ದಾವಣಗೆರೆ

ಹೈದರಾಬಾದ್ ಸ್ಫೋಟ ಖಂಡಿಸಿ ಪ್ರತಿಭಟನೆ

ದಾವಣಗೆರೆ: ಹೈದ್ರಾಬಾದ್‌ನ ಸರಣಿ ಸ್ಪೋಟ ಖಂಡಿಸಿ, ಅಮಾಯಕರನ್ನು ಬಲಿಪಡೆದ ಉಗ್ರರನ್ನು ತಕ್ಷಣ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿ ಪಡಿಸಲು ಒತ್ತಾಯಿಸಿ ಹಿಂದು ಜಾಗರಣಾ ವೇದಿಕೆ ಮತ್ತಿತರೆ ಹಿಂದು ಪರ ಸಂಘಟನೆಗಳು ನಗರದಲ್ಲಿ ಶುಕ್ರವಾರ ಜಯದೇವ ವೃತ್ತದಲ್ಲಿ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟಿಸಿದರು.
ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ಆರಂಭಿಸಿದ ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರು, ಹೈದ್ರಾಬಾದ್ ಬಾಂಬ್ ಸ್ಫೋಟಕ್ಕೆ ಕಾರಣರಾದ ದುಷ್ಕರ್ಮಿಗಳು, ಉಗ್ರರ ಸಂಘಟನೆಗಳು ಯಾವುದೇ ಆಗಿದ್ದರೂ ಅಂತಹವರನ್ನು ತಕ್ಷಣವೇ ಪತ್ತೆ ಮಾಡಿ, ಕಠಿಣ ಶಿಕ್ಷೆಗೆ ಗುರಿಪಡಿಸಲು ಒತ್ತಾಯಿಸಿ ಘೋಷಣೆ ಕೂಗಿದರು.
ಉಗ್ರರ ಪ್ರತೀಕಾರ: ಹಿಂಜಾವೇ ವಿಭಾಗೀಯ ಸಂಚಾಲಕ ಎಸ್.ಟಿ. ವೀರೇಶ ಮಾತನಾಡಿ, ಮುಂಬೈ ದಾಳಿ ವೇಳೆ ಜೀವಂತ ಸೆರೆ ಸಿಕ್ಕಿದ್ದ ಉಗ್ರ ಅಜ್ಮಲ್ ಕಸಬ್ ಹಾಗೂ ಸಂಸದ್ ಮೇಲಿನ ದಾಳಿ ಪ್ರಕರಣದ ಅಪರಾಧಿ ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ವಿಧಿಸಿದ್ದಕ್ಕೆ ಪ್ರತಿಕಾರ ಕೈಗೊಳ್ಳುವುದಾಗಿ ಉಗ್ರರು ಹೇಳಿದ್ದರೂ, ಅದನ್ನು ಗಂಭೀರವಾಗಿ ಪರಿಗಣಿಸದ್ದೇ ನಿನ್ನೆಯ ಘಟನೆಗೆ ಕಾರಣ ಎಂದರು.
 ಉಗ್ರರು ಜೀವಂತ ಸೆರೆ ಸಿಕ್ಕರೂ, ಅಂತಹವರ ವಿರುದ್ಧದ ವಿಚಾರಣೆ ಮುಗಿಯುತ್ತಿದ್ದಂತೆ ಗಲ್ಲಿಗೇರಿಸುವ ಮೂಲಕ ಇತರರಿಗೂ ಎಚ್ಚರಿಕೆಯ ಸಂದೇಶ ಸಾರುವ ಕೆಲಸ ಸರ್ಕಾರ ಮಾಡುತ್ತಿಲ್ಲ. ಇದರಿಂದಾಗಿ ಅಮಾಯಕರು ಇಂತಹ ಸರಣಿ ಬಾಂಬ್ ಸ್ಫೋಟದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ದೂರಿದರು.
ಕೇಂದ್ರದ ವೈಫಲ್ಯ: ಸಂಘಟನೆ ಮುಖಂಡ ದೀಪಕ್ ಕಾನಡೆ ಮಾತನಾಡಿ, ಕೇಂದ್ರದ ವೈಫಲ್ಯದಿಂದಾಗಿ ನಿನ್ನೆಯ ಘಟನೆ ನಡೆದಿದೆ. ಕೇಂದ್ರವು ಸ್ವಲ್ವವಾದರೂ ಎಚ್ಚರ ವಹಿಸಿದ್ದರೆ ಇಂತಹ ಅನಾಹುತ ಸಂಪೂರ್ಣ ತಡೆಗಟ್ಟಬಹುದಿತ್ತು. ಪೈಶಾಚಿಕ ಮನೋಭಾವದ ಉಗ್ರರನ್ನು ಮಟ್ಟ ಹಾಕಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ರಾಜಶೇಖರ ಮಾತನಾಡಿ, ಕಸಬ್, ಅಫ್ಜಲ್‌ಗೆ ಗಲ್ಲಿಗೇರಿಸಿದ ನಂತರ ಉಗ್ರರು ಬಾಲ ಬಿಚ್ಚುತ್ತಿದ್ದು, ಅಂತಹವರನ್ನು ಬೇರು ಮಟ್ಟದಿಂದ ನಿರ್ಮೂಲನೆ ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಸತೀಶ ಪೂಜಾರಿ, ಪೈಲ್ವಾನ್ ಶಿವಕುಮಾರ, ರಾಘು, ಪ್ರಶಾಂತ, ಉಮೇಶ ಕತ್ತಿ, ಮಲ್ಲಿಕಾರ್ಜುನ, ಹರೀಶ, ಶಂಕರಗೌಡ, ನಾಗರಾಜ, ರವಿ, ಸಂತೋಷ, ಪ್ರತಾಪ ಇದ್ದರು.
ಮೌನಾಚರಣೆ: ಇದಕ್ಕೂ ಮುನ್ನ ಹೈದ್ರಾಬಾದ್ ಸ್ಫೋಟದಲ್ಲಿ ಬಲಿಯಾದ ಅಮಾಯಕರ ಸ್ಮರಣಾರ್ಥ 2 ನಿಮಿಷ ಮೌನ ಆಚರಿಸಲಾಯಿತು. ಹೈದ್ರಾಬಾದ್ ಸರಣಿ ಸ್ಫೋಟ ಖಂಡಿಸಿ ರಸ್ತೆ ತಡೆ ನಡೆಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!