ದಾವಣಗೆರೆ

ಶಾಂತಕುಮಾರಿ ಬಿಜೆಪಿಗೆ ರಾಜಿನಾಮೆ

ಹರಪನಹಳ್ಳಿ: ಬಿಜೆಪಿ ತಾಲೂಕು ಮಹಿಳಾ ಘಟಕದ ಅದ್ಯಕ್ಷೆ ಎಂ. ಶಾಂತಕುಮಾರಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜಿನಾಮೆ ಸಲ್ಲಿಸಿದ್ದಾರೆ.  ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಥಳೀಯ ಮುಖಂಡರ ನಿರ್ಲಕ್ಷ್ಯದಿಂದ ಮನನೊಂದು ಬಿಜೆಪಿ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿದ್ದೇನೆ, ಶಾಸಕ ಕರುಣಾಕರ ರೆಡ್ಡಿ ಅವರ ಬಗ್ಗೆ ನಮಗೇನು ವಿರೋಧವಿಲ್ಲ ಎಂದು ಈ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದರು. ಯಾವ ಪಕ್ಷ ಸೇರಬೇಕು ಎಂದು ಇನ್ನೂ ತೀರ್ಮಾನಿಸಿಲ್ಲ, ಆದರೂ ಪುರಸಭಾ ಚುನಾವಣೆಯಲ್ಲಿ ವಾರ್ಡ್ 22 ಹಾಗೂ 27 ರಲ್ಲಿ ಬಿಎಸ್‌ಆರ್ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲಿಸುವುದಾಗಿ ಅವರು ತಿಳಿಸಿದರು.
ಪಾಲಿಕೆ 3 ವಾರ್ಡ್‌ಗೆ ಸಿಪಿಐ ಸ್ಪರ್ಧೆ
ದಾವಣಗೆರೆ: ಪಾಲಿಕೆಯ 41 ವಾರ್ಡ್‌ಗಳ ಪೈಕಿ 3 ವಾರ್ಡ್‌ಗಳಿಗೆ ಭಾರತ ಕಮ್ಯುನಿಷ್ಟ್ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿದಿದ್ದು, 3 ವಾರ್ಡ್‌ಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವನ್ನು ಸಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಕೆ. ರಾಮಚಂದ್ರಪ್ಪ ವ್ಯಕ್ತಪಡಿಸಿದರು. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಸ್ಕೃತಿಕ ಚಳವಳಿ, ಜನಪರ, ರೈತ, ಕಾರ್ಮಿಕ, ಮಹಿಳಾ ಪರ ಹೋರಾಟ ನಡೆಸಿಕೊಂಡು ಬಂದ, ತಮ್ಮದೇ ಆದ ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವ ಮೂವರು ಅಭ್ಯರ್ಥಿಗಳು ಪಾಲಿಕೆಯ 18, 23 ಹಾಗೂ 37ನೇ ವಾರ್ಡ್‌ಗಳಲ್ಲಿ ಸಿಪಿಐ ಅಭ್ಯರ್ಥಿಗಳಾಗಿದ್ದಾರೆ ಎಂದರು.
ಜನಪರ ಕಾಳಜಿ: ನಿಸ್ವಾರ್ಥದಿಂದ ಪ್ರಾಮಾಣಿಕವಾಗಿ ಸಂಘಟನೆ, ಶ್ರಮಿಕ ವರ್ಗದ ಪರ ಹೋರಾಟ ನಡೆಸುತ್ತಾ ಬಂದಿರುವ ಇಂತಹ ವ್ಯಕ್ತಿಗಳನ್ನು ಆಯ್ಕೆ ಮಾಡಿದಲ್ಲಿ, ಪಾಲಿಕೆಯಲ್ಲಿ ಶ್ರಮಿಕರು, ಶೋಷಿದ ವರ್ಗದ ಜನರ ಧ್ವನಿಯಾಗಿ ನ್ಯಾಯ, ಸೌಲಭ್ಯ ದೊರಕಿಸಿಕೊಡಲು ಶಕ್ತಿ ತುಂಬಿದಂತಾಗುತ್ತದೆ. ಹಣ ಬಲ, ತೋಳ್ಬಲದ ಮುಂದೆ ಪ್ರಾಮಾಣಿಕವಾಗಿ ಜನಪರ ಕಾಳಜಿ ಹೊಂದಿರುವ ಸಿಪಿಐ ಅಭ್ಯರ್ಥಿಗಳ ಗೆಲುವಿಗಾಗಿ ಜನತೆ ಸಹಕರಿಸುವಂತೆ ಅವರು ಕೋರಿದರು.
ಸಿಪಿಐನಿಂದ 18ನೇ ವಾರ್ಡ್‌ಗೆ ಗೀತಮ್ಮ, 23ನೇ ವಾರ್ಡ್‌ಗೆ ಆವರಗರೆ ಎಚ್.ಜಿ. ಉಮೇಶ, 37ನೇ ವಾರ್ಡ್ ನಿಂದ ಎನ್.ಎಚ್. ರಾಮಪ್ಪ ಸ್ಪರ್ಧಿಸಿದ್ದು, ಈ ಮೂವರನ್ನೂ ಜನತೆ ಆಶೀರ್ವದಿಸಬೇಕು. ಸಿಪಿಐನಿಂದ ಸ್ಪರ್ಧಿಸಿರುವ ಈ ಮೂವರೂ ಅಭ್ಯರ್ಥಿಗಳಿಗೆ ಸಿಪಿಐಎಂ ಸಹ ಬೆಂಬಲ ಸೂಚಿಸಿದೆ ಎಂದು ಹೇಳಿದರು. ಸಿಪಿಐ ಜಿಲ್ಲಾ ಖಜಾಂಚಿ ಆನಂದರಾಜ, ಅಭ್ಯರ್ಥಿಗಳಾದ ಆವರಗೆರೆ ಎಚ್.ಜಿ. ಉಮೇಶ, ಗೀತಮ್ಮ, ಎನ್.ಎಚ್. ರಾಮಪ್ಪ, ಮುಖಂಡರಾದ ಬಸವರಾಜ, ಟಿ.ಎಸ್. ನಾಗರಾಜ, ಆವರಗೆರೆ ಚಂದ್ರು, ಐರಣಿ ಚಂದ್ರು, ರಂಗಸ್ವಾಮಿ, ದಾದಾಪೀರ್, ಜಯಣ್ಣ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!