ದಾವಣಗೆರೆ

ವಿಭಕ್ತ ಕುಟುಂಬ ಹೆಚ್ಚಳ: ಆತಂಕ

ಕನ್ನಡಪ್ರಭ ವಾರ್ತೆ, ದಾವಣಗೆರೆ, ಮಾ.17
ಅವಿಭಕ್ತ ಕುಟುಂಬಗಳಿಗೆ ಹೆಸರಾಗಿದ್ದ ಭಾರತದಲ್ಲಿ ಇಂದು ಪಾಶ್ಚಾತ್ಯ ಸಂಸ್ಕೃತಿಯ ಹಾವಳಿಯಿಂದಾಗಿ ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗುವ ಮೂಲಕ, ಸಂಬಂಧ ನಶಿಸುವಂತಹ ಪರಿಸ್ಥಿತಿ ಬಂದೊದಗಿದೆ ಎಂದು ಜಿಲ್ಲಾಧಿಕಾರಿ ಸುಭಾಷ್ ಶಿವಪ್ಪ ಪಟ್ಟಣಶೆಟ್ಟಿ ಆತಂಕ ವ್ಯಕ್ತಪಡಿಸಿದರು.
ನಗರದ ದೇವರಾಜ ಅರಸ್ ಬಡಾವಣೆಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಶಿವಲಿಂಗ ಕಟ್ಟಡದಲ್ಲಿ ಭಾನುವಾರ ಮಹಾಶಿವರಾತ್ರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜವೆಂಬುದು ಸರ್ವ ಕುಟುಂಬಗಳ ಸಂಘವಾಗಿದ್ದರೂ, ಇಂದು ವಿಭಕ್ತ ಕುಟುಂಬಗಳು ಹೆಚ್ಚುತ್ತಿರುವುದು ಆತಂಕದ ಸಂಗತಿ ಎಂದರು.
ಸಂಬಂಧ ಸಂಕೀರ್ಣ: ಅನಾದಿಯಿಂದಲೂ ಭಾರತ ಅವಿಭಕ್ತ ಕುಟುಂಬಕ್ಕೆ ಪ್ರಸಿದ್ಧಿಯಾಗಿತ್ತು. ಅವಿಭಕ್ತ ಕುಟುಂಬ ಪದ್ಧತಿಯಲ್ಲಿ ಆತ್ಮೀಯತೆ, ಪರಸ್ಪರರಲ್ಲಿ ಅವಿನಾಭಾವ ಸಂಬಂಧ, ಹಿರಿಯರನ್ನು ಗೌರವದಿಂದ ಕಾಣುವ, ಒಬ್ಬರನ್ನೊಬ್ಬರು ಬಿಟ್ಟು ಕೊಡಲಾಗದ ಒಗ್ಗಟ್ಟು, ನೆಂಟತನ ಇದ್ದವು. ವಿಭಕ್ತ ಕುಟುಂಬ ಹೆಚ್ಚಿದಂತೆ ಸಂಬಂಧಗಳೂ ಸಂಕೀರ್ಣವಾಗುತ್ತಿವೆ ಎಂದರು.
ಮೋಸ, ವಂಚನೆ, ಅತ್ಯಾಚಾರ ಇತ್ಯಾದಿ ಸಾಮಾಜಿಕ ಸಮಸ್ಯೆಗಳಲ್ಲಿ ತುಂಬಿ ತುಳುಕುವ ಸಮಾಜವನ್ನು ಸರಿಪಡಿಸಲು ಆಧ್ಯಾತ್ಮಿಕ ಶಿಕ್ಷಣದ ಅರಿವಿನ ಅಗತ್ಯವಿದೆ. ಎಲ್ಲರೂ ಅಧಿಕಾರ, ಅಂತಸ್ತು, ಸುಖಕ್ಕೆ, ಸ್ವಾರ್ಥಕ್ಕಾಗಿ ಆಸೆ ಪಟ್ಟಿದ್ದರಿಂದಾಗಿ ಸಮಾಜದಲ್ಲಿ ಸಮಸ್ಯೆಗಳೂ ಉದ್ಭವಿಸುತ್ತಿವೆ. ಗುರು ಹಿರಿಯರ ಬಗ್ಗೆ ಗೌರವ ಕೊಡುವ ನೈತಿಕತೆಯನ್ನೂ ಯುವ ಪೀಳಿಗೆ ಮರೆಯುತ್ತಿರುವುದು ದುರಂತದ ಪರಮಾವಧಿ ಎಂದು ಅವರು ವಿಷಾದಿಸಿದರು.
ಆಧ್ಯಾತ್ಮ ಶಿಕ್ಷಣ ಅಗತ್ಯ: ಆಧ್ಯಾತ್ಮ ಅಧ್ಯಯನದಿಂದ ಜನರೂ ಬಹುದೂರವಾಗುತ್ತಿದ್ದಾರೆ. ಯುವ ಪೀಳಿಗೆ ಸೇರಿದಂತೆ ಎಲ್ಲರಿಗೂ ಇಂದು ಆಧ್ಯಾತ್ಮ ಶಿಕ್ಷಣದ ಅಗತ್ಯವಿದೆ. ಸಮಾಜದ ನಿರ್ಮಾಪಕರಾದ ಯುವ ಜನಾಂಗವನ್ನು ಆಧ್ಯಾತ್ಮ ಶಿಕ್ಷಣದ ಮೂಲಕ ಸನ್ಮಾರ್ಗಕ್ಕೆ ಕರೆ ತರುವಂತಹ ಪ್ರಯತ್ನವನ್ನು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮಾಡುತ್ತಿರುವುದು ಗಮನಾರ್ಹ. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕೈಗೊಳ್ಳುವ ಇಂತಹ ಸಮಾಜಮುಖಿ ಕಾರ್ಯಕ್ಕೆ ಜಿಲ್ಲಾಡಳಿತ ಅಗತ್ಯ ಸಹಕಾರ ನೀಡಲಿದೆ ಎಂದು ಅವರು ಭರವಸೆ ನೀಡಿದರು.
ನಿವೃತ್ತ ಅಪರ ಜಿಲ್ಲಾಧಿಕಾರಿ ಎಸ್.ಎಚ್. ವಿಜಯಕುಮಾರ ಮಾತನಾಡಿ, ಕೆಟ್ಟವರು, ಒಳ್ಳೆಯವರು ಹೀಗೆ ಎಲ್ಲಾ ತರಹದವರೂ ವಾಸಿಸುವ ಸಮಾಜದಲ್ಲಿ ಕೆಟ್ಟದ್ದು, ಒಳ್ಳೆಯದು ಎಲ್ಲವೂ ಇವೆ.
ಇವುಗಳನ್ನು ಆಯ್ದುಕೊಳ್ಳುವಂತಹ ಶಕ್ತಿಯು ಸಕಲ ಜೀವರಾಶಿಗಳಲ್ಲಿ ಬುದ್ಧಿವಂತನಾದ ಮನುಷ್ಯನಿಗೆ ಮಾತ್ರವೇ ಇದೆ. ಎಲ್ಲರ ಜೀವನದಲ್ಲೂ ಶಾಂತಿ ಇದೆ. ಆಧ್ಯಾತ್ಮ ಅಧ್ಯಯನದಿಂದ ಅಂತಹ ಶಾಂತಿ ಹೊಂದಲು ಸಾಧ್ಯ ಎಂದರು.
ಮಾನಸಿಕ ಉಪವಾಸ: ಈಶ್ವರೀಯ ವಲಿಶ್ವವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ಲೀಲಾಜಿ ಮಾತನಾಡಿ, ಶಿವರಾತ್ರಿಯನ್ನು ಹಿಂದೆ ಶ್ರದ್ಧಾಭಕ್ತಿಯಿಂದ ಗುರು, ಹಿರಿಯ ಮಾರ್ಗದರ್ಶನದಲ್ಲಿ ಆಚರಿಸುತ್ತಿದ್ದರು. ಆದರೆ, ಇಂದು ಉಪವಾಸವೆಂದು ಒಂಬತ್ತು ದೋಸೆ ತಿಂದು, ಟೀವಿ, ಸಿನಿಮಾ ನೋಡಿ, ಮಜಾ, ಮೋಜು ಮಾಡಿ ಶಿವರಾತ್ರಿ ಜಾಗರಣೆ ಮಾಡುತ್ತಿದ್ದಾರೆ. ಶಿವನು ಹೇಳಿದಂತೆ ಜಾಗರಣೆ ಎಂಬುದು ಮಾನಸಿಕ ಉಪವಾಸ, ಸದಾ ಜಾಗೃತವಾಗಿರುವುದಾಗಿದೆ ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವಕುಮಾರ, ರಾಜಯೋಗ ಶಿಕ್ಷಕಿ ಬ್ರಹ್ಮಕುಮಾರಿ ರಾಜೇಶ್ವರಿ, ಡಾ. ಪೂಜಾರ್, ಇ.ಎಂ. ಮಂಜುನಾಥ  ಇದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ಯಾರೆಂಟಿ ಅನರ್ಹ ಫಲಾನುಭವಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಸಿಎಂ ಡಿ.ಕೆ ಶಿವಕುಮಾರ್ ಸೂಚನೆ

BIDADI TOWNSHIP: 7,481 ರಿಂದ 9,600 ಎಕರೆ ಸ್ವಾಧೀನಕ್ಕೆ ಸಂಚು, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಜೆಡಿಎಸ್ ದೂರು

IPL 2027: ಮರಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಿಷಭ್ ಪಂತ್, ಲಕ್ನೋ ತಂಡಕ್ಕೆ ಕುಲದೀಪ್ ಯಾದವ್ ಸೇರುವ ಸಾಧ್ಯತೆ!

AI ಬಳಸಿ ನಟಿ ರುಕ್ಮಿಣಿ ವಸಂತ್ ಬಿಕಿನಿ ಫೋಟೋ, ವಿಡಿಯೋ ವೈರಲ್​ ಕೇಸ್; ಮೂವರು ಆರೋಪಿಗಳ ಬಂಧನ

ಸೈಬರ್ ವಂಚನೆ ತಡೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ: ಸಂತ್ರಸ್ತರಿಂದ ದೋಚಿದ್ದ 436 ಕೋಟಿ ರೂ freez!