ದಾವಣಗೆರೆ

ಮತದಾರರು ನಮ್ಮ ಪರವಾಗಿದ್ದಾರೆ

ಕ.ಪ್ರ.ವಾರ್ತೆ, ಹರಿಹರ, ಮಾ.3
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾನುವಾರ ರೋಡ್ ಷೋ ಮೂಲಕ ನಗರಸಭಾ ಚುನಾವಣೆಗೆ ಸ್ಪರ್ಧಿಸಿರುವ ಕೆಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವಂತೆ ವಿನಂತಿಸಿದರು.
ನಗರಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸಿದ ಅವರು, ಕ್ಷೇತ್ರನಾಥ ಶ್ರೀ ಹರಿಹರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಆವರಣದಿಂದ ತೆರೆದ ವಾಹನದಲ್ಲಿ ರೋಡ್ ಷೋ ಮೂಲಕ ದೇವಸ್ಥಾನದ ಆವರಣದಿಂದ ಹಳೇ ಕಚೇರಿ, ಹಳ್ಳದಕೇರಿ, ಶಿವಮೊಗ್ಗ ವೃತ್ತ ರಾಣಿ ಚೆನ್ನಮ್ಮ ವೃತ್ತ, ಮಹತ್ಮಾಗಾಂಧಿ ವೃತ್ತ ಹಾಗೂ ಪಿ.ಪಿ. ರಸ್ತೆಗಳ ಮೂಲಕ ತೆಗ್ಗಿನ ಕೇರಿಗೆ ಸಾಗಿತು.
ನಾವು ಸಿದ್ಧ: ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇತರೆ ಪಕ್ಷಗಳು ಚುನಾವಣೆ ಬೇಡ ಎನ್ನುತ್ತಿದ್ದು, ಕೆಜೆಪಿ ಚುನಾವಣೆಗೆ ಸಿದ್ಧವಾಗಿದ್ದೇವೆ.
ಇದಕ್ಕೆ ನಾವು ಅಧಿಕಾರದಲ್ಲಿದ್ದಾಗ ಸ್ಥಳೀಯ ಸಂಘ ಸಂಸ್ಥೆಗಳ ಅಭಿವೃದ್ಧಿಗೆ ಅತ್ಯಂತ ಹೆಚ್ಚು ಒತ್ತು ನೀಡಿದ್ದೆವು. ಇದನ್ನು ಮನಗಂಡ ರಾಜ್ಯದ ಮತದಾರರು ನಮ್ಮ ಪರವಾಗಿದ್ದಾರೆ ಎಂದರು.
ಮಾಜಿ ಶಾಸಕ ಬಿ.ಪಿ. ಹರೀಶ್, ಕೆಜೆಪಿ ರಾಜ್ಯ ಕಾರ್ಯದರ್ಶಿ ಬಿ.ಕೆ. ಸೈಯದ್ ರೆಹಮಾನ್, ಅಧ್ಯಕ್ಷ ರಮೇಶ ಮೆಹರ್ವಾಡೆ, ಉಪಾಧ್ಯಕ್ಷರಾದ  ಗದಿಗೆಪ್ಪ ಹಲಸಬಾಳು, ರಾಜಾನಾಯ್ಕ, ಸಿ.ಎಂ. ಮುಷೀರ್, ಅಮರಾವತಿ ಸಿದ್ದಣ್ಣ, ಗಂಗಾಧರ, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ರಾಘವೇಂದ್ರ, ವಾಸು ಚಂದಾಪುರ, ಸಂಘಟನಾ ಕಾರ್ಯದರ್ಶಿಗಲಾದ ಗಣೇಶ, ಎಸ್. ಚನ್ನಬಸಪ್ಪ, ನಜೀರ್ ಅಹ್ಮದ್, ಜಡಿಯಪ್ಪ, ಶ್ರೀನಿವಾರ ಇಂಡಿ, ಪಾಂಡಣ್ಣ ರಾಜೋಳ್ಲಿ, ದೇವೇಂದ್ರ, ಎ.ಕೆ. ಹನುಮಂತಪ್ಪ, ಪಾಪಣ್ಣಿ, ತುಳಜಾರಾಂ ಭೂತೆ, ಸನಾವುಲ್ಲ, ಮುದೇಗೌಡ್ರ ಪ್ರಭು, ಹಾಗೂ
ಮಹಿಳಾ ಮುಖಂಡರಾದರಾದ ವಿಜಯಲಕ್ಷಿ, ಸೋಫಿಯಾ, ಎಸ್.ಆರ್. ಅಂಜು, ಜಿ.ಆರ್.ಕವಿತಾ, ನಿರ್ಮಲ ಆರ್. ರಾಜೇನವರ್, ಪುಟ್ಟಮ್ಮ, ಬಿ.ಎಸ್. ಕವಿತಾ, ಕವಿತಾ ರೂಪಾ ಮಲ್ಲಪ್ಪ ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಅ.16ರ CJPಯ ಪ್ರತಿಭಟನೆಗೆ ತಡೆ ನೀಡಲು ಹೈಕೋರ್ಟ್ ನಕಾರ!

ಕಾಕ್ರೋಚ್ ಜನತಾ ಪಾರ್ಟಿ, ಕಾಂಗ್ರೆಸ್ ಎರಡೂ ಒಂದೇ; ಇಲ್ಲಿ ನಿಮ್ಮನ್ನು ಯಾರೂ ಬಂಧಿಸಲ್ಲ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ!

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

Indian Stock Market: ಕೊನೆಗೂ ಪುಟಿದಿದ್ದ ಭಾರತೀಯ ಷೇರು ಮಾರುಕಟ್ಟೆ, ಸೆನ್ಸೆಕ್ಸ್ ದಾಖಲೆಯ ಏರಿಕೆ