ದಾವಣಗೆರೆ

ಚುನಾವಣೆಗೆ ಸಜ್ಜುಗೊಂಡ ಜಿಲ್ಲಾಡಳಿತ

ಕ.ಪ್ರ.ವಾರ್ತೆ, ದಾವಣಗೆರೆ, ಮಾ.6
ದಾವಣಗೆರೆ ಪಾಲಿಕೆ ಸೇರಿದಂತೆ ಜಿಲ್ಲೆಯ ಎಲ್ಲಾ ಆರೂ ನಗರ ಸ್ಥಳೀಯ ಸಂಸ್ಥೆಗಳಿಗೆ ಮಾ.7ರಂದು ನಡೆಯುವ ಚುನಾವಣೆಯನ್ನು ಅತ್ಯಂತ ಶಾಂತಿ, ಸುವ್ಯವಸ್ಥಿತವಾಗಿ ನಡೆಸಲು ಎಲ್ಲಾ ಅಗತ್ಯ ಕ್ರಮ ಕೈಗೊಂಡಿರುವುದಾಗಿ ಜಿಲ್ಲಾಧಿಕಾರಿ ಸುಭಾಷ್ ಶಿವಪ್ಪ ಪಟ್ಟಣಶೆಟ್ಟಿ ತಿಳಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೂ ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 149 ವಾರ್ಡ್‌ಗಳಿಂದ 4,34,819 ಮತದಾರರು ತಮ್ಮ ಮತ ಹಕ್ಕು ಚಲಾಯಿಸಲಿದ್ದಾರೆ. ಇದರಲ್ಲಿ 2,18,849 ಪುರುಷ, 2,15,970 ಮಹಿಳಾ ಮತದಾರರು ಎಂದರು.
518 ಮತಗಟ್ಟೆ: ಪಾಲಿಕೆ ಸೇರಿದಂತೆ ಜಿಲ್ಲೆಯ ಆರೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 469 ಮತಗಟ್ಟೆ, 50 ಹೆಚ್ಚುವರಿ ಮತಗಟ್ಟೆ ಸೇರಿದಂತೆ ಒಟ್ಟು 518 ಮತಗಟ್ಟೆ ಸ್ಥಾಪಿಸಲಾಗಿದೆ. ದಾವಣಗೆರೆ ಪಾಲಿಕೆ 41 ವಾರ್ಡ್‌ಗೆ 320 ಮತಗಟ್ಟೆ, 48 ಹೆಚ್ಚುವರಿ ಮತಗಟ್ಟೆ ಸೇರಿದಂತೆ ಒಟ್ಟು 368, ಹರಿಹರ ನಗರಸಭೆಯ 31 ವಾರ್ಡ್‌ಗೆ 66 ಮತಗಟ್ಟೆ, 1 ಹೆಚ್ಚುವರಿ ಮತಗಟ್ಟೆ ಸೇರಿದಂತೆ 67 ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಹರಪನಹಳ್ಳಿ ಪುರಸಭೆಯ 27 ವಾರ್ಡ್‌ಗೆ 32 ಮತಗಟ್ಟೆ, 1 ಹೆಚ್ಚುವರಿ ಮತಗಟ್ಟೆ ಸೇರಿದಂತೆ ಒಟ್ಟು 33 ಮತಗಟ್ಟೆ ಸ್ಥಾಪಿಸಿದೆ. ಹೊನ್ನಾಳಿ ಪಪಂ 16 ವಾರ್ಡ್‌ಗೆ ಒಟ್ಟು 16 ಮತಗಟ್ಟೆ, ಚನ್ನಗಿರಿ ಪಪಂ 19 ವಾರ್ಡ್‌ಗೆ 19, ಜಗಳೂರು ಪಪಂಗೆ 15 ಮತಗಟ್ಟೆ ಸ್ಥಾಪಿಸಲಾಗಿದೆ.
   ಮತಗಟ್ಟೆ ಕಾರ್ಯ ನಿರ್ವಹಿಸಲು ಜಿಲ್ಲೆಯ ಆರೂ ನಗರ ಸ್ಥಳೀಯ ಸಂಸ್ಥೆಯ 518 ಮತಗಟ್ಟೆಗಳಿಗೆ ಕಾಯ್ದಿರಿಸಿದ ಸಿಬ್ಬಂದಿ ಸೇರಿದಂತೆ 2480 ಜನರನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದರು.
ಸೂಕ್ಷ್ಮ, ಅತಿ ಸೂಕ್ಷ್ಮ: ಜಿಲ್ಲೆಯ 518 ಮತಗಟ್ಟೆಗೆ 518 ಪಿಆರ್‌ಓ, 518 ಎಪಿಆರ್‌ಓ, 1036 ಪಿಓ ನೇಮಿಸಲಾಗಿದೆ. 102 ಪಿಆರ್‌ಓ, 102 ಎಪಿಆರ್‌ಓ, 204 ಪಿಓಗಳನ್ನು ಕಾಯ್ದಿರಿಸಿದ ಸಿಬ್ಬಂದಿಯಾಗಿಸಿದೆ. ಚುನಾವಣೆಯನ್ನು ಶಾಂತಿ, ಸುವ್ಯವಸ್ಥೆಯಿಂದ ನಡೆಸುವ ನಿಟ್ಟಿನಲ್ಲಿ ಜಿಲ್ಲೆಯ 62 ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರಗಳಿಗೆ ಒಟ್ಟು 69 ವೀಡಿಯೋಗ್ರಾಫರ್ಸ್‌ಗಳನ್ನು ನೇಮಿಸಲಾಗಿದೆ. ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ನಿಗಾವಹಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಂಡಿದೆ ಎಂದು ವಿವರಿಸಿದರು.
   ದಾವಣಗೆರೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ 18 ಸೆಕ್ಟರ್ ಅಧಿಕಾರಿಗಳು, ಹರಿಹರ ನಗರಸಭೆಗೆ 6, ಹರಪನಹಳ್ಳಿ ಪುರಸಭೆಗೆ 3, ಹೊನ್ನಾಳಿ ಪಪಂಗೆ 2, ಚನ್ನಗಿರಿ ಪಪಂಗೆ 2, ಜಗಳೂರು ಪಪಂಗೆ 3 ಸೇರಿದಂತೆ ಒಟ್ಟು 34 ಸೆಕ್ಟರ್ ಅಧಿಕಾರಿಗಳ ನೇಮಿಸಲಾಗಿದೆ. ಆರೂ ಸ್ಥಳೀಯ ಸಂಸ್ಥೆಗಳ 149 ವಾರ್ಡ್‌ಗೆ 785 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಯಾವುದೇ ವಾರ್ಡ್‌ಗೆ ಯಾರೊಬ್ಬರೂ ಅವಿರೋಧವಾಗಿ ಆಯ್ಕೆಯಾಗದ ಹಿನ್ನೆಲೆಯಲ್ಲಿ ಎಲ್ಲಾ ವಾರ್ಡ್‌ಗೂ ಚುನಾವಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಒಟ್ಟು 149 ವಾರ್ಡ್‌ಗೆ ಕಾಂಗ್ರೆಸ್ ಪಕ್ಷದಿಂದ 148 ಅಭ್ಯರ್ಥಿಗಳು, ಬಿಜೆಪಿಯಿಂದ 132, ಜೆಡಿಎಸ್ ಪಕ್ಷದ 129, ಸಿಪಿಐನಿಂದ 3, ಎನ್‌ಸಿಪಿ 1, ಸ್ವತಂತ್ರ 190, ಜೆಡಿಯು 6, ಬಿಎಸ್ಸಾರ್ ಕಾಂಗ್ರೆಸ್ಸಿನ 75, ಕೆಜೆಪಿ 100 ಜನ, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಓರ್ವ ಅಭ್ಯರ್ಥಿಯೂ ಸೇರಿದಂತೆ ಒಟ್ಟು 785 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣಾ ವೀಕ್ಷಕರಾದ ಎನ್.ಎಂ. ಪನಾಲಿ,  ಮಲ್ಲೇಶಯ್ಯ, ಬಸವರಾಜ, ಜಿಲ್ಲಾ ಪೊಲೀಸ್ ವರಿಷ್‌ಠ ಲಾಭೂರಾಮ್ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!