ಜಗಳೂರು: ಜಗಳೂರು ಕ್ಷೇತ್ರಕ್ಕೆ 6 ಬಾರಿ ಶಾಸಕರಾಗಿದ್ದ ಜಿ.ಎಚ್. ಅಶ್ವತ್ಥರೆಡ್ಡಿ ಕ್ಷೇತ್ರದ ಪ್ರತಿ ಗ್ರಾಮಕ್ಕೂ ವಿದ್ಯುತ್ ಸಂಪರ್ಕ, ನೀರಿನ ಸೌಲಭ್ಯ ಕಲ್ಪಿಸಿದ ಜನಾನುರಾಗಿ ನಾಯಕ ಎಂದು ಶಾಸಕ ಎಚ್.ಪಿ. ರಾಜೇಶ್ ತಿಳಿಸಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಅಶ್ವತ್ಥರೆಡ್ಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಅಶ್ವತ್ಥರೆಡ್ಡಿ ಜಾತಿ ರಾಜಕಾರಣ ಮಾಡಿದವರಲ್ಲ. ಅವರ ಮಾರ್ಗದಲ್ಲೇ ನಾವೆಲ್ಲರೂ ಸಾಗಬೇಕಿದೆ ಎಂದರು. ಜಿಪಂ ಸದಸ್ಯ ಕೆ.ಪಿ. ಪಾಲಯ್ಯ, ಪಪಂ ಅಧ್ಯಕ್ಷ ಎನ್.ಎಂ. ಹಾಲಸ್ವಾಮಿ, ಉಪಾಧ್ಯಕ್ಷ ಬ್ರಷ್ ಮಂಜು, ಬ್ಲಾಕ್ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ, ನಾಯಕ ಸಮಾಜದ ಅಧ್ಯಕ್ಷ ಬೋರಪ್ಪ ನಾಯಕ, ಯುವ ಘಟಕ ಉಪಾಧ್ಯಕ್ಷ ಬಸವರಾಜ ಬಾಬು, ಲತೀಫ್ ಸಾಬ್, ಮಾದಿಗ ಸಮಾಜದ ಮುಖಂಡ ಜಿ.ಎಂ.ಶಂಭುಲಿಂಗಪ್ಪ ಮಾತನಾಡಿದರು. ರಾಮರೆಡ್ಡಿ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಶಿವನಗೌಡ, ಪಪಂ ಸದಸ್ಯ ಇಕ್ಬಾಲ್ ಅಹಮ್ಮದ್ ಖಾನ್, ಕುರುಬ ಸಮಾಜದ ಮುಖಂಡ ಭೈರೇಶ್, ಶೇಖರಪ್ಪ ಇದ್ದರು.