ಹೊಸದುರ್ಗ: ಹೊಸದುರ್ಗದ ಜೂನಿಯರ್ ಕಾಲೇಜು ಆವರಣದಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಯ್ಯ ಚಾಲನೆ ನೀಡಿದರು.
ನಂತರ ಮಾತನಾಡಿ ದೃಶ್ಯ ಮಾಧ್ಯಮಗಳ ಹಾವಳಿಯಲ್ಲಿ ಇತ್ತೀಚೆಗೆ ಓದುವ ಮನೋಭಾವನೆ ಕಡಿಮೆಯಾಗುತ್ತಿದೆ. ಪತ್ರಿಕೆಗಳನ್ನು, ಪುಸ್ತಕಗಳನ್ನು ಓದುವುರಿಂದ ಏಕಾಗ್ರತೆ, ಶಾಂತ ಮನೋಭಾವನೆಯನ್ನು ಹೊಂದಬಹುದಾಗಿದೆ ಎಂದರು.
ಸಾಹಿತಿ ಬಾಗೂರು ನಾಗರಾಜಪ್ಪ, ಹಂಪಿ ಕನ್ನಡ ವಿವಿಯ ಪ್ರಸಾರಾಂಗ ಸಹ ನಿರ್ದೇಶಕ ರವೀಂದ್ರ ಮಾತನಾಡಿ ಕನ್ನಡ ವಿ.ವಿ ಪ್ರಕಟಿಸಿರುವ ಸಂಶೋಧನಾ, ಜಾನಪದ, ಸಾಹಿತ್ಯ ಕ್ಷೇತ್ರದ ಪುಸ್ತಕಗಳು ಜನಸಾಮಾನ್ಯರಿಗೆ ತಲುಪುವ ಉದ್ದೇಶದಿಂದ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಪರುಶುರಾಮಪ್ಪ, ಕಸಾಪ ಮಾಜಿ ಅಧ್ಯಕ್ಷ ಲೋಕೇಶ್ವರಪ್ಪ, ಕೋಶಾಧ್ಯಕ್ಷ ಓಂಕಾರಪ್ಪ, ಹಂಪಿ ಕನ್ನಡ ವಿವಿಯ ಕೃಷ್ಣಕುಮಾರ್, ಮು.ಶಿ. ಜಗದೀಶ್, ಕಸಾಪ ಕಾರ್ಯದರ್ಶಿಗಳಾದ ಮಂಜುನಾಥ್, ಕೇಶವಮೂರ್ತಿ, ಬಿಆರ್‌ಪಿ ಅಜ್ಜಯ್ಯ, ಕನ್ನಡ ಶಿಕ್ಷಕ ಚಿದಾನಂದ್, ಉಪನ್ಯಾಸಕರು ಹಾಜರಿದ್ದರು.