ದಾವಣಗೆರೆ

ಮಾರ್ಗದರ್ಶಕರಾಗಿದ್ದ ಮಾಹಾಂತ ಸ್ವಾಮೀಜಿ

ಹೊನ್ನಾಳಿ: ಇಡೀ ವೀರಶೈವ ಪಂಚಮಸಾಲಿ ಸಮಾಜದ ಮಾರ್ಗದರ್ಶಕರಾಗಿದ್ದ ಡಾ. ಮಾಹಾಂತ ಶಿವಾಚಾರ್ಯ ಮಹಾಸ್ವಾಮೀಜಿಯವರ ಅಗಲಿಕೆ ಇಡೀ ಸಮಾಜಕ್ಕೆ ತುಂಬಲಾರದ ನಷ್ಟವವಾಗಿದೆ ಎಂದು ಪಂಚಮಸಾಲಿ ಸಮಾಜದ ತಾಲೂಕು ಘಟಕದ ಗೌರವಾಧ್ಯಕ್ಷ ಡಾ. ರಾಜ್ ಕುಮಾರ್ ಹೇಳಿದರು.
ಸೋಮವಾರ ಸ್ಥಳೀಯ ವೀರಭದ್ರೇಸ್ವರ ದೇವಾಲಯದ ಸಭಾಂಗಣದಲ್ಲಿ ಸ್ವಾಮೀಜಿಯವರ ಲಿಂಗೈಕ್ಯ ನಿಮಿತ್ತ ಆಯೋಜಿಸಲಾಗಿದ್ದ ಗುರು ನಮನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ 2008ರಲ್ಲಿ ಇಡೀ ಸಮಾಜಕ್ಕೆ ಧಾರ್ಮಿಕ ಸ್ವಾತಂತ್ರ್ಯವನ್ನು ತಂದು ಕೊಟ್ಟ ಪರಮಪೂಜ್ಯರು ಪೀಠಾರೋಹಣವಾದ 5 ನೇ ವರ್ಷದ ವಾರ್ಷಿಕೋತ್ಸವ ಸಿದ್ಧತೆಯಲ್ಲಿರುವಾಗಲೇ ಸ್ವಾಮೀಜಿಯವರು ಇಡೀ ಭಕ್ತಸಾಗರವನ್ನು ಅಗಲಿದ್ದಾರೆ ಎಂದರು.
ವೀರಶೈವ ಪಂಚಮನಾಲಿ ಸಮಾಜದ ಜಿಲ್ಲಾ ಉಪಾಧ್ಯಕ್ಷ ನ್ಯಾಮತಿ ಗುರುಶಾಂತಪ್ಪ, ತಾಲೂಕು ಘಟಕದ ಮಾಜಿ ಅಧ್ಯಕ್ಷ ಕೆ. ಸೋಮಶೇಖರಪ್ಪ, ರಾಜ್ಯ ಯುವ ಘಟಕದ ತಾಲೂಕು ಅಧ್ಯಕ್ಷ ಪಟ್ಟಣ ಶೆಟ್ಟಿ ಪರಮೇಶ್ ತಾಲೂಕು ಸಮಾಜದ ಪ್ರಧಾನ ಕಾರ್ಯದರ್ಶಿ  ಅಶೋಕ ಅಧ್ಯಕ್ಷ ಬೆನಕನಹಳ್ಳಿ ಚೆನ್ನಬಸಪ್ಪ ಮಾತನಾದರು.
ಪಂಚಮಸಾಲಿ ಸಮಾಜದ ಜಿ. ದೊಡ್ಡಪ್ಪ, ಪೇಟೆ ಸುರೇಶ್, ಮೃತ್ಯುಂಜನ ಪಾಟೀಲ್ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!