ಚನ್ನಗಿರಿ: ಗರ್ಭಿಣಿ ಸ್ತ್ರೀಯರು ಪೌಷ್ಟಿಕ ಆಹಾರ ಸೇವಿಸುವುದರಿಂದ ಹುಟ್ಟುವ ಮಗು ಆರೋಗ್ಯವಾಗಿರುತ್ತದೆ ಎಂದು ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಪ್ರೇಮಾ ಹೇಳಿದರು.
ಅವರು ಪಟ್ಟಣದ ಎ.ಕೆ. ಕಾಲೋನಿ ಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಪೌಷ್ಠಿಕ ಆಹಾರ, ಅತಿಸಾರ ಬೇದಿ, ಸ್ತನ್ಯಪಾನ ಸಪ್ತಾಹ ಮತ್ತು ಡೆಂಗ್ಯು ಜ್ವರ ವಿರೋದಿ ಮಾಸಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ತಾಯಂದಿರು ಮಗು ಜನಿಸಿದ ತಕ್ಷಣವೇ ಎದೆ ಹಾಲು ಕುಡಿಸಬೇಕು ಎಂದು ತಿಳಿಸಿದರು.
ಕಿರಿಯ ಆರೋಗ್ಯ ಸಹಾಯಕರಾದ ಅನುಸೂಯ ಹಾಗೂ ಶ್ರೀನಿವಾಸ್ ಅತಿಸಾರಬೇದಿ ಮತ್ತು ಕೀಟ ಜನ್ಯಗಳಿಂದ ಹರಡುವ ರೋಗಗಳ ಬಗ್ಗೆ ಮತ್ತು ನಿಯಂತ್ರಣದ ಬಗ್ಗೆ ವಿವರವಾಗಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪಪಂನ ಸದಸ್ಯ ಎಚ್. ಮಂಜುನಾಥ್ ವಹಿಸಿದ್ದರು, ಪುಷ್ಪವತಿ ಸ್ವಾಗತಿಸಿದರು. ಕಮಲಮ್ಮ ಪ್ರಾರ್ಥಿಸಿದರು.
--