ಚಾಮರಾಜನಗರ

ವೀರಭದ್ರಸ್ವಾಮಿ ನೇತೃತ್ವದಲ್ಲಿ ಕೆಎಂಪಿ ಸೇರಿದ ಯುವಕರು

ಕ.ಪ್ರ.ವಾರ್ತೆ ್ಣ ಚಾ.ನಗರ ್ಣ ಮಾ.29
ತಾಲೂಕಿನ ಮೂಡ್ಲುಪುರ ಗ್ರಾಮದಲ್ಲಿ ಹಲ ಯುವ ಮುಖಂಡರು ಕೆಎಂಪಿ ಜಿಲ್ಲಾಧ್ಯಕ್ಷ ಕೆ.ವೀರಭದ್ರಸ್ವಾಮಿ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾದರು.
ಚನ್ನಪ್ಪನಪುರ, ಪುಟ್ಟನಪುರ, ಹರದನಹಳ್ಳಿ, ಮರಿಯಾಲ ಹಾಗೂ ಸುತ್ತಮುತ್ತಲ ಗ್ರಾಮದ ಯುವ ಮುಖಂಡರು ಕೆಎಂಪಿ ತತ್ವಸಿದ್ಧಾಂತಗಳನ್ನು ಮೆಚ್ಚಿ ಪಕ್ಷ ಸೇರ್ಪಡೆಗೊಂಡರು.
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಕೆ.ವೀರಭದ್ರಸ್ವಾಮಿ, ಪಕ್ಷದ ಜನಪರ ಕಾರ್ಯಗಳು ಹಾಗೂ ಬಡವರ ಮೇಲಿರುವ ಕಾಳಜಿಯನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಸಂತಸದ ವಿಷಯ. ಮುಂಬರುವ ವಿಧಾನಸಭೆಯ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ದುಡಿಯಬೇಕೆಂದರು.
ಚಿತ್ರ ನಿರ್ಮಾಪಕ ಮೂಡ್ಲುಪುರ ನಾಗೇಂದ್ರ(ಮಿಂಚು), ಯುವ ಮುಖಂಡರಾದ ಪಿ.ಕುಮಾರಸ್ವಾಮಿ, ಬಸವಣ್ಣ, ಉಪ್ಪಾರ ಮುಖಂಡ ಶಿವರುದ್ರ, ಮುಸ್ಲಿಂ ಮುಖಂಡ ವಸೀದ್‌ಶೀನಾ, ಚೆನ್ನಂಜಪ್ಪ, ಪುರುಷೋತ್ತಮ್, ಚಂದ್ರು, ದೌಲತ್ ಪಾಷಾ, ಬಸವರಾಜು ಮತ್ತಿತರರು ಪಕ್ಷ ಸೇರಿದರು.
ಈ ಸಂದರ್ಭದಲ್ಲಿ ಮರಿಯಾಲ ನಾಗರಾಜಪ್ಪ, ಪುಟ್ಟನಪುರ ಆನಂದ್, ಚಂದಕವಾಡಿ ಪ್ರಕಾಶ್, ಚನ್ನಪ್ಪನಪುರ ಚಂದ್ರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್