ದಾವಣಗೆರೆ

ನಾಳೆಯಿಂದ ಜಿಲ್ಲಾ ನಾಟಕೋತ್ಸವ

ದಾವಣಗೆರೆ: ಶಿವಮೊಗ್ಗ ರಂಗಾಯಣದಿಂದ ದಾವಣಗೆರೆ ಜಿಲ್ಲಾ ಕಾಲೇಜು ವಿದ್ಯಾರ್ಥಿಗಳ ನಾಟಕೋತ್ಸವ ಜ.24ರಿಂದ ಮೂರು ದಿನಗಳ ಕಾಲ ಹೊನ್ನಾಳಿ ಪಟ್ಟಣದ ಭಾರತೀಯ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಲಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಂಗಾಯಣ ನಿರ್ದೇಶಕ ಹೊ.ನ. ಸತ್ಯ, ಜ.24ರಂದು ಸಂಜೆ 7.30ಕ್ಕೆ ಹಿರೇಕಲ್ಮಠದ ಒಡೆಯರ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಾಮಿನಾಳು ಮಠದ ಸಿದ್ಧಪಾದ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ, ಪಪಂ ಪ್ರಭಾರ ಅಧ್ಯಕ್ಷೆ ಸುಶೀಲಮ್ಮ ದುರುಗಪ್ಪ ಅಧ್ಯಕ್ಷತೆಯಲ್ಲಿ ಹೊ.ನ. ಸತ್ಯ ನಾಟಕೋತ್ಸವವನ್ನು ಉದ್ಘಾಟಿಸುವರು ಎಂದರು.
ನಾಟಕ ಪ್ರದರ್ಶನ: ಭಾರತೀಯ ವಿದ್ಯಾಸಂಸ್ಥೆ ಅಧ್ಯಕ್ಷ ಲಕ್ಷ್ಮಣಶ್ರೇಷ್ಠಿ ವೈಶ್ಯರು, ಕಸಾಪ ತಾಲೂಕು ಅಧ್ಯಕ್ಷ ಎಂ.ಎಸ್. ರೇವಣಪ್ಪ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಹರಿಹರ ಎಸ್‌ಜೆವಿಪಿ ಡಿ.ಇಡಿ ಕಾಲೇಜಿನ ವಿದ್ಯಾರ್ಥಿಗಳು ವಾರ್ಡ್ ನಂ.6 ನಾಟಕ ಪ್ರದರ್ಶಿಸುವರು. ಜ.25ರ ಸಂಜೆ 7.30ಕ್ಕೆ ಡಾ. ಚನ್ನೇಶ ಹೊನ್ನಾಳಿ, ಕತ್ತಿಗೆ ಗಂಗಾಧರಪ್ಪ ಅತಿಥಿಯಾಗಿ ಭಾಗವಹಿಸಲಿದ್ದು, ಜಗಳೂರು ಸಪ್ರದ ಕಾಲೇಜು ವಿದ್ಯಾರ್ಥಿಗಳು ಹಿಂಗಾದ್ರೆ ಹೆಂಗ... ನಾಟಕ ನಡೆಸಿಕೊಡಲಿದ್ದಾರೆ ಎಂದು ಅವರು ತಿಳಿಸಿದರು.
ಚೋಮನ ದುಡಿ ನಾಟಕ: ಜ.26ರ ಸಂಜೆ ಬಿ.ಎಂ. ಸಿದ್ದಯ್ಯ, ಕೆ.ವಿ. ದೇವೇಂದ್ರಪ್ಪ ಭಾಗವಹಿಸಲಿದ್ದು, ಹೊನ್ನಾಳಿ ಸಪ್ರದ ಕಾಲೇಜಿನ ವಿದ್ಯಾರ್ಥಿಗಳು ಚೋಮನ ದುಡಿ ನಾಟಕ ಪ್ರದರ್ಶಿಸಲಿದ್ದಾರೆ. ಜ.27ರ ರಂಗಾಯಣದ ಹೊ.ನ. ಸತ್ಯ ಅಧ್ಯಕ್ಷತೆ ಸಮಾರೋಪದಲ್ಲಿ ಸಚಿವ ಎಂ.ಪಿ. ರೇಣುಕಾಚಾರ್ಯ ಪಾಲ್ಗೊಳ್ಳಲಿದ್ದು, ಬಿದರಹಳ್ಳಿ ನರಸಿಂಹಮೂರ್ತಿ ಸಮಾರೋಪ ಭಾಷಣ ಮಾಡುವರು. ಡಾ. ಎಚ್.ಪಿ. ರಾಜಕುಮಾರ, ಚನ್ನಕೇಶವ ಟಿ. ಟಿಂಗರಕರ್ ಭಾಗವಹಿಸುವರು. ದಾವಣಗೆರೆ ವಿವಿಧ ಕಾಲೇಜುಗಳಿಂದ ಚೋರ ಚರಣದಾಸ ನಾಟಕ ಪ್ರದರ್ಶಿಸಲಿದ್ದಾರೆ ಎಂದು ಅವರು ವಿವರಿಸಿದರು.
25 ಮತ್ತು 26ರಂದು ಸುರೇಖಾ ಹೆಗಡೆ, ಕೆ.ಆರ್. ಸುಬ್ರಹ್ಮಣ್ಯ, ಮಂಜುಳಾರಿಂದ ರಂಗಗೀತೆಗಳ ಗಾಯನವಿದೆ. ರಾಘವೇಂದ್ರ ಪ್ರಭು ತಬಲಾ, ಸಿದ್ದಪ್ಪ ಕ್ಯಾಸಿಯೋ ಸಾಥ್ ನೀಡಲಿದ್ದಾರೆ. ಕನಿಷ್ಟ 2 ರಂಗ ಗೀತೆಗಳನ್ನಾದರೂ ಪ್ರತಿ ಶಿಬಿರಾರ್ಥಿಗಳು ಕಲಿಯುವುದನ್ನು ಕಡ್ಡಾಯಗೊಳಿಸಿದೆ. ರಂಗಾಯಣದಿಂದ ವಿದ್ಯಾರ್ಥಿ, ಯುವಜನ, ಸಾರ್ವಜನಿಕರಲ್ಲಿ ಸದಭಿರುಚಿ, ಸದ್ಭಾವನೆ, ಸಂಸ್ಕೃತಿ ಜೊತೆ ರಂಗಾಸಕ್ತಿ ಮೂಡಿಸುವ ಉದ್ದೇಶದಿಂದ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ರಂಗ ನಿರ್ದೇಶಕರಾದ ಎಸ್.ಎಸ್. ಸಿದ್ದರಾಜು, ಗಣೇಶ, ಶಶಿಕಲಾ, ನಾಗರಾಜ ಅತ್ತಿಗೆರೆ, ಲಕ್ಷ್ಮಣ ಪೀರಗಾರ್ ಮತ್ತಿತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ? ಮನೆ ಮುಂದೆ ಯುವತಿ ಪ್ರತಿಭಟನೆ!-Video

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!

‘ಮೋದಿಗೆ ಅಮೆರಿಕ ಬೇಕಿಲ್ಲ, ಆದರೆ ಅಮೆರಿಕಕ್ಕೆ ಮೋದಿ ಬೇಕು'.. 'ನಿಮ್ಮನ್ನು ಬಳಸಿಕೊಂಡು ಕೈ ಬಿಡುತ್ತಾರೆ': ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಎಚ್ಚರಿಕೆ