ದಾವಣಗೆರೆ

ಇಂದು ಡಿಎಸ್ಸೆಸ್‌ಪ್ರತಿಭಟನೆ

ದಾವಣಗೆರೆ: ವಿಶೇಷ ಘಟಕ ಯೋಜನೆಯಡಿ ಆಂಧ್ರಪ್ರದೇಶ ಮಾದರಿಯಲ್ಲಿ ಕಾನೂನು ಜಾರಿಗೊಳಿಸುವುದೂ ಸೇರಿದಂತೆ ಬಡವರು, ದಲಿತರ ಸಬಲೀಕರಣಕ್ಕಾಗಿ- ಸಂವಿಧಾನ ಅನುಷ್ಟಾನಗೊಳಿಸಲು ಒತ್ತಾಯಿಸಿ ಜಡಿಎಸ್ಸೆಸ್ ಅಂಬೇಡ್ಕರ್ ವಾದದಿಂದ ದಾವಣಗೆರೆ ಯಲ್ಲಿ ಜ.28ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಮಧ್ಯಾಹ್ನ 12ಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಕಾಲ್ನಡಿಗೆಯಲ್ಲಿ ತರಳಿ ಮನವಿಪತ್ರ ಅರ್ಪಿಸಲಾಗುವುದು. ಸಮಿತಿಯ ಎ.ಡಿ. ಯಶವಂತಪ್ಪ ದೊಡ್ಡೇರಹಳ್ಳಿ, ಶರಣಪ್ಪ ರಾಜನಹಳ್ಳಿ, ಈಶ್ವರಪ್ಪ ಹೊಳೆಹರಳಹಳ್ಳಿ. ಬೆಳಗೆರೆ ಸಿ.ಬಿ. ದೇವೇಂದ್ರಪ್ಪ ಇತರರು ಪ್ರತಿಭಟನೆ ನೇತೃತ್ವ ವಹಿಸುವರು.
ಇಂದು ಪ್ರವಾಸ
ಲೋಕಾಯುಕ್ತ ಅಧಿಕಾರಿಗಳ ತಂಡ ಜ.28ರಿಂದ ಜಿಲ್ಲೆಯ ವಿವಿಧ ತಾಲೂಕು ಪ್ರವಾಸ ಕೈಗೊಳ್ಳಲಿದೆ. ಅಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರ ವರೆಗೆ ಡಿಎಸ್ಪಿ ಸಿ.ಬಿ. ಪಾಟೀಲ್ ಹರಿಹರ ಪ್ರವಾಸಿ ಮಂದಿರ, ಇನ್ಸ್‌ಪೆಕ್ಟರ್ ಕೆ.ಸಿ. ಪುರುಷೋತ್ತಮ ಹೊನ್ನಾಳಿ ಪ್ರವಾಸಿ ಮಂದಿರ, ಜ.29ರಂದು ಇನ್ಸಪೆಕ್ಟರ್ ಎಂ.ಕೆ. ಗಂಗಲ್ ಹರಪನಹಳ್ಳಿ ಐಬಿ, ಜ.30ರಂದು ಇನ್ಸಪೆಕ್ಟರ್ ಕೆ.ಸಿ. ಪುರುಷೋತ್ತಮ ಚನ್ನಗಿರಿ ಐಬಿ, ಇನ್ಸಪೆಕ್ಟರ್ ಎಂ.ಕೆ. ಗಂಗಲ್ ಮತ್ತು ತಂಡ ಜಗಳೂರು ಐಬಿಗೆ ಭೇಟಿ ನೀಡಿ, ಸಾರ್ವಜನಿಕರಿಂದ ದೂರು, ಅಹವಾಲು ಸ್ವೀಕರಿಸಲಿದೆ. ದ್ವಿಪ್ರತಿಯಲ್ಲಿ ದೂರು, ಅಹವಾಲು ಸಲ್ಲಿಸಲು ಲೋಕಾಯುಕ್ತ ಎಸ್ಪಿ ಲಿಂಗಾರೆಡ್ಡಿ ಕೋರಿದ್ದಾರೆ.
ಯುವಜನ ಮೇಳ ಆಯ್ಕೆ ಸ್ಪರ್ಧೆ
ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಚಿನ್ನಸಮುದ್ರ ಸೇವಾಲಾಲ್ ಯುವಕ ಸಂಘ, ಜೈಭೀಮ್ ಯುವಕ ಸಂಘದಿಂದ ದಾವಣಗೆರೆ ಕ್ರೀಡಾ ಹಾಸ್ಟೆಲ್‌ನಲ್ಲಿ ಜ.28ರಂದು ಬೆಳಿಗ್ಗೆ 10ರಿಂದ ತಾಲೂಕು ಮಟ್ಟದ ಯುವಜನ ಮೇಳದ ಆಯ್ಕೆ ಸ್ಪರ್ಧೆ ವೈಯಕ್ತಿಕ ವಿಭಾಗದಲ್ಲಿ ಭಾವಗೀತೆ, ರಂಗಗೀತೆ, ಏಕಪಾತ್ರಾಭಿನಯ, ಲಾವಣಿಗೀತೆ, ಸಮೂಹ ವಿಭಾಗದಲ್ಲಿ ಜಾನಪದ ನೃತ್ಯ, ಜಾನಪದ ಗೀತೆ, ಜಾನಪದ ವಾದ್ಯ ಇತರೆ ಸ್ಪರ್ಧೆ ನಡೆಯಲಿದ್ದು, 15ರಿಂದ 25 ವರ್ಷದೊಳಗಿನವರು ಪಾಲ್ಗೊಳ್ಳಬಹುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ, ಹೆಸರು ನೋಂದಾಯಿಸಲು ಮೊ-95356- 51553ಗೆ ಸಂಪರ್ಕಿಸುವಂತೆ ತಾಲೂಕು ಸಹಾಯಕ ಕ್ರೀಡಾಧಿಕಾರಿ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!