ದಾವಣಗೆರೆ

ಪರೀಕ್ಷಾ ಕೇಂದ್ರದಲ್ಲಿ ನಕಲು: ಪ್ರತಿಭಟನೆ

ಹೊನ್ನಾಳಿ: ಹೊನ್ನಾಳಿಯ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ನವೋದಯ ಪ್ರವೇಶ ನಡೆದ ಸಂದರ್ಭದಲ್ಲಿ ಸ್ಥಳೀಯ ಸರ್ಕಾರಿ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿನ ಕೊಠಡಿ ನಂ.1ರಲ್ಲಿನ ಮೇಲ್ವಿಚಾರಕರು  ಮಕ್ಕಳಿಗೆ ಉತ್ತರ ಹೇಳಿಕೊಡುವ ಮೂಲಕ ನಕಲು ಮಾಡಿಸುತ್ತಿದ್ದಾರೆ ಎಂದು ಹಲವಾರು ಜನ ಪೋಷಕರು ಆರೋಪಿಸಿ ಪರೀಕ್ಷಾ ಕೇಂದ್ರದ ಮುಂದೆ ಕೆಲಕಾಲ ಪ್ರತಿಭಟನೆ ನಡೆಸಿದರು.
ಸುದ್ದಿ ತಿಳಿದ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕಿ ಸರಸ್ವತಿ ಹಾಗೂ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಚನ್ನಕೇಶವ ಹಾಗೂ ಸಬ್ ಇನ್ಸ್‌ಪೆಕ್ಟರ್ ಬಿ.ಜಿ. ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪೋಷಕರನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಈ ಸಂದರ್ಭ ಪರೀಕ್ಷಾ ಕೇಂದ್ರದ ಅಧೀಕ್ಷಕಿ ಸರಸ್ವತಿ ಮಾತನಾಡಿ, ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು  ಮಕ್ಕಳ ಉತ್ತರ ಪತ್ರಿಕೆಯಲ್ಲಿನ ನೋಂದಣಿ ಸಂಖ್ಯೆ ಮುಂತಾದ ಕೆಲ ಕಚೇರಿ ಮಾಹಿತಿಗಳನ್ನು ಸರಿಯಾದ  ರೀತಿಯಲ್ಲಿ ಭರ್ತಿ ಮಾಡುವ ಬಗ್ಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದರೇ ಹೊರತು ಅವರು ಮಕ್ಖಳಿಗೆ ಯಾವುದೇ ರೀತಿಯ ಉತ್ತರ ಹೇಳಿಕೊಡುವುದಾದಲಿ ಅಥವಾ ನಕಲು ಮಾಡಿಸುವುದಾಗಿ ಮಾಡಿಲ್ಲ ಎಂದು ಸ್ಪಷ್ಟಣೆ  ನೀಡಿದರು.
ಮರು ಪರೀಕ್ಷೆಗೆ ಆಗ್ರಹ: ಆದರೆ ಹಲವಾರು ಜನ ಪೋಷಕರು ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡಿಸಿದ್ದಾರೆ ಎಂದು ಆರೋಪಿಸಿ ಇಂದಿನ ಪರೀಕ್ಷೆಯನ್ನು ರದ್ದುಗೊಳಿಸಿ ಮಕ್ಕಳಿಗೆ ಮರುಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿ ಸ್ಥಳೀಯ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಭಾನುವಾರ ನಡೆದ ನವೋದಯ ಪ್ರವೇಶ ಪರೀಕ್ಷೆಯಲ್ಲಿ  ಪರೀಕ್ಷಾ ಕೇಂದ್ರ 2ರ ಭಾರತೀಯ ವಿದ್ಯಾಸಂಸ್ಥೆಯಲ್ಲಿ 396 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರಲ್ಲಿ 44 ಜನ ಗೈರು ಹಾಜರಾಗಿದ್ದಾರೆ. ಮೂರು ಕೇಂದ್ರ ಪೇಟೆ ಸರ್ಕಾರಿ ಪ್ರಾಥಮಿಕ  ಶಾಲೆಯಲ್ಲಿ 393 ಮಕ್ಕಳ ಪೈಕಿ 38 ಜನ ಮಕ್ಕಳು ಗೈರು ಹಾಜರಾಗಿದ್ದು ಒಟ್ಟು 1211 ಮಕ್ಕಳು ಪರೀಕ್ಷೆಗೆ ಕುಳಿತಿದ್ದರು. ಈ ಪೈಕಿ 140 ಜನ ಮಕ್ಕಳು ಗೈರುಹಾಜರಾಗಿದ್ದು ಒಟ್ಟು 1071 ಜನ ಮಕ್ಕಳು ಭಾನುವಾರ   ನಡೆದ ಪರೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಈ ಪರೀಕ್ಷೆಗಾಗಿ ಒಟ್ಟು 64 ಜನ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಕ್ಷೇತ್ರ ಸಂಪನ್ಮೂಲಾಧಿಕಾರಿ ನಿರಂಜನಮೂರ್ತಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!