ದಾವಣಗೆರೆ

ತಾಲೂಕು ಕಚೇರಿ ಶೌಚಾಲಯ ಅವ್ಯವಸ್ಥೆ

ಚನ್ನಗಿರಿ:  ಇಲ್ಲಿನ ತಾಲೂಕು ಕಚೇರಿಯ ಸಾರ್ವಜನಿಕ ಶೌಚಾಲಯ ಸೂಕ್ತ ನಿರ್ವಹಣೆಯಿಂದ ವಂಚಿತವಾಗಿದೆ. ಅವ್ಯವಸ್ಥೆ ತಾಂಡವವಾಡುತ್ತಿದ್ದರೂ, ಸಂಬಂಧಪಟ್ಟವರು ಗಮನಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ.
2003ರಲ್ಲಿ ನಿರ್ಮಾಣವಾದ ಮಿನಿವಿಧಾನ ಸೌಧದಲ್ಲಿ ತಾಲೂಕು ಕಚೇರಿ, ಉಪನೊಂದಣಾಧಿಕಾರಿಗಳ ಕಚೇರಿ, ಸರ್ವೆ ಇಲಾಖೆ ಕಚೇರಿ, ಚುನಾವಣಾ ಶಾಖೆ, ಆಹಾರ ಇಲಾಖೆ ಮತ್ತು ಕ್ಷೇತ್ರದ ಶಾಸಕರ ಕಚೇರಿಗಳನ್ನು ತೆರೆಯಲಾಗಿದೆ.
ಸರ್ಕಾರಿ ಕೆಲಸಗಳಿಗಾಗಿ ನಿತ್ಯ ಇಲ್ಲಿಗೆ ಆಗಮಿಸುವ ನೂರಾರು ಜನರಿಗೆ ಇರುವ ಏಕೈಕ ಶೌಚಾಲಯ ಇದಾಗಿದೆ. ಹಲವಾರು ವರ್ಷಗಳಿಂದ ಶೌಚಾಲಯ ಸ್ವಚ್ಛಗೊಳಿಸಲಾಗಿಲ್ಲ. ತಾಲೂಕು ಆಡಳಿತ ಕೇಂದ್ರವಾದ ಮಿನಿ ವಿಧಾನ ಸೌಧದಲ್ಲಿಯೇ ಈ ಪರಿಸ್ಥಿತಿ ತಲೆದೋರಿರುವುದು ನಾಗರೀಕರ ದುರಂತ.
ಗ್ರಾಮಗಳು ನೈರ್ಮಲ್ಯವಾಗಲು ಪ್ರತಿ ಮನೆಗೂ ಶೌಚಾಲಯಗಳಿರಬೇಕು. ಅವು ಸ್ವಚ್ಛವಾಗಿರಬೇಕು ಎಂದು ಅಧಿಕಾರಿಗಳು ಪ್ರಚಾರ ನಡೆಸುತ್ತಾರೆ. ಆದರೆ, ಅವರೇ ಕೆಲಸ ಮಾಡುವ ಕಚೇರಿಯಲ್ಲಿ ಶೌಚಾಲಯಗಳು ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರೂ ಯಾರೂ ಈ ಬಗ್ಗೆ ಗಮನಿಸುಲ್ಲಿ. ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಗಮನ ಹರಿಸಲಿ ಎಂಬುದು ಸಾರ್ವಜನಿಕರ ಒತ್ತಾಯ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!