ಚಿತ್ರದುರ್ಗ

ಗುಡಿ ಗೋಪುರಗಳು ಬೇಡ ಕುಡಿಯುವ ನೀರು, ರಸ್ತೆ ಕೇಳಿ

ಭರಮಸಾಗರ: ವಚನಗಳು ಕನ್ನಡ ಸಾಹಿತ್ಯದ ಅನರ್ಘ್ಯ ರತ್ನಗಳು. ಅವುಗಳಿಂದ ಮಾನವನ ಬದುಕು ಸಾರ್ಥಕತೆ ಪಡೆದುಕೊಳ್ಳುತ್ತದೆ. ವಚನಕಾರರನ್ನು ಶ್ರಾವಣ ಸಂಜೆ ಕಾರ್ಯಕ್ರಮದ ಮೂಲಕ ಪರಿಚಯಿಸುವ ಕಾರ್ಯಕ್ರಮ ಈ ಭಾಗದ ಜನರಿಗೆ ಸ್ವಾಮೀಜಿಗಳು ನೀಡುತ್ತಿರುವ ದೊಡ್ಡ ವರವಾಗಿದೆ ಎಂದು ಲೋಕಸಭಾ ಸದಸ್ಯ ಬಿ.ಎನ್. ಚಂದ್ರಪ್ಪ ಅಭಿಪ್ರಾಯಪಟ್ಟರು.
ಸಮೀಪದ ನೆಲ್ಲಿಕಟ್ಟೆ ಗ್ರಾಮದಲ್ಲಿ ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಶಿವಾನುಭವ ಸಮಿತಿಯಿಂದ ಆಯೋಜಿಸಲಾಗಿದ್ದ 8ನೇ ದಿನದ ಶ್ರಾವಣ ಸಂಜೆ, ಶರಣ ಶರಣೆಯರ ತಾತ್ವಿಕ ಚಿಂತನಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದಲ್ಲಿ ಪ್ರತೀ 20 ನಿಮಿಷಕ್ಕೆ ಒಂದು ಮಗು ಶುದ್ಧ ನೀರಿನ ಕೊರತೆಯಿಂದ ಸಾವನಪ್ಪುತ್ತಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ವರದಿ ನೀಡಿದೆ. ಕಾರಣ ಕ್ಷೇತ್ರದ ಜನತೆ ಗುಡಿ ಗೋಪುರಗಳನ್ನು ಬಿಟ್ಟು ನೀರು, ರಸ್ತೆ ಇತರೆ ಸೌಲಭ್ಯದ ಬಗೆಗೆ ಹೆಚ್ಚು ಒಲವು ತೋರಬೇಕು ಎಂದು ಮನವಿ ಮಾಡಿದರು.  ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಎಂ. ಚಂದ್ರಪ್ಪ, ಎಚ್. ಎಂ. ಮಂಜುನಾಥ್, ಡಿ.ವಿ. ಶರಣಪ್ಪ, ಎನ್.ಟಿ. ರಾಜ್ ಕುಮಾರ್, ರಂಗಮ್ಮ, ಟಿ.ಜಿ. ಶೆಖರಪ್ಪ, ಶೈಲೇಶ್, ಚಂದ್ರಮ್ಮ, ಮಂಜುಳ, ಪುಷ್ಪಲತ, ಶರಣಪ್ಪ, ಉಪನ್ಯಾಸಕ ಸಿದ್ದೇಶ್, ಬಿ.ಕೆ. ಶರಣಪ್ಪ, ಶಿಕ್ಷಕ ಆರ್. ಶಿವಕುಮಾರ್ ಕುರ್ಕಿ ಇದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT