ದಾವಣಗೆರೆ

ಮಹಿಳೆಯರಿಂದ ಹೊಳೆ ಗಂಗವ್ವನ ಪೂಜೆ

ಹರಿಹರ: ಇಲ್ಲಿನ ತುಂಗಭದ್ರಾ ನದಿ ದಡದಲ್ಲಿ ಮರಿ ಪಂಚಮಿ ಪ್ರಯುಕ್ತ ಮಹಿಳೆಯರು ನದಿದಡಕ್ಕೆ ತೆರಳಿ ಹೊಳೆ ಗಂಗವ್ವನ ಪೂಜೆ ನಡೆಸಿದರು.
ನಾಗರ ಪಂಚಮಿ ಮರುದಿನ ಬರುವುದೇ ಮರಿ ಪಂಚಮಿ. ಶ್ರಾವಣ ತಿಂಗಳಲ್ಲಿ 5ನೇ ದಿನವಾದ ಶುಕ್ರವಾರ ನಡೆಯಬೇಕಿದ್ದ ಪಂಚಮಿಯನ್ನು ನಗರದ ಬಹುತೇಕ ಆಸ್ತಿಕರು ಗುರುವಾರವೇ ಆಚರಿಸಿದ್ದರು.
ರಾಜ್ಯದ ವಿವಿಧೆಡೆ ಕಾರ್ಣೀಕಗಳು ಸಾಮಾನ್ಯ. ಕೆಲವು ಕಾರ್ಣೀಕಗಳಲ್ಲಿ ಮಳೆ, ಬೆಳೆ ಮುಂತಾದವುಗಳ ಬಗ್ಗೆ ತಿಳಿಸಿದರೆ, ಹರಿಹರದ ತುಂಗಭದ್ರೆಯ ದಡದಲ್ಲಿರುವ ಸಂಗಮೇಶ್ವರದ ದೇವಸ್ಥಾನ ಆವರಣದಲ್ಲಿ ನಡೆಯುವ ಕಾರ್ಣಿಕ ವಿಶೇಷ. ಕಾರಣ ಇಲ್ಲಿ ನಡೆಯುವ ಕಾರ್ಣೀಕ ದೇಶ ಹಾಗೂ ರಾಜ್ಯದಲ್ಲಿ ನಡೆಯುವ ರಾಜಕೀಯ ನಡೆಗಳ ಬಗ್ಗೆ ಕಾರ್ಣೀಕವಾಗುತ್ತದೆ ಎನ್ನುವುದು.
ನಗರದ ತುಂಗಭದ್ರ ನದಿ ದಡದಲ್ಲಿರುವ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಸಂಜೆ ಕಾರ್ಣಿಕ ನಡೆಯಿತು.
 ಕಾರ್ಣೀಕ ಕೇಳಲು ತಾಲೂಕಿನ ಅನೇಕ ಗ್ರಾಮಗಳಿಂದ ಸಾವಿರಾರು ಭಕ್ತರು, ತಮ್ಮ ತಮ್ಮ ಗ್ರಾಮಗಳ ದೇವತೆಗಳ ಸಮೇತ ನದಿ ದಡದಲ್ಲಿ ಬೀಡು ಬಿಟ್ಟಿದ್ದ ದೃಶ್ಯ ನೋಡುಗರಲ್ಲಿ ಭಕ್ತಿ ಭಾವ ಸ್ಪುರಿಸುತ್ತಿತ್ತು. ತಾಲೂಕಿನ ಯಲವಟ್ಟಿ ಗ್ರಾಮದ ಆಂಜನೇಯ ದೇವಸ್ಥಾನದ ಅರ್ಚಕ ಪೂಜಾರ್ ನಾಗಪ್ಪ ಪ್ರತಿವರ್ಷ ಕಾರ್ಣೀಕ ಹೇಳುತ್ತಾರೆ.
ಪೂಜಾರಿ ಬಾಣದ ಮೇಲೆ ನಿಂತು ಕಾರ್ಣೀಕ ಹೇಳುವ ಮುನ್ನ ಸದ್ದಲೇ ಎಂದ ತಕ್ಷಣ, ಗಿಜಿಗಡುವ ಸಾವಿರಾರು ಜನ ಗದ್ದಲ, ಸೂಜಿ ಬಿದ್ದರೂ ಕೇಳುವಷ್ಟು ಮೌನಕ್ಕೆ ಶರಣಾಗುತ್ತದೆ. ನಂತರ ಪೂಜಾರಿ ಕಾರ್ಣೀಕ ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿ.ಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ; ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!