ದಾವಣಗೆರೆ

ಮಹಾನ್ ವ್ಯಕ್ತಿಗಳ ಶ್ರಮವಿದೆ

ಹೊನ್ನಾಳಿ: ಭಾರತ ಸರ್ವತಂತ್ರ ಗಣರಾಜ್ಯವಾದ ಹಿಂದೆ ದೇಶದ ಮಹಾನ್ ವ್ಯಕ್ತಿಗಳ ಅವಿರತ ಶ್ರಮದ ಫಲವಿದೆ. ಗಣರಾಜ್ಯದ ಉದ್ದೇಶಗಳು ಸಾಕಾರಗೊಳ್ಳಬೇಕಾದರೆ ಅಡಳಿತದಲ್ಲಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವಪಾಲನೆಯಾಗಬೇಕು ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಕ್ರೀಡಾಂಗಣದಲ್ಲಿ ಶನಿವಾರ ಅದ್ಧೂರಿಯಾಗಿ ಆಚರಿಸಲಾದ ದೇಶದ 64ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಚಿವರು, ಈ ದೇಶಕ್ಕಾಗಿ ಹೋರಾಟ ಮಾಡಿ ತ್ಯಾಗ ಬಲಿದಾನದ ಮೂಲಕ ಸ್ವಾತ್ಯಂತ್ರ್ಯ ತಂದುಕೊಟ್ಟ ನಂತರ ವೇಷ, ಭಾಷೆ, ಸಂಸ್ಕೃತಿಗಳಲ್ಲಿ ಅಪಾರ ವೈವಿಧ್ಯತೆಯನ್ನು ಹೊಂದಿದ್ದ ಭಾರತದಂತಹ ಬೃಹತ್ ರಾಷ್ಟ್ರಕ್ಕೆ ಒಂದು ಒಕ್ಕೂಟ ವ್ಯವಸ್ಥೆಯಲ್ಲಿ ಸದೃಢ ಅಡಳಿತ ಯಂತ್ರದ ಅವಶ್ಯಕತೆ ಇತ್ತು.
ಇಂತಹ ಆಡಳಿತ ವ್ಯವಸ್ಥೆ ಸುಲಲಿತವಾಗಿ ಕೆಲಸ ಮಾಡಲು ಸಂವಿಧಾನ ಚೌಕಟ್ಟಿನ ಅನಿವಾರ್ಯತೆಯನ್ನು ಮನಗಂಡ ಮಹಾನ್ ನಾಯಕರು ಡಾ.ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಇಡೀ ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನು ರೂಪಿಸಿ ಅದನ್ನು ಅಂಗೀಕರಿಸಿ ಇದರಡಿಯಲ್ಲಿ ಇಂದಿಗೂ ಕೂಡ ಅತ್ಯಂತ ಯಶಸ್ವಿಯಾಗಿ ಪ್ರಜಾತಂತ್ರ ವ್ಯವಸ್ಥೆಯಡಿ ಆಡಳಿತ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಸಾಧನೆಯ ಸವಾಲು: ಪ್ರಸ್ತುತ ರಾಜಕಾರಣದಲ್ಲಿ ರಾಜಕೀಯ ಹೆಜ್ಜೆಗಳು ಸದೃಢವಾಗಬೇಕಾಗಿದೆ. ಆದರೆ, ಈ ದಾರಿಯಲ್ಲಿ ಭಯೋತ್ಪಾದಾನೆ, ಸಾಮಾಜಿಕ ದುರ್ಬಲತೆ, ನಾಯಕರ ಇಚ್ಛಾಶಕ್ತಿ ಕೊರತೆಗಳಂತಹ ಅದೆಷ್ಟೋ ಅಡೆತಡೆಗಳನ್ನು ದಾಟಿ ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ಆಶಯಗಳನ್ನು ಉಳಿಸಿ, ಬೆಳೆಸಿಕೊಂಡು ಬರಬೇಕಾದ ಆಗತ್ಯತೆ ಇಂದು ಪ್ರಬಲವಾಗಿದೆ ಎಂದರು.
ಗಣರಾಜ್ಚೋತ್ಸವದಲ್ಲಿ ಪಾಲ್ಗೊಂಡಿದ್ದ ಪಪಂ ಪ್ರಭಾರಿ ಅಧ್ಯಕ್ಷೆ ಸುಶೀಲಮ್ಮ ದುರಗಪ್ಪ, ತಾಪಂ ಅಧ್ಯಕ್ಷೆ ಪ್ರಭಾವತಿ ಜುಂಜಾನಾಯ್ಕ, ತಹಸೀಲ್ದಾರ್ ಶೈಲಜಾ ಪ್ರಿಯದರ್ಶಿನಿ ಮಾತನಾಡಿದರು.
ಸಚಿವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದ ನಂತರ ತೆರೆದ ವಾಹನದಲ್ಲಿ ಪೊಲೀಸ್, ಗೃಹರಕ್ಷಕ ದಳ ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ವಂದನೆ ಸ್ವೀಕರಿಸಿದರು.
ಮಕ್ಕಳಿಗೆ ಬಹುಮಾನ: ನಂತರದಲ್ಲಿ ವಿವಿಧ ಶಾಲೆಗಳನ್ನು ಆಕರ್ಷಕ ಕವಾಯತ್ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು. ಉತ್ತಮ ಪ್ರದರ್ಶನ ನೀಡಿದ ಶಾಲಾ ಮಕ್ಕಳಿಗೆ ಸಚಿವರು ಬಹುಮಾನ ನೀಡಿದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರು, ತಾಲೂಕು ಪಂಚಾಯಿತಿ ಸದಸ್ಯರು, ಅಧಿಕಾರಿ ವರ್ಗದವರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!