ಚಿಕ್ಕಮಗಳೂರು

ನೂತನ ವಿದ್ಯುತ್ ಪರಿವರ್ತಕಕ್ಕೆ ಚಾಲನೆ

ಕೊಪ್ಪ: ಇಲ್ಲಿನ ಸಣ್ಣಕೆರೆ ಗ್ರಾಮದಲ್ಲಿ ಮೆಸ್ಕಾಂ ಅಳವಡಿಸಿದ ನೂತನ ವಿದ್ಯುತ್ ಪರಿವರ್ತಕಕ್ಕೆ ತಾಪಂ ಅಧ್ಯಕ್ಷೆ ಪದ್ಮವತಿ ರಮೇಶ್ ಸೋಮವಾರ ಚಾಲನೆ ನೀಡಿ ಗ್ರಾಮಸ್ಥರ ಉಪಯೋಗಕ್ಕೆ ಅರ್ಪಿಸಿದರು.
ನಂತರ ಸಾರ್ವಜನಿಕನ್ನು ಉದ್ದೇಶಿ ಮಾತನಾಡಿದ ಅವರು, ಈ ಗ್ರಾಮದಲ್ಲಿ ಕಳೆದ ಒಂದು ದಶಕ ದಿಂದ ಕಡಿಮೆ ಓಲ್ಟೇಜ್ ನಿಂದ ಇಲ್ಲಿನ ಗ್ರಾಮಸ್ಥರು ಮತ್ತು ಕೃಷಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಇದನ್ನು ಮನಗಂಡು ಶಾಸಕರ ಗಮನಕ್ಕೆ ತಂದು ಇದಕ್ಕೆ ಬೇಕಾದ 3ಲಕ್ಷ ಅನುದಾನವನ್ನು ಮಂಜೂರು ಮಾಡಿಸಿ ಗ್ರಾಮಕ್ಕೆ ಬೇಕಾದ ಪ್ರತ್ಯೇಕ ಮಾರ್ಗ ಮತ್ತು ವಿದ್ಯುತ್ ಪರಿವರ್ತಕವನ್ನು ಅಳವಡಿಸಲಾಗಿದ್ದು, ಇದರಿಂದ 100ಕ್ಕೂ ಹೆಚ್ಚು ಮನೆಗಳಿಗೆ ಹಾಗೂ ಕೃಷಿಕರಿಗೆ ಇದರಿಂದ ಅನುಕೂಲವಾಗಿರುವುದು ಸಂತಸ ತಂದಿದೆ ಎಂದು ಹರ್ಷವ್ಯಕ್ತ ಪಡಿಸಿದರು.
ಈ ಸಮಯದಲ್ಲಿ ಜಿ.ಪಂ. ಸದಸ್ಯೆ ಅನ್ನಪೂರ್ಣ ಚನ್ನಕೇಶವ, ಹರಂದೂರು ಗ್ರಾ.ಪಂ. ಸದಸ್ಯೆ ಶಶಿಧರ್, ಟಿಎಪಿಸಿಎಂಎಸ್‌ನ ಅಧ್ಯಕ್ಷ ಹೆಚ್.ಕೆ. ದಿನೇಶ್. ಮೆಸ್ಕಾಂ ಅಧಿಕಾರಿಗಳಾದ ಗೋಪಾಲಕೃಷ್ಣ,ನಾಗರಾಜ್, ಫಿರೋಜ್ ಕಾಮಗಾರಿಯ ಗುತ್ತಿಗೆದಾರ ಸತೀಶ್ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!