ದಾವಣಗೆರೆ

ಅಧಿಕಾರಕ್ಕೆ ಬಂದರೆ ವಿಶೇಷ ಅನುದಾನ

ದಾವಣಗೆರೆ: ರಾಜ್ಯದಲ್ಲಿ ಕೆಜೆಪಿ ಅಧಿಕಾರಕ್ಕೆ ಬಂದರೆ ನಗರ ಸ್ಥಳೀಯ ಸಂಸ್ಥೆಗಳಿಗೆ ವಿಶೇಷಾನುದಾನ ನೀಡುವ ಜೊತೆಗೆ ವೃದ್ಧಾಪ್ಯ, ವಿಧವಾ, ಅಂಗವಿಕಲರ ಮಾಸಾಶನ ಹೆಚ್ಚಿಸುವುದೂ ಸೇರಿದಂತೆ ಜನ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಗೊಳಿಸುವುದಾಗಿ ಮಾಜಿ ಸಿಎಂ, ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದ ಹೊಂಡದ ಸರ್ಕಲ್‌ನಲ್ಲಿ ಕೆಜೆಪಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಅಧಿಕಾರವಾದಿಯಲ್ಲಿ ಪ್ರತಿಯೊಬ್ಬರ ಹಿತ ಕಾಯುವ ಸದುದ್ದೇಶದಿಂದ ಸೌಲಭ್ಯ, ಯೋಜನೆಗಳನ್ನು ಜಾರಿಗೊಳಿಸಿದ ಪರಿಣಾಮ ಸಾಕಷ್ಟು ಜನರಿಗೆ ಅದು ಆಸರೆಯಾಯಿತು ಎಂದರು.
ದಾವಣಗೆರೆ ನಗರವನ್ನು ಮಾದರಿಯಾಗಿಸಲು ಒತ್ತು ನೀಡುತ್ತೇವೆ. ಕೆಜೆಪಿ ಅಧಿಕಾರಕ್ಕೆ ಬಂದರೆ ಪ್ರತಿ ವಾರ್ಡ್ ಅಭಿವೃದ್ಧಿಗೂ ವಿಶೇಷ ಅನುದಾನ ನೀಡಲಾಗುವುದು. ವಿಶೇಷಾನುದಾನ ಪಾಲಿಕೆಯಷ್ಟೇ ಅಲ್ಲ, ನಗರಸಭೆ, ಪುರಸಭೆ, ಪಪಂಗೂ ವಿಸ್ತರಿಸುತ್ತೇವೆ.  ಜನತೆ ಆಶೀರ್ವಾದವಿದ್ದರೆ ನೂರಾರು ಅಭಿವೃದ್ಧಿ ಕಾರ್ಯ, ಜನಪರ ಕಾರ್ಯಕ್ರಮ ರೂಪಿಸಿ, ಅನುಷ್ಠ್ಟಾನಗೊಳಿಸುವುದಾಗಿ ಹೇಳಿದರು.
ಅಂಗವಿಕಲರ ಮಾಸಾಶನಕ್ಕೆ ತಡ: ಬಡವರು, ಅಲ್ಪಸಂಖ್ಯಾತರು, ಮಹಿಳೆಯರಿಗೆ ತಮ್ಮ ಅವದಿಯಲ್ಲಿ ವಿಶೇಷ ಯೋಜನೆ ಅನುಷ್ಟಾನಗೊಳಿಸಿದ್ದೆವು. ಆದರೆ, ವೃದ್ಧಾಪ್ಯ, ವಿಧವಾ ವೇತನ, ಅಂಗವಿಕಲರ ಮಾಸಾಶನವನ್ನು ಅದೇ ಬಿಜೆಪಿ ಸರ್ಕಾರ ತಡೆ ಹಿಡಿದಿದೆ. ತಾವು ಪುನಃ ಅಧಿಕಾರಕ್ಕೆ ಬಂದಲ್ಲಿ, ತಡೆ ಹಿಡಿದಿರುವ ಎಲ್ಲರ ಮಾಸಾಶನವನ್ನು ಸಕಾಲಕ್ಕೆ ಮರಳಿ ಬರುವಂತೆ ಮಾಡಲಾಗುವುದು. ಈವರೆಗಿನ 500 ಮಾಸಾಶನ 1 ಸಾವಿರಕ್ಕೆ ಹೆಚ್ಚಿಸುವುದಾಗಿ ಅವರು ಭರವಸೆ ನೀಡಿದರು.
ಬೆನ್ನಿಗೆ ಚೂರಿ ಹಾಕಿದರು: ಯಡಿಯೂರಪ್ಪನ ಆಡಳಿತ ಮತ್ತು ಏಳಿಗೆ ಸಹಿಸದ ಬಿಜೆಪಿಯ ಕೆಲ ಮುಖಂಡರು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರು. ಬಿಜೆಪಿ ತೊರೆದು ಬಂದ ನಾನು ಕೇವಲ 3 ತಿಂಗಳಲ್ಲೇ ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿದ್ದೇನೆ. ರಾಜ್ಯಾದ್ಯಂತ ಪ್ರವಾಸದ ವೇಳೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ಮಾಜಿ ಶಾಸಕ ಬಿ.ಪಿ. ಹರೀಶ, ಚಂದ್ರಾನಾಯ್ಕ, ಬಿ.ಎಸ್. ಜಗದೀಶ, ಆವರಗೊಳ್ಳ ಬಿ.ಎಂ. ಷಣ್ಮುಖಯ್ಯ, ಬಿ.ಕೆ. ಸೈಯದ್, ಕೆ. ಹೇಮಂತಕುಮಾರ, ಮಟ್ಟಿಕಲ್ಲು ವೀರಭದ್ರಸ್ವಾಮಿ, ಎಲ್. ಕೊಟ್ರೇಶನಾಯ್ಕ ಹುಲಿಕಟ್ಟೆ, ವಕೀಲರಾದ ಅಮೀರಾ ಬಾನು, ಸೈಯದ್ ಶಾಹೀನ್ ಮತ್ತಿತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!