ಹೊಸದುರ್ಗ: ಇತ್ತೀಚಿನ ದಿನಗಳಲ್ಲಿ ತಾಂತ್ರಿಕತೆ ಬೆಳದಂತೆಲ್ಲಾ ಮನುಷ್ಯನ ಜೀವನ ಒತ್ತಡಕ್ಕೆ ಸಿಲುಕುತ್ತಿದೆ. ಹಾಗಾಗಿ ಧಾರ್ಮಿಕ ಸಂಸ್ಕಾರಗಳು ಮನುಷ್ಯನ ಆತ್ಮ ಸಂತೋಷವನ್ನುಂಟು ಮಾಡಬಲ್ಲವು ಎಂದು ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿಸ್ವಾಮಿಗಳು ತಿಳಿಸಿದರು.
ತಾಲೂಕಿನ ಕುಂದೂರು ಮದಾಂಜನೇಯ ಸ್ವಾಮಿ ದೇಗುಲದ ಅಡಿಗಲ್ಲು ನೆರವೇರಿಸಿ ಮಾತನಾಡಿ, ಸಂತೋಷ ಕಳೆದುಕೊಂಡರೆ ಆರೋಗ್ಯ ಕೆಡುತ್ತಿದೆ. ಇಂತಹ ಒತ್ತಡಗಳನ್ನು ಬದಿಗಿರಿಸಿ ಸಮಚಿತ್ತದಿಂದ ಬಾಳುವಂತಹ ಮನೋಭಾವ ಬೆಳೆಸುವಲ್ಲಿ ಧಾರ್ಮಿಕ ಶ್ರದ್ಧಾಕಾರ್ಯಗಳು ಸಹಕಾರಿಯಾಗಿವೆ ಎಂದರು.
ಜಿಲ್ಲಾ ಮಟ್ಟದ ಉಪ್ಪಾರ ಸಮಾಜದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಿರಿಯೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುಡಿ ನಿರ್ಮಾಣದ ಶಿಲ್ಪಿ ಮಾಸ್ತಪ್ಪ, ಗ್ರಾಮದ ಮುಖಂಡರಾದ ಹನುಮಂತಪ್ಪ, ಲಕ್ಷ್ಮಣಪ್ಪ, ರಂಗಪ್ಪ, ಹನುಮಂತಪ್ಪ, ಕರಿಯಪ್ಪ, ಈಶ್ವರಪ್ಪ, ಡಾ.ಪರಪ್ಪ, ನಿರಂಜನ್, ಜಿ.ಆರ್. ಮಂಜುನಾಥ್ ಮತ್ತಿತರರು ಹಾಜರಿದ್ದರು.
--
ಸರ್ಕಾರಿ ಕಾಲೇಜು ಚಾಂಪಿಯನ್
ಚಿತ್ರದುರ್ಗ: ಹಿರಿಯೂರಿನ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ನಡೆದ ದಾವಣಗೆರೆ ವಿವಿ ಅಂತರ ಕಾಲೇಜು ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜು 97 ಅಂಕ ಗಳಿಸಿ ಚಾಂಪಿಯನ್‌ಶಿಪ್ ಆಗಿದೆ.
ಪ್ರಶಸ್ತಿ ಪಡೆದ ತಂಡಕ್ಕೆ ಕಾಲೇಜಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಪ್ರಾಂಶುಪಾಲ ಪ್ರೊ.ಎಚ್. ಲಿಂಗಪ್ಪ ಹಾಗೂ ಕಾಲೇಜು ಸಿಬ್ಬಂದಿ ವರ್ಗ ಶುಭ ಹಾರೈಸಿದರು.