ದಾವಣಗೆರೆ

ಓದಲು ಬೋಧಿಸಿದ ಲಾಭೂರಾಂ

ಕ.ಪ್ರ.ವಾರ್ತೆ ದಾವಣಗೆರೆ ಮಾ.7
ಪಾಲಿಕೆ ಚುನಾವಣೆಯ ವಿದ್ಯುನ್ಮಾನ ಯಂತ್ರ ಕಾಯ್ದಿಡಲು ನಿಗದಿಪಡಿಸಿದ್ದ ಭದ್ರತಾ ಕೇಂದ್ರವಾದ ಡಿಆರ್‌ಆರ್ ಪಾಲಿ ಟೆಕ್ನಿಕ್‌ನಲ್ಲಿ ಅಧಿಕಾರಿ, ಸಿಬ್ಬಂದಿಗೆ ಟೀ ನೀಡುತ್ತಿದ್ದ ಅಪ್ರಾಪ್ತ ಬಾಲಕನಿಗೆ ಓದಿನ ಮಹತ್ವ ತಿಳಿ ಹೇಳಿ, ಕೆಲಸದ ಆಸೆ ಬಿಟ್ಟು ಓದಿನ ಕಡೆ ಗಮನ ಹರಿಸುವಂತೆ ಎಸ್ಪಿ ಲಾಭುರಾಮ್ ಬುದ್ಧಿ ಹೇಳಿದರು.
ನಗರದ ಡಿಆರ್‌ಆರ್ ಪಾಲಿಟೆಕ್ನಿಕ್‌ನಲ್ಲಿ ಅಧಿಕಾರಿ, ಸಿಬ್ಬಂದಿ ಟೀ ಪೂರೈಸುತ್ತಿದ್ದ ಬಾಲಕನನ್ನು ಗಮನಿಸಿದ ಜಿಲ್ಲಾ ಪೊಲೀಸ್ ವರಿಷ್ಠ ಲಾಭೂರಾಮ್ ಆತನ ತೋಳನ್ನು ಹಿಡಿದು, ಹೀಗೆ ಅಪ್ರಾಪ್ತ ವಯಸ್ಸಿನ ಕೆಲಸ ಮಾಡುವುದು ಸರಿಯಲ್ಲ. ಶಾಲೆಗೆ ಹೋಗಿ ಓದಿ ಭವಿಷ್ಯ ರೂಪಿಸಿಕೊಳ್ಳುವಂತೆ ತಿಳಿಸಿದರು.
ಬಾಲಕನು ತನ್ನ ತಂದೆ ಜೊತೆ ಬಂದಿದ್ದಾಗಿ ಹೇಳಿದನಾದರೂ, ಏನೇ ಆದರೂ ನೀನು ಹೀಗೆ ಕೆಲಸ ಮಾಡುವುದು ಸರಿಯಲ್ಲ. ಶಾಲೆಗೆ ಹೋಗಿ, ಚೆನ್ನಾಗಿ ಓದಿದಲ್ಲಿ ನಿನ್ನ ಭವಿಷ್ಯ ಉತ್ತಮವಾಗುತ್ತದೆ. ನೀನೂ ಸಹ ಪೊಲೀಸ್ ಅಧಿಕಾರಿಯಾಗುವ ಆಸೆ ವ್ಯಕ್ತಪಡಿಸುತ್ತಿರುವೆ. ಓದುವ ವಯಸ್ಸಿನಲ್ಲಿ ಹೀಗೆ ಕೆಲಸ ಮಾಡುತ್ತಾ, ಶಿಕ್ಷಣವನ್ನು ಹಾಳು ಮಾಡಿಕೊಂಡರೆ ಮತ್ತೆ ವಯಸ್ಸು, ಅವಕಾಶ ಬರದು ಎಂದು ಕಿವಿಮಾತು ಹೇಳಿದರು.
ಕೊನೆಗೂ ಎಸ್ಪಿ ಲಾಭೂರಾಮ್ ಮಾತನ್ನು ಅರ್ಥೈಸಿಕೊಂಡ ಬಾಲಕ ಇನ್ನು ಮುಂದೆ ಹೀಗೆ ಕೆಲಸಕ್ಕೆ ಬರುವುದಿಲ್ಲ. ತಪ್ಪದೇ ಶಾಲೆಗೆ ಹೋಗಿ, ಚೆನ್ನಾಗಿ ಓದುತ್ತೇನೆ. ಮುಂದೆ ನಿಮ್ಮಂತೆ ನಾನೂ ಪೊಲೀಸ್ ಅಧಿಕಾರಿಯಾಗುತ್ತೇನೆ ಹೇಳಿದ ನಂತರ ಆತನಿಗೆ ಶುಭಾರೈಸಿದ ಎಸ್ಪಿ ಆತನ ಕೈಬಿಟ್ಟರು. ಡಿಸಿ ಪಟ್ಟಣಶೆಟ್ಟಿ, ನಗರ ಡಿಎಸ್ಪಿ ಡಾ. ಶಿವಕುಮಾರ ಗುಣಾರೆ, ಪ್ರೊಬೇಷನರಿ ಎಎಸ್ಪಿ ಡಾ. ರಾಜು, ಪಾಲಿಕೆ ಆಯುಕ್ತ ಬಿ. ಭೀಮಪ್ಪ, ಉಪ ಆಯುಕ್ತ ರವೀಂದ್ರ ಮಲ್ಲಾಪುರ, ಮುಖ್ಯ ಲೆಕ್ಕಾಧಿಕಾರಿ ಸೋಮನಾಥ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!