ದಾವಣಗೆರೆ: ಕನ್ನಡ ಭಾಷೆ-ಸಾಧ್ಯತೆ- ಸ್ವರೂಪ ವಿಷಯದ ಕುರಿತಂತೆ ದಾವಣಗೆರೆ ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಯುಜಿಸಿ ನೆರವಿನಲ್ಲಿ ಮಾ.1ರಿಂದ ಎರಡು ದಿನಗಳ ಕಾಲ ರಾಜ್ಯ ಮಟ್ಟದ ಕಾರ್ಯಾಗಾರ ನಡೆಯಲಿದೆ.
ಶುಕ್ರವಾರ ಬೆಳಿಗ್ಗೆ 10ಕ್ಕೆ ಪ್ರೊ. ಮಹಮ್ಮದ್ ಜಾವಿದ್ ಅಧ್ಯಕ್ಷತೆಯಲ್ಲಿ ಡಾ. ಕೆ.ವಿ. ನಾರಾಯಣ ಕಾರ್ಯಕ್ರಮ ಉದ್ಘಾಟಿಸುವರು. ಕಾಸಲ ವಿಠಲ್, ಎ.ಸಿ. ಜಯಣ್ಣ, ಎ.ಜಿ. ಮಂಜುನಾಥ, ಚಿಕ್ಕೋಳ ಈಶ್ವರಪ್ಪ ಪಾಲ್ಗೊಳ್ಳುವರು. ಬೆಳಿಗ್ಗೆ 11.45ರಿಂದ ಪ್ರೊ. ಬಿ.ಪಿ. ವೀರೇಂದ್ರಕುಮಾರ, ಡಾ. ಬಿ.ವಿ. ಹೇಮಾನಂದ, ಡಾ. ಬಿ.ವಿ. ಹೇಮಾನಂದ ಉಪನ್ಯಾಸ ನೀಡುವರು.