆ ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ಜಿಲ್ಲಾಧಿಕಾರಿ ಎಂ.ವಿ.ಸಾವಿತ್ರಿ ನೇಮಕ ಮಾಡಿದ್ದಾರೆ.
ಹೋಬಳಿ ಮಟ್ಟದಲ್ಲಿ ತಂಡವು ಕಾರ್ಯ ನಿರ್ವಹಿಸಲು ಅನುವಾಗುವಂತೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಹನೂರು ವಿಧಾನಸಭಾ ಕ್ಷೇತ್ರ: ಪಾಳ್ಯ ಹೋಬಳಿಯ ತಂಡದ ಮೇಲ್ವಿಚಾರಕರಾಗಿ ಕೊಳ್ಳೇಗಾಲ ಎಪಿಎಂಸಿ ಕಾರ್ಯದರ್ಶಿ ಯೋಗಾನಂದ(9980546295), ಸದಸ್ಯರಾಗಿ ಪೊಲೀಸ್ ಪೇದೆಗಳಾದ ಲೋಕೇಶ್, ಬಿ.ಎಸ್.ಶಂಭುಲಿಂಗಪ್ಪ, ಗ್ರಾಮ ಲೆಕ್ಕಿಗ ನಿರಂಜನ್(9741489698) ಹಾಗೂ ಪಿಡಿಒ ಮಹದೇವಸ್ವಾಮಿ ತಂಡದ ಸದಸ್ಯರಾಗಿ ಕೆಲಸ ನಿರ್ವಹಿಸಲಿದ್ದಾರೆ.
ಹನೂರು ಪಪಂ ವ್ಯಾಪ್ತಿಯಲ್ಲಿ ಪರಿಸರ ಅಧಿಕಾರಿ ಶಕುಂತಲಾಬಾಯಿ(9448119262) ಮೇಲ್ವಿಚಾರಕರಾಗಿ, ರವಿ, ರಂಗನಾಥ್, ಶರವಣಕುಮಾರ್ ಹಾಗೂ ಕಿರಣ್ ಸದಸ್ಯರಾಗಿ ನೇಮಕವಾಗಿದ್ದಾರೆ.
ಹನೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವಿಶ್ವನಾಥ್(9448119262) ಮೇಲ್ವಿಚಾರಕರಾಗಿ, ಶಿವಕುಮಾರ್, ನಟರಾಜು, ಮಾದೇಶ, ರಾಮು ಸದಸ್ಯರಾಗಿ ನೇಮಕಗೊಂಡಿದ್ದಾರೆ.
ರಾಮಾಪುರ ಹೋಬಳಿ ವ್ಯಾಪ್ತಿಗೆ ಜಿಲ್ಲಾ ನೋಂದಣಾಧಿಕಾರಿ ರಾಘವೇಂದ್ರ(8095231352) ತಂಡದ ಮೇಲ್ವಿಚಾರಕರಾಗಿ ನೇಮಕವಾಗಿದ್ದು, ನಾಗಬಸವಣ್ಣ, ಮಹದೇವಸ್ವಾಮಿ, ರಂಗಸ್ವಾಮಿ ಹಾಗೂ ಮಾದೇಶ ತಂಡದ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಲೊಕ್ಕನಹಳ್ಳಿ ವ್ಯಾಪ್ತಿಯಲ್ಲಿ ಕೆಜಿಐಡಿಯ ಜಿಲ್ಲಾ ವಿಮಾಧಿಕಾರಿ ಎಂ.ಮಹದೇವು(9535076374) ತಂಡದ ಮೇಲ್ವಿಚಾರಕರಾಗಿದ್ದು, ಶಿವಪ್ರಸಾದ್, ಶಂಭುಲಿಂಗಮೂರ್ತಿ, ಅಶೋಕ, ರವಿಕುಮಾರ್ ಸದಸ್ಯರಾಗಿ ನೇಮಕವಾಗಿದ್ದಾರೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ: ಸಂತೆಮರಹಳ್ಳಿ ಹೋಬಳಿ ವ್ಯಾಪ್ತಿಗೆ ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ರಿಕವರಿ ಅಧಿಕಾರಿ ಬಿ.ರಾಮಕೃಷ್ಣ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುವರು. ಸದಸ್ಯರಾಗಿ ಮಹದೇವಗೌಡ (8105259416), ಶಿವಕುಮಾರಸ್ವಾಮಿ, ಚಿಕ್ಕಾಳೆಗೌಡ, ಮಾದೇವ ಕೆಲಸ ನಿರ್ವಹಿಸುವರು.
ನಗರಸಭೆ ವ್ಯಾಪ್ತಿಗೆ ಕೊಳ್ಳೇಗಾಲದ ಡಿಎಸ್‌ಎಸ್‌ಐನ ವಲಯ ಯೋಜನಾ ಸಮನ್ವಯಾಧಿಕಾರಿ ಸಿದ್ದಾಚಾರಿ ತಂಡದ ಮೇಲ್ವಿಚಾರಕರಾಗಿ ನೇಮಕವಾಗಿದ್ದಾರೆ. ಸದಸ್ಯರಾಗಿ ಕೃಷ್ಣಯ್ಯ, ಎಂ.ಸುರೇಶ್(9742039544), ಎಸ್.ಮಲ್ಲು ಹಾಗೂ ಗೋಪಾಲಕೃಷ್ಣ ನೇಮಕಗೊಂಡಿದ್ದಾರೆ.
ಕೊಳ್ಳೇಗಾಲ ಕಸಬಾ ವ್ಯಾಪ್ತಿಗೆ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಎನ್.ಶಿವಲಿಂಗಮೂರ್ತಿ ತಂಡದ ಮೇಲ್ವಿಚಾರಕರಾಗಿ, ರಂಗಸ್ವಾಮಿ, ಡಿ.ಆನಂದನಾಯ್ಕ(948812012), ಸತೀಶ್, ರವೀಂದ್ರ ಸದಸ್ಯರಾಗಿ ಕೆಲಸ ನಿರ್ವಹಿಸುವರು.
ಯಳಂದೂರಿನ ಅಗರ ಹೋಬಳಿ ವ್ಯಾಪ್ತಿಯಲ್ಲಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದರಾಜು ತಂಡದ ಮೇಲ್ವಿಚಾರಕರಾಗಿ, ಸದಸ್ಯರಾಗಿ ಮಹದೇವಸ್ವಾಮಿ ಆರ್.(9352630601), ಟಿ.ನಾಗೇಂದ್ರಸ್ವಾಮಿ, ಕುಮಾರ್, ಪುಟ್ಟರಾಜು ಕಾರ್ಯ ನಿರ್ವಹಿಸುವರು.
ಯಳಂದೂರು ಪಪಂ ವ್ಯಾಪ್ತಿಯಲ್ಲಿ ತಂಡದ ಮೇಲ್ವಿಚಾರಕರಾಗಿ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಸುಂದರರಾಜು(9880466089), ಸದಸ್ಯರಾಗಿ ಬೀರೇಗೌಡ, ಕೆ.ಗೋವಿಂದರಾಜು, ಅಶೋಕ್, ಉಮೇಶ್ ಕಾರ್ಯ ನಿರ್ವಹಿಸುವರು.
ಯಳಂದೂರು ಕಸಬಾ ಗ್ರಾಮಾಂತರ ವ್ಯಾಪ್ತಿಗೆ ಪಶುಸಂಗೋಪನ ಇಲಾಖೆಯ ಉಪನಿರ್ದೇಶಕ ಸುಂದರರಾಜು (9880466089) ತಂಡದ ಮೇಲ್ವಿಚಾರಕರಾಗಿ, ಸದಸ್ಯರಾಗಿ ಎಂ.ರಮೇಶ್, ಸಿ.ಎಂ.ರಮೇಶ, ನಂಜುಂಡ, ಗಂಗಾಧರ ಕೆಲಸ ನಿರ್ವಹಿಸುವರು.
ಚಾಮರಾಜನಗರ ವಿಧಾನಸಭಾ ಕ್ಷೇತ್ರ: ಕಸಬಾ ಗ್ರಾಮಾಂತರ ಹೋಬಳಿ ವ್ಹಾಪ್ತಿಗೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಸ್. ಪ್ರತಿಭ(9480843026) ತಂಡದ ಮೇಲ್ವಿಚಾರಕರಾಗಿ, ಶಿವಣ್ಣ, ಚೌಡನಾಯ್ಕ, ರೇವಣ್ಣ, ಮಹೇಶ್ ಸದಸ್ಯರಾಗಿ ನೇಮಕವಾಗಿದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೃಷ್ಣಾನಾಯಕ್(9448869668) ಮೇಲ್ವಿಚಾರಕರಾಗಿ, ಸದಸ್ಯರಾಗಿ ಶೇಖರ್, ಎಂ.ಸಂದೀಪ್, ಶಿವನಂಜಾಚಾರಿ, ಮಲ್ಲಣ್ಣ ನೇಮಕವಾಗಿದ್ದಾರೆ.
ಚಂದಕವಾಡಿ ಹೋಬಳಿಗೆ ತಂಡದ ಮೇಲ್ವಿಚಾರಕರಾಗಿ ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಚಿಕ್ಕಮಾದೇಗೌಡ(9886602437), ಸದಸ್ಯರಾಗಿ ಪ್ರಕಾಶ್ ರಾಜೇಶ್‌ನಾಯಕ, ಎಸ್.ಎನ್.ಸುರೇಶ್‌ಬಾಬು, ರಂಗರಾಜು ನೇಮಕಗೊಂಡಿದ್ದಾರೆ.
ಹರದನಹಳ್ಳಿ ಹೋಬಳಿಗೆ ಜಿಲ್ಲಾ ಗಿರಿಜನ ಕಲ್ಯಾಣಾಧಿಕಾರಿ ಎಸ್.ನಾಗರತ್ನಮ್ಮ(9448000047)ಮೇಲ್ವಿಚಾರಕರಾಗಿ, ಡಿ.ಬಸವಣ್ಣ, ಷಡಕ್ಷರಸ್ವಾಮಿ, ನಿಂಗೇಗೌಡ, ಪುಟ್ಟಶೆಟ್ಟಿ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ: ಬೇಗೂರು ಹೋಬಳಿ ವ್ಯಾಪ್ತಿಗೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ.ಆರ್.ಸ್ವಾಮಿ(9008460619) ತಂಡದ ಮೇಲ್ವಿಚಾರಕರಾಗಿ, ಕೃಷ್ಣ, ಆರ್.ಸಕ್ರೂನಾಯ್ಕ, ಗಂಗಾಧರ್, ಸಿ.ಎನ್.ಗುರುಪ್ರಸಾದ್ ಸದಸ್ಯರಾಗಿ ನೇಮಕವಾಗಿದ್ದಾರೆ.
ಪುರಸಭೆ ವ್ಯಾಪ್ತಿಗೆ ಡಿಆರ್‌ಸಿಎಸ್‌ನ ವನಜಾಕ್ಷಿ(9900375425) ತಂಡದ ಮೇಲ್ವಿಚಾರಕರಾಗಿ, ಶಿವಕುಮಾರಸ್ವಾಮಿ, ಚಿಕ್ಕಲಿಂಗಯ್ಯ, ಪುಟ್ಟಸ್ವಾಮಿ, ಕೆ.ಮಲ್ಲಣ್ಣ ಸದಸ್ಯರಾಗಿ ಕಾರ್ಯನಿರ್ವಹಿಸುವರು.
ಕಸಬಾ ಹೋಬಳಿ ವ್ಯಾಪ್ತಿಗೆ ಡಿಎಲ್‌ಡಿವಿ ಸಹಾಯಕ ನಿರ್ದೇಶಕ ಮೋಹನ್‌ದಾಸ್ ತಂಡದ ಮೇಲ್ವಿಚಾರಕರಾಗಿ, ಶಿವಕುಮಾರ್,ಸುಹಾಸ್, ಶಿವಮಲ್ಲಪ್ಪ, ಬಸವರಾಜೇಗೌಡ ಸದಸ್ಯರಾಗಿ ಕಾರ್ಯ ನಿರ್ವಹಿಸುವರು.
ತೆರಕಣಾಂಬಿ ಹೋಬಳಿ ವ್ಯಾಪ್ತಿಗೆ ಡಯಟ್ ಕಾಲೇಜು ಪ್ರಾಂಶುಪಾಲರು ತಂಡದ ಮೇಲ್ವಿಚಾರಕರಾಗಿ ನೇಮಕವಾಗಿದ್ದಾರೆ. ಶಿವಸ್ವರೂಪ(9880561961), ಜಿ.ಮಲ್ಲೇಶ್, ರೇವಣ್ಣ, ನಾಗೇಗೌಡ ಸದಸ್ಯರಾಗಿ ಕಾರ್ಯ ನಿರ್ವಹಿಸುವರು.
ಹಂಗಳ ಹೋಬಳಿ ವ್ಯಾಪ್ತಿಗೆ ಗೃಹ ನಿರ್ಮಾಣ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ರವೀಂದ್ರ(9448470311) ತಂಡದ ಮೇಲ್ವಿಚಾರಕರಾಗಿ, ಶಿವಪ್ರಸಾದ್, ಎನ್.ನಟರಾಜ್, ಕೃಷ್ಣಮೂರ್ತಿ, ಶಂಕರಪ್ಪ ಸದಸ್ಯರಾಗಿ ನೇಮಕವಾಗಿದ್ದಾರೆ.
ಹರವೆ ಹೋಬಳಿ ವ್ಯಾಪ್ತಿಗೆ ಜಿಲ್ಲಾ ಕೈಗಾರಿಕಾ ಇಲಾಖೆ ಉಪನಿರ್ದೇಶಕ ಎಚ್.ಡಿ.ಸಿದ್ದಪ್ಪ ತಂಡದ ಮೇಲ್ವಿಚಾರಕರಾಗಿ, ಗುರುಸ್ವಾಮಣ್ಣ, ಮಹೇಶ್, ಎಂ.ಶಿವಣ್ಣ (9060117176), ಗುರುಮಲ್ಲಪ್ಪ ಸದಸ್ಯರಾಗಿ ಕಾರ್ಯ ನಿರ್ವಹಿಸುವರು.
ನೇಮಕವಾಗಿರುವ ಅಧಿಕಾರಿಗಳ ತಂಡ ಚುನಾವಣಾ ಅಪರಾಧ, ಅಕ್ರಮಗಳಿಗೆ ಅವಕಾಶವಾಗದ ಹಾಗೆ ಎಚ್ಚರ ವಹಿಸಲಿದ್ದಾರೆ. ಮಾದರಿ ನೀತಿಸಂಹಿತೆ ಕಟ್ಟುನಿಟ್ಟು ಪಾಲನೆ ಕುರಿತು ನಿಗಾ ವಹಿಸಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಾವಿತ್ರಿ ತಿಳಿಸಿದ್ದಾರೆ.