ಚಿತ್ರದುರ್ಗ

ಹೈಸ್ಕೂಲ್ ಕ್ರೀಡಾಕೂಟ ವಿವಾದದಲ್ಲಿ ಅಂತ್ಯ

ಶ್ರೀರಾಂಪುರ: ಕಳೆದ 2 ದಿನಗಳಿಂದ ಪಟ್ಟಣದ ಸರ್ಕಾರಿ ಶಾಲಾ ಆವರಣದಲ್ಲಿ ನೆಡೆಯುತ್ತಿರುವ ಶ್ರೀರಾಂಪುರ ಹೋಬಳಿ ಮಟ್ಟದ ಪ್ರೌಡಶಾಲೆಗಳ  ಕ್ರೀಡಾಕೂಟ ಗದ್ದಲದ ನಡುವೆ ಬುಧವಾರ ಮುಕ್ತಾಯವಾಯಿತು.
ಕಬ್ಬಡಿ ಪಂದ್ಯದ ಫೈನಲ್ ಆಟದಲ್ಲಿ ವೆಂಗಳಾಪುರ ಶಾಲೆ ಹಾಗೂ ಶ್ರೀರಾಂಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ತಂಡಗಳು ಆಟವಾಡುತ್ತಿದ್ದವು. ಔಟ್ ನೀಡುವ ವಿಚಾರದಲ್ಲಿ ತೀರ್ಪುಗಾರರು ಹಾಗೂ ಶ್ರೀರಾಂಪುರ ಕಾಲೇಜಿನ  ತಂಡದ ಅಭಿಮಾನಿ ಗುಂಪಿನ ನಡುವೆ ಘರ್ಷಣೆ ಉಂಟಾಯಿತು. ಸರಿಯಾಗಿ ತೀರ್ಪು ನೀಡುತ್ತಿಲ್ಲ ಹಾಗಾಗಿ ನಾವು ಆಟ ನೆಡೆಸಲು ಬಿಡುವುದಿಲ್ಲ ಎಂದು ಅಭಿಮಾನಿಗಳು ಹಟ ಹಿಡಿದರು. ತೀರ್ಪುಗಾರರ ವಿರುದ್ಧ ಹರಿಹಾಯ್ದರು. ಇದರಿಂದ ಮನನೊಂದ ತೀರ್ಪುಗಾರರು ನಾವು ಆಟ ಆಡಿಸುವುದಿಲ್ಲ ಎಂದು ತೆರಳಿದರು. ಕ್ರೀಡಾಕೂಟದ ಸಂಘಟಕರು ಪೊಲೀಸ್ ನೆರವಿನಲ್ಲಿ ಎರಡು ತಂಡಗಳ ವ್ಯವಸ್ಥಾಪಕರನ್ನು ಕರೆದು ಮನಮೊಲಿಸಿ ಆಟ ನೆಡೆಸಲು ಮುಂದಾದರೂ ದೈಹಿಕ ಶಿಕ್ಷಕರು ಸ್ಥಳೀಯರ ಆಕ್ರೋಶ ಕಂಡು ಆಟ ನೆಡೆಸಲು ಮುಂದೆ ಬಾರದ ಕಾರಣ  ಕಬಡಿ ಪಂದ್ಯ ಹೊರತುಪಡಿಸಿ ಎಲ್ಲಾ ಆಟಗಳ ಫಲಿತಾಂಶ ಪ್ರಕಟಿಸಿ ಕ್ರೀಡಾಕೂಟ ಮುಕ್ತಾಯಗೊಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT