ಚಾಮರಾಜನಗರ

ವ್ಯಾಜ್ಯಗಳ ಮಾಹಿತಿ ಕೇಂದ್ರ ಉದ್ಘಾಟನೆ

ಚಾಮರಾಜನಗರ: ನ್ಯಾಯಾಲಯಗಳಲ್ಲಿ ಕಕ್ಷಿದಾರರಿಗೆ ಆಗುತ್ತಿರುವ ವಿಳಂಬವನ್ನು ಆದಷ್ಟು ಕಡಮೆ ಮಾಡುವ ಉದ್ದೇಶದಿಂದ ಹೈಕೋರ್ಟ್ ಆದೇಶದಂತೆ ವ್ಯಾಜ್ಯಗಳ ಮಾಹಿತಿ ಪಡೆಯುವ ಹಾಗೂ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ವಿ.ಜಿ. ಸಾವಡಕರ್ ತಿಳಿಸಿದರು.
ನಗರದ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವ್ಯಾಜ್ಯಗಳ ಮಾಹಿತಿ ಪಡೆಯುವ ಕೇಂದ್ರ ಹಾಗೂ ನೋಂದಣಿ ಕೇಂದ್ರ  ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಗುಂಡ್ಲುಪೇಟೆ, ಕೊಳ್ಳೇಗಾಲ ತಾಲೂಕು ಕೇಂದ್ರಗಳಲ್ಲಿ ಮಾಹಿತಿ ಕೇಂದ್ರ ಇದ್ದು, ಅವು ತಾಲೂಕಿಗೆ ಮಾತ್ರ ಸೀಮಿತವಾಗಿವೆ, ಜಿಲ್ಲಾ ಕೇಂದ್ರದಲ್ಲಿ ಉದ್ಘಾಟನೆಯಾಗಿರುವುದರಿಂದ ಇಡೀ ಜಿಲ್ಲೆಯ ವ್ಯಾಜ್ಯಗಳ ಮಾಹಿತಿಯನ್ನು ಇಲ್ಲೆ ಪಡೆಯಬಹುದು ಎಂದರು.
ಕಕ್ಷಿದಾರರು ತಮ್ಮ ವ್ಯಾಜ್ಯ ಇರುವ ದಿನಾಂಕವನ್ನು ಮಾಹಿತಿ ಕೇಂದ್ರದಲ್ಲಿ ಪಡೆಯಬಹುದು, ಇದರಿಂದ ವಕೀಲರನ್ನು ಕಾಯುವುದು ತಪ್ಪಿ ಆಯಾ ದಿನಾಂಕದಂದು ಬಂದು ಕಲಾಪಗಳಲ್ಲಿ ಭಾಗವಹಿಸಬಹುದು, ಇದು ಕಕ್ಷಿದಾರರು ಹಾಗೂ ವಕೀಲರಿಗೆ ಉತ್ತಮ ವ್ಯವಸ್ಥೆ, ಜೊತೆಗೆ ನ್ಯಾಯಾಲಯದ ಆದೇಶವನ್ನು ಮಾಹಿತಿ ಕೇಂದ್ರದಲ್ಲಿ ಪಡೆಯಬಹುದು ಎಂದರು.
ಅ.1 ರಿಂದ ಅಯಾ ದಿನದ ನ್ಯಾಯಾಲಯದ ಆದೇಶವನ್ನು ಅಂದೇ ಪಡೆಯುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು, ಇದರಿಂದ ಕಾಯುವುದನ್ನು ಸಹ ತಪ್ಪಿಸಲಾಗುತ್ತಿದೆ. ಈ ವ್ಯವಸ್ಥೆ ಕಕ್ಷಿದಾರರು ಹಾಗೂ ವಕೀಲರಿಗೆ ಬಹಳ ಅನುಕೂಲವಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.  
ದಿನೇ ದಿನೆ ದೂರುಗಳ ಸಂಖ್ಯೆ, ಕಕ್ಷಿದಾರರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮಾಹಿತಿ ಹಾಗೂ ನೋಂದಣಿ ಬಹಳ ಉಪಯುಕ್ತವಾಗಿದ್ದು, ಈ ಕೇಂದ್ರದಿಂದ ಧಾರವಾಡ ಹಾಗೂ ಗುಲ್ಬರ್ಗ ವಿಭಾಗದ ಮಾಹಿತಿಯನ್ನು ಸಹ ಪಡೆಯಬಹುದು, ಇದರ  ಸಾರ್ವಜನಿಕರಿಗೆ ಅರಿವು ಮೂಡುವವರೆಗೆ ನ್ಯಾಯಾಲಯದ ಸಿಬ್ಬಂದಿಯೇ ಕೇಂದ್ರಗಳ ಮುಂದೆ ಇದ್ದು ತಿಳವಳಿಕೆ ಮೂಡಿಸುತ್ತಾರೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಪುಟ್ಟರಾಜು ಮಾತನಾಡಿ, ಇಡೀ ಜಿಲ್ಲೆಯ ವ್ಯಾಜ್ಯಗಳ ಬಗ್ಗೆ ಮಾಹಿತಿ ದೊರಕುವುದರಿಂದ ವಕೀಲರಿಗೆ ಬಹಳ ಅನುಕೂಲವಾಗಿದೆ. ಕಕ್ಷಿದಾರರಿಗೂ ಬಹಳ ಉಪಯುಕ್ತವಾಗಿರುವುದರಿಂದ ಕಡಿಮೆ ಅವಧಿಯಲ್ಲಿ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ ಎಂದರು.
ನ್ಯಾಯಾಧೀಶರಾದ  ಭೃಂಗೇಶ್ ಹಾಗೂ ವಿದ್ಯಾ ಇದ್ದರು, ನಾಗರಾಜ್ ನಿರೂಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!