ದಾವಣಗೆರೆ

ಪುಂಡರ ವಿರುದ್ಧ ಕಠಿಣ ಕ್ರಮ

ಹರಿಹರ:  ಬಾಲಕಿ ಅಥವಾ ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಠಾಣೆಯ ಪಿಎಸ್‌ಐ ಎಂ.ವಿ. ಮೇಘರಾಜ್ ತಿಳಿಸಿದರು.
ನಗರದ ಎಸ್‌ಜೆವಿಪಿ ಸ್ವಾಯತ್ತ ಕಾಲೇಜಿನ ಮಹಿಳಾ ವೇದಿಕೆ ಅಡಿಯಲ್ಲಿ ನಡೆದ ಮಹಿಳಾ ದೌರ್ಜನ್ಯ ತಡೆ ಹಾಗೂ ಸುರಕ್ಷೆ ಅಭಿಯಾನದ ಬಗ್ಗೆ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲಾ- ಕಾಲೇಜುಗಳು ಸೇರಿದಂತೆ ಇನ್ನಿತರ ಸ್ಥಳಗಳಿಗೆ ತೆರಳುವಾಗ ಕಿಡಿಗೇಡಿಗಳು ಅನವಶ್ಯಕವಾಗಿ ಮಾತನಾಡಲು ಪ್ರಯತ್ನಿಸುವುದು, ಸತಾಯಿಸುವುದು ಸೇರಿದಂತೆ ಇನ್ನಿತರ ಚೇಷ್ಠೆ ಮಾಡುತ್ತಿದ್ದರೆ, ಅವರ ಮುಖಚರ್ಯ ಹಾಗೂ ಅವರ ವಾಹನಗಳ ಸಂಖ್ಯೆ ನೆನಪಿಟ್ಟುಕೊಳ್ಳಿ. ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ನೇರವಾಗಿ ಅಥವಾ ಕರೆ ಮಾಡುವ ಮೂಲಕ ಮಾಹಿತಿ ನೀಡಿ ಎಂದು ತಿಳಿಸಿದರು.
ಇತ್ತೀಚೆಗೆ ಜಾರಿಗೊಂಡಿರುವ ಪೋಸ್ಕೋ ಕಾಯ್ದೆ, ಮಹಿಳಾ ಮತ್ತು ಮಕ್ಕಳ ದೌರ್ಜನ್ಯದ ಎಲ್ಲಾ ದೂರುಗಳಿಗೂ ಅನ್ವಯವಾಗುತ್ತದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಇ. ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು.
ಎಸ್‌ಜೆವಿಪಿ ಪೀಠದ ಉಪಾಧ್ಯಕ್ಷ ಡಿ.ಎಂ. ಹಾಲಸ್ವಾಮಿ ಮಹಿಳಾ ವೇದಿಕೆ ಅಧ್ಯಕ್ಷೆ ರೇಣುಕಾ ಸಂಕನಗೌಡ, ಐಕ್ಯೂಎಸಿ ಸದಸ್ಯ ಎ.ಎಸ್. ಹಿತ್ತಲಮನಿ, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇರಳದಲ್ಲಿ ಖಾತೆ ಹಂಚಿಕೆ ಗೊಂದಲ: ಕಾಂಗ್ರೆಸ್ ಹೈಕಮಾಂಡ್ ಸಲಹೆ ತಿರಸ್ಕರಿಸಿದ CM ಸತೀಶನ್; ಭಿನ್ನಮತ ಸ್ಫೋಟ..!

WTCಯಲ್ಲಿ ಭಾರತಕ್ಕೆ ದೊಡ್ಡ ಹಿನ್ನಡೆ: ಪಾಕಿಸ್ತಾನವನ್ನು 2-0 ಅಂತರದಿಂದ ಸೋಲಿಸಿ Team Indiaನ ಹಿಂದಿಕ್ಕಿದ ಬಾಂಗ್ಲಾ!

ನಮ್ಮ ನೋವನ್ನು ಆನಂದಿಸುತ್ತೀರಾ: ನನಗೆ ವಯಸ್ಸಾಗಿದೆ, ಆದರೆ ಹೋರಾಡೋದು ಮರೆತಿಲ್ಲ; ಸಲ್ಮಾನ್ ಖಾನ್ ಎಚ್ಚರಿಕೆ!

ಆನೇಕಲ್‌ನಲ್ಲಿ ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ರೈತರು, KRS ತೀವ್ರ ವಿರೋಧ!

ನಿಜಕ್ಕೂ ನಮ್ಮದು F…Good Team: ಲೈವ್​ನಲ್ಲೇ 'ಅಶ್ಲೀಲ ಪದ' ಬಳಸಿದ ರಿಷಭ್ ಪಂತ್, ವ್ಯಾಪಕ ಟೀಕೆ, Video!

SCROLL FOR NEXT