ಮೈಸೂರು: ನಗರದ 66/11 ಕೆವಿ ಆರ್ಕೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಎರಡನೇ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೆತ್ತಿಕೊಳ್ಳುವುದರಿಂದ ಜು.9ರ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ. ಪ್ರದೇಶಗಳು- ರಾಮಕೃಷ್ಣನಗರ ಈ ಮತ್ತು ಎಫ್ ಬ್ಲಾಕ್, ಎಚ್. ಬ್ಲಾಕ್, ವಿವೇಕಾನಂದ ಸರ್ಕಲ್, ನಿಮಿಷಾಂಬ ಲೇಔಟ್, ಮಧುವನ ಲೇಔಟ್, ಬೆಮೆಲ್ ಲೇಔಟ್, ಶ್ರೀರಾಂಪುರ, ದೇವಯ್ಯನಹುಂಡಿ, ಪ್ರೀತಿ ಲೇಔಟ್, ಸರಸ್ವತಿಪುರಂ, ಗಂಗೋತ್ರಿ, ಕುವೆಂಪುನಗರ, ಜನತಾನಗರ, ಶಾರದಾದೇವಿ ನಗರ, ಅರವಿಂದ ನಗರ, ಚಿಕ್ಕಹರದನಹಳ್ಳಿ, ಕುವೆಂಪುನಗರ ಕಾಂಪ್ಲೆಕ್ಸ್, ಅಕ್ಷಯ ಭಂಡಾರ್, ಕೆ.ಜಿ.ಕೊಪ್ಪಲ್, ಡಿವಿಜಿ ಲೇಔಟ್, ಟಿ.ಕೆ. ಲೇಔಟ್, ಗಂಗೋತ್ರಿ ಲೇಔಟ್, ಕೃಷ್ಣಮೂರ್ತಿ ಲೇಔಟ್, ನಿವೇದಿತನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಅಧ್ಯಾಪಕರ ಪ್ರತಿಭಟನೆ
ಮೈಸೂರು: ಕಾಲೇಜು ಶಿಕ್ಷಣ ಇಲಾಖೆಯು ಇತ್ತೀಚೆಗೆ ಹೊರಡಿಸಿರುವ ಆದೇಶದಲ್ಲಿ ಬಿಬಿಎಂ ತರುವಾಯ ಎಂಕಾಂ ಓದಿರುವವರು ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿಗೆ ಪರಿಗಣಿಸಿಲ್ಲ. ಇದು ಬಿಬಿಎಂ, ಎಂ.ಕಾಂ ಪದವೀಧರರ ಭವಿಷ್ಯಕ್ಕೆ ಈ ಆದೇಶ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಬಿಎಂ ಪದವಿಯೊಂದಿಗೆ ಎಂಕಾಂ ಪದವಿ ಪಡೆದಿರುವವರು ವಾಣಿಜ್ಯ ವಿಷಯ ಬೋಧಿಸಲು ಅರ್ಹರೆಂದು ಆದೇಶಿಸಬೇಕು ಎಂದು ಒತ್ತಾಯಿಸಿದರು.ವೇದಿಕೆಯ ಅಧ್ಯಕ್ಷ ಪ್ರೊ.ರಾಮಚಂದ್ರ, ಕಾರ್ಯದರ್ಶಿ ಡಾ.ಎಸ್. ಮಂಜು, ಪದಾಧಿಕಾರಿಗಳಾದ ಪ್ರೊ.ಬಿ.ಕೆ. ಸತೀಶ್ಬಾಬು, ಡಾ.ಎಂ. ಮಹದೇವಯ್ಯ, ಡಾ.ವಿ. ಪದ್ಮಜಾ, ಪ್ರೊ.ಎಚ್.ಎಸ್. ಧನಲಕ್ಷ್ಮಿ, ಪ್ರೊ.ಡಿ. ನಾಗಾರ್ಜುನ್,ಪ್ರೊ.ಪಿ. ಶಿವಣ್ಣ ಇದ್ದರು.