ಕ.ಪ್ರ.ವಾರ್ತೆ ಚಳ್ಳಕೆರೆ ಸೆ.13
ನಮ್ಮ ಹಿಂದಿನ ಕಾಲದಲ್ಲಿ ನಡೆದ ಘಟನೆಗಳನ್ನು ಇಂದಿಗೂ ಸಹ ನಾವು ತಿಳಿಯಲು ಸಾಧ್ಯವಾಗುತ್ತಿರುವುದು ಶಾಸನಗಳ ಸಹಾಯದಿಂದ ಅಂತಹ ಶಾಸನಗಳು ಇಂದು ದುಷ್ಟರ ಕೈಗಳಿಂದ ನಾಶವಾಗುತ್ತಿರುವುದನ್ನು ತಡೆಯುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ನಿವೃತ್ತ ಪ್ರಾಂಶುಪಾಲ ಹಾಗೂ ಸಂಶೋಧಕ ಬಿ. ರಾಜಶೇಖರಪ್ಪ ತಿಳಿಸಿದ್ದಾರೆ.
ಅವರು ಪಟ್ಟಣದ ಹೆಚ್‌ಪಿಪಿಸಿ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ ಶಾಸನಗಳ ಮಹತ್ವ ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾಡನಾಡಿದರು.
ಪಳೆಯುಳಿಕೆಗಳು ನಾಶ: ಆಧುನಿಕತೆ ಬೆಳೆಯುತ್ತ ಆದಿಕಾಲದ ಪಳೆಯುಳಿಕೆಗಳು ನಾಶವಾಗುತ್ತಿದ್ದು ಮುಂದಿನ ಪಿಳಿಗೆಯ ಮಕ್ಕಳಿಗೆ ರಾಜರ ಬಗ್ಗೆ ಹಾಗೂ ಅವರ ಆಳ್ವಿಕೆಯ ಬಗ್ಗೆ ತಿಳಿಸುವುದು ಕಷ್ಟವಾಗದಂತೆ ಶಾಸನಗಳು ರಾಜರ ಹಾಗೂ ಅವರ ಆಳ್ವಿಕೆಯ ಬಗ್ಗೆ ಸಾರುವ ಫಲಕಗಳಿಂದಂತೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಅಶೋಕನ ಶಾಸನಗಳು ಇಂದಿಗೂ ಸಹ ರಾಜನ ಆಡಳಿತ ಹಾಗೂ ಅವರ ಮನೆತನಗಳ ಬಗ್ಗೆ ನೈಜ್ಯವಾದ ವಿಷಯವನ್ನು ಸಾರುತ್ತವೆ ಎಂದರು.
ಚಿತ್ರದುರ್ಗ ಜಿಲ್ಲೆಯ ಕೆಲವೊಂದು ತಾಲೂಕುಗಳಲ್ಲಿ ಐತಿಹಾಸಿಕ ಕೂರುಹುಗಳು ಇಂದಿಗೂ ಸಹ ಆಳ್ವಿಕೆಯ ಬಗ್ಗೆ ಸಾಕ್ಷಿ ಚಿತ್ರಗಳಾಗಿವೆ, ಶಿಕ್ಷಣ ಕ್ಷೇತ್ರದಲ್ಲಿ ಇಂದಿಗೂ ಸಹ ಮಕ್ಕಳು ಶಾಸನಗಳ ಬಗ್ಗೆ ಅಧ್ಯಾಯ ಮಾಡುತ್ತಿದ್ದರು ಎಂದು ಹೇಳಿದರು.
ಮಾದ್ಯಮಗಳ ಪ್ರಭಾವ: ನಿವೃತ್ತ ಪ್ರಾಂಶುಪಾಲ ಹಾಗೂ ಸಾಹಿತಿ ಡಾ. ಮೀರಸಾಭಿಹಳ್ಳಿ ಶಿವಣ್ಣ ಮತನಾಡಿ, ಆಧುನಿಕ ಯುಗದಲ್ಲಿ ಮಾದ್ಯಮಗಳ ಪ್ರಭಾವ ಹೆಚ್ಚಾಗಿದ್ದು ವಿದ್ಯಾರ್ಥಿಗಳಲ್ಲಿ ಸಂಶೋಧನೆಯ ಮನಸು ಕಡಿಮೆಯಾಗುತ್ತಿದೆ.
ಕ್ಷೇತ್ರಗಳಿಗೆ ಬೇಟಿ ನೀಡಿ ನೈಜ್ಯವಾಗಿ ನಡೆದ ಘಟನೆಗಳನ್ನು ಅಧ್ಯಯನ ಮಾಡುವುದು ಕಡಿಮೆಯಾಗುತ್ತಿದ್ದು, ಶ್ರಮವಿಲ್ಲದೆ ಮಾಹಿತಿಯನ್ನು ಕಲೆಹಾಕುವ ಸಂಸ್ಕೃತಿ ಹೆಚ್ಚುತಿರುವುದು ಸಂಶೋಧನೆಯ ವರದಿಯಲ್ಲಿ ಪಕ್ವತೆ ಇಲ್ಲವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಮುದ್ದುರಂಗಪ್ಪ, ಕನ್ನಡ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಪ್ರೊ.ವೆಂಕಟೇಶ್, ಚಿತ್ತಯ್ಯ ಇತರರು ಈ ಸಂದರ್ಭದಲ್ಲಿ ಇದ್ದರು.