ಚಾಮರಾಜನಗರ

1108 ಶುಷ್ಕ ನಾರಿಕೇಳ ಗಣಪತಿ ಹೋಮ

ಚಾಮರಾಜನಗರ: ನಗರದ ಚಿಕ್ಕಂಗಡಿ ಬೀದಿಯಲ್ಲಿರುವ ದಾಸಬಣಜಿಗರ ಸೀತಾರಾಮಮಂದಿರದಲ್ಲಿ ಸಂಕಷ್ಟಹರ ಚೌತಿ ಪ್ರಯುಕ್ತ ಲೋಕಕಲ್ಯಾಣಾರ್ಥ ಹಾಗೂ ಮಳೆಗಾಗಿ ಪ್ರಾರ್ಥಿಸಿ 1108 ಶುಷ್ಕ ನಾರಿಕೇಳ (ಕೊಬ್ಬರಿ) ಗಣಪತಿ ಹೋಮ ಮತ್ತು ನವಗ್ರಹ ಹೋಮ ನಡೆಯಿತು.
ಸೀತಾರಾಮಮಂದಿರದಲ್ಲಿ ನಿರ್ಮಿಸಿದ್ದ ವಿಶಾಲ ಹೋಮ ಕುಂಡದಲ್ಲಿ ಶುಷ್ಕನಾರಿಕೇಳ ಹೋಮವು ಶ್ರದ್ದಾಭಕ್ತಿಯಿಂದ ನಡೆಯಿತು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಈ ಹೋಮ ನಡೆದಿದ್ದರಿಂದ ನೂರಾರು ಭಕ್ತರು ಭಾಗವಹಿಸಿ ಪ್ರಾರ್ಥಿಸಿದರು.
ಹೋಮದ ಕತೃ ಶ್ರೀನಿವಾಸಶೆಟ್ಟಿ ಮಾತನಾಡಿ, ಲೋಕಕಲ್ಯಾಣಾರ್ಥ ಶುಷ್ಕನಾರಿಕೇಳ ಹೋಮ ಏರ್ಪಡಿಸಿದ್ದು, ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಜನರು ಸಂಕಷ್ಟಕ್ಕೊಳಗಾಗಿದ್ದು, ರೈತರಿಗೆ ವ್ಯಾಪಾರ, ವಾಣಿಜ್ಯ ವರ್ಗಕ್ಕೆ ತೊಂದರೆಯಾಗಿದೆ. ಮಳೆಗಾಗಿ ಪ್ರಾರ್ಥಿಸಿ ಹೋಮ ಆರಂಭಿಸಿದ್ದೇವೆ. ಸರ್ವರಿಗೂ ಒಳಿತಾಗಲಿ ಎಂಬುವುದೇ ಈ ಹೋಮದ ಉದ್ದೇಶವಾಗಿದೆ ಎಂದರು.
ಹರಳುಕೋಟೆ ಶ್ರೀಜನಾರ್ಧನಸ್ವಾಮಿ ದೇವಸ್ಥಾನದ ಆರ್ಚಕ ಅನಂತಪ್ರಸಾದ್ಮಾತನಾಡಿ, ಜಿಲ್ಲೆಯಲ್ಲಿ ಮಳೆ ಬಂದು ಬರ ಪರಿಸ್ಥಿತಿ ಹೋಗಬೇಕು. ಪ್ರತಿಯೊಬ್ಬರೂ ಸುಖ, ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲಿ ಎಂದು ಶುಭ ಹಾರೈಸಿದ ಅವರು, ಪ್ರಾರ್ಥನೆ, ಹೋಮಗಳಿಂದ ಪರಿಸರ ಶುದ್ಧಗೊಂಡು ಮನುಷ್ಯ ಆರೋಗ್ಯವಂತನಾಗಿ ಬದುಕಲು ಸಾಧ್ಯ ಎಂದರು.
ಶೃಂಗೇರಿ ಶಾರದಾಪೀಠಂ ಅದ್ವೈತ ಶೋಧ ಕೇಂದ್ರದ ಜಿಲ್ಲಾ ಪ್ರಧಾನ ಸುರೇಶ್ ಎನ್.ಋಗ್ವೇದಿ ಮಾತನಾಡಿ, ಆಷಾಢಮಾಸ ದೇವತೆಗಳ ಪ್ರಾರ್ಥನೆ, ಧ್ಯಾನ, ಪೂಜೆ, ಹೋಮಗಳ ಮೂಲಕ ಸಕಾರಾತ್ಮಕತೆ ಕಾಣಬಹುದು ಎಂದರು.
ಹೋಮ ಕಾರ್ಯಕ್ರಮದಲ್ಲಿ ದಾಸಬಣಜಿಗರ ಸಂಘದ ಅಧ್ಯಕ್ಷ ವಿಜಯಕೃಷ್ಣ, ಜಯಂತ್, ನಾಗರಾಜ್, ಮುರಳಿ, ಅರ್ಚಕ ದರ್ಶನ್, ಪದ್ಮನಾಭ, ಪ್ರಕಾಶ್, ಎಸ್.ಲಕ್ಷ್ಮೀನರಸಿಂಹ, ನಂಜನಗೂಡು ನಂಜುಂಡಸ್ವಾಮಿ, ಸುರೇಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಪ್ರಮಾಣವಚನ ಸ್ವೀಕಾರ

ಸರ್ಕಾರದಿಂದ ಉತ್ತರ ಕೇಳುವುದು ಅರಾಜಕತೆಯಲ್ಲ: ಜೈಲಿಗೂ ಹೋಗಲು ಸಿದ್ಧ; CJP ತಿರಂಗಾ ಮೆರವಣಿಗೆಗೂ ಮುನ್ನ ಅಭಿಜೀತ್ ದೀಪ್ಕೆ!

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು