ಶಿವಮೊಗ್ಗ: ಕಾಳಿಕಾ ಪರಮೇಶ್ವರಿ ಕೋ-ಆಪರೇಟಿವ್ ಸೊಸೈಟಿಯು ಆರ್ಥಿಕವಾಗಿ ಹಿಂದುಳಿದ ಸದಸ್ಯರುಗಳ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಪ್ರತಿವರ್ಷದಂತೆ ಈ ಬಾರಿಯೂ ಬಡ ವಿದ್ಯಾರ್ಥಿ ಸಹಾಯಧನ ನೀಡಲಿದೆ.
ಆಸಕ್ತ ಅರ್ಹ ವಿದ್ಯಾರ್ಥಿಗಳು ತಮ್ಮ ಪೋಷಕರ ಷೇರು ಖಾತೆ ನಂಬರ್ ನಮೂದಿಸಿ ಜು.31ರೊಳಗೆ ಅರ್ಜಿ ಸಲ್ಲಿಸಬಹುದು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.70 ಹಾಗೂ ಪದವಿ, ಸ್ನಾತಕೋತ್ತರ ಪದವಿಯಲ್ಲಿ ಶೇ.60 ಫಲಿತಾಂಶ ಪಡೆದು ಉತ್ತೀರ್ಣ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.
ಅರ್ಹ ವಿದ್ಯಾರ್ಥಿಗಳು ತಮ್ಮ ಪೋಷಕರ ಸದಸ್ಯತ್ವದ ಷೇರು ಖಾತೆ ನಂಬರನ್ನು ಅಂಕಪಟ್ಟಿ ಹಿಂದೆ ನಮೂದಿಸಿ ಸಲ್ಲಿಸಲು ಆ. 14 ಕೊನೆ ದಿನ. ಮಾಹಿತಿಗಾಗಿ ದೂ.- 08182 224265 ಅಥವಾ 94812 00644 ಸಂಪರ್ಕಿಸಬಹುದು ಎಂದು ಸೊಸೈಟಿ ಅಧ್ಯಕ್ಷ ಎಸ್. ರಮೇಶ್ ಹೇಳಿದ್ದಾರೆ.