ದಾವಣಗೆರೆ: ಶಿವಮೊಗ್ಗ ಹಾಲು ಒಕ್ಕೂಟದಿಂದ ಇಲ್ಲಿನ ವಿದ್ಯಾನಗರ ಮುಖ್ಯರಸ್ತೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಎದುರು ಎಟಿಎಂ ಪಾ ರ್ಲರನ್ನು ಸೋಮವಾರ ಶಿಮುಲ್ ನಿರ್ದೇಶಕ ಎಚ್.ಕೆ. ಪಾಲಾಕ್ಷಪ್ಪ ಉದ್ಘಾಟಿಸಿದರು.
ನಿರ್ದೇಶಕರಾದ ಡಿ.ಜಿ. ಷಣ್ಮುಖಪ್ಪ ಪಾಟೀಲ, ಎಂ.ಆರ್.ಮಹೇಶ್ವರಪ್ಪ, ಜಗದೀಶಪ್ಪ ಬಣಕಾರ್, ಹನುಮಂತಪ್ಪ ಇತರರು ಇದ್ದರು. ಶಿಮುಲ್ ಮಾರುಕಟ್ಟೆ ವ್ಯವಸ್ಥಾಪಕ ಸಿ.ಪಿ. ಶಿವಸ್ವಾಮಿ, ಉಪ ವ್ಯವಸ್ಥಾಪಕ ಡಾ. ಎಂ. ತಿಪ್ಪೇಸ್ವಾಮಿ, ಒಕ್ಕೂಟದ ಅಧಿಕಾರಿಗಳು ಹಾಜರಿದ್ದರು.