ದಾವಣಗೆರೆ

ಬಾಲಕಾರ್ಮಿಕರು, ಈಗ ಅಂಕ ವೀರರು

ಕ.ಪ್ರ. ವಾರ್ತೆ, ದಾವಣಗೆರೆ, ಜು.16
ಬಾಲಕಾರ್ಮಿಕರಾಗಿ ಹೊಲದಲ್ಲಿ ಹತ್ತಿ ಬಿಡಿಸುತ್ತಿದ್ದ ಹುಡುಗ, ಎಮ್ಮೆ, ಕುರಿ, ಮೇಕೆ ಕಾಯುತ್ತಿದ್ದ ಹುಡುಗಿಯರು ಬಿಎ, ಬಿಬಿಎಂ, ಬಿಕಾಂ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಸಾಧಕ ವಿದ್ಯಾರ್ಥಿಗಳಾಗಿ ಹೊರ ಹೊಮ್ಮಿದ್ದಾರೆ.
ಹರಪನಹಳ್ಳಿ ತಾ. ಜಂಗಮ ತುಂಬಿಗೆರೆ ಗ್ರಾಮದ ಎಂ. ರುದ್ರಪ್ಪ, ಕೆಂಚಮ್ಮ ದಂಪತಿಯ ಇಬ್ಬರು ಮಕ್ಕಳ ಪೈಕಿ ಕಿರಿಯ ಮಗ ಎಂ. ಪ್ರಭುದೇವನಿಗೆ ಓದುವಾಸೆ. ಆದರೆ, ತಂದೆ ಅನಾರೋಗ್ಯ ಆತನನ್ನು ಶಾಲೆಯಿಂದ ದೂರ ಉಳಿಯುವಂತೆ ಮಾಡಿತು. ಹೊಲದಲ್ಲಿ ಹತ್ತಿ ಬಿಡಿಸುವ ಕೂಲಿ ಕೆಲಸಕ್ಕೆ ಹೋಗುತ್ತಿತ್ತ ಆತ ಕುಟುಂಬಕ್ಕೆ ಆಧಾರವಾಗಿದ್ದ. ಅದೇ ವೇಳೆ ಆಲೂರು ಹಟ್ಟಿಯ ಚಾಮರ ನಾಯ್ಕ ಎಂಬವರಿಗೆ ಆಕಸ್ಮಿಕವಾಗಿ ಪ್ರಭುದೇವನ ಅಜ್ಜಿ ಭೇಟಿಯಾಗಿದ್ದರು. ಚಾಮರನಾಯ್ಕ ಭೇಟಿ ವೇಳೆ ಆಲೂರು ಹಟ್ಟಿಯ ಡಾನ್ ಬಾಸ್ಕೋ ಬಾಲಕಾರ್ಮಿಕರ ಪುನಶ್ಚೇತನ ಕೇಂದ್ರಕ್ಕೆ ಪ್ರಭುದೇವನನ್ನು ಸೇರಿಸುವಂತೆ ಅಜ್ಜಿಗೆ ಸಲಹೆ ಮಾಡಿದ್ದರು.
ಡಾನ್ಬಾಸ್ಕೋ ಸಂಸ್ಥೆ ಕಾರ್ಯಕರ್ತ ಹೀರ್ಯಾನಾಯ್ಕ ಮೂಲಕ ಎಂ. ಪ್ರಭುದೇವಗೆ ಬಾಲಕಾರ್ಮಿಕರ ವಿಶೇಷ ವಸತಿ ಶಾಲೆಗೆ ಕರೆ ತಂದರು. 1 ವರ್ಷ ಕೇಂದ್ರದಲ್ಲಿ ಕಲಿಕೆ ನಂತರ ದಾವಣಗೆರೆ ಆರ್ವಿಜಿಕೆ ಪ್ರೌಢಶಾಲೆಯಲ್ಲಿ 8ನೇ ತರಗತಿಗೆ ದಾಖಲಾಗಿ, ಎಸ್ಸೆಸ್ಸೆಲ್ಸಿಯಲ್ಲಿ ಶೇ. 56 ಅಂಕ ಪಡೆದು ಉತ್ತೀರ್ಣನಾಗಿದ್ದರನು. ನಂತರ ಪಿಯುಸಿ ಕಲಾ ವಿಭಾಗದಲಲ್ಲಿ ಶೇ. 85 ಅಂಕದೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದ. ಪಿಯುಸಿ ನಂತರ ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಯಲ್ಲಿ ಶೇ. 79.83 ಅಂಕ ಗಳಿಸುವ ಮೂಲಕ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾದ ಪ್ರಭುದೇವಗೆ ಮುಂದೆ ಎಂಎ, ಬಿಇಡಿ ಮಾಡಿ, ಶಿಕ್ಷಕನಾಗುವ ಆಸೆ ಇದೆ.
ಹಗರಿ ಬೂದಿಹಾಳ್ ಗ್ರಾಮದಲ್ಲಿ 5 ಮಕ್ಕಳ ತುಂಬು ಕುಟುಂಬದಲ್ಲಿ ಕಿತ್ತು ತಿನ್ನುವ ಬಡತನದ ಮಧ್ಯೆಯೂ ಹೊನ್ನಮ್ಮ ಎಂಬ ಬಾಲಕಿ ಎಮ್ಮೆ ಕಾಯಬೇಕಾಗಿದ್ದ ಹುಡುಗಿ ಇಂದು ಬಿಬಿಎಂ ಪರೀಕ್ಷೆಯಲ್ಲಿ ಶೇ. 78.80 ಅಂಕ ಪಡೆದು ಸಾಧನೆ ಮಾಡಿದ್ದಾಳೆ. 4ನೇ ತರಗತಿಗೆ ಶಾಲೆಯಿಂದ ಹೊರಗುಳಿದ ಹೊನ್ನಮ್ಮ ಎಮ್ಮೆ ಮೇಯಿಸುವ ಕೆಲಸಕ್ಕೆ ಸೇರಬೇಕಾಯಿತು. ಡಾನ್ ಬಾಸ್ಕೋ ಸಂಸ್ಥೆಯ ಬಾಲಕಾರ್ಮಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಾದ ಬಾಲಕಿ ತಿಪ್ಪಗೊಂಡನಹಳ್ಳಿ ಶಾಲೆಯಲ್ಲಿ ಹಿರಿಯ ಪ್ರಾಥಮಿಕ ವ್ಯಾಸಂಗ ಮಾಡಿ, ಗೋಮಾಳ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿಗೆ ದಾಖಲಾದಳು. ಪಿಯುಸಿಯಲ್ಲಿ ಶೇ. 61 ಅಂಕ ಪಡೆದು ಉತ್ತೀರ್ಣಳಾದ ಆಕೆ ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬಿಬಿಎಂ ಪದವಿಗೆ ದಾಖಲಾಗಿದ್ದಳು. ಇಂದು 591 ಅಂಕ ಗಳಿಸುವ ಮೂಲಕ ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣಳಾದ ಹೊನ್ನಮ್ಮಗೆ ಎಂ.ಕಾಂ. ಓದುವ ಗುರಿ ಇದೆ.
ಹಗರಿ ಬೂದಿಹಾಳ್ ಎಂಬ ಕುಗ್ರಾಮದಲ್ಲಿ ಕೆಂಚಪ್ಪ, ನಿಂಗಮ್ಮ ದಂಪತಿಯ ಮಗಳಾದ ಎಸ್. ಕೆಂಚಮ್ಮ ಕಡು ಬಡತನದ ಮಧ್ಯೆಯೂ ಮನೆಯಲ್ಲಿ ಮೇಕೆ ಕಾಯುವ ಸಲುವಾಗಿ 4ನೇ ತರಗತಿ ಓದುವಾಗಲೇ ಶಾಲೆ ಬಿಡಬೇಕಾಯಿತು. ಆದರೆ, ಡಾನ್ ಬಾಸ್ಕೋ ಸಂಸ್ಥೆಯ ಪರಿಶ್ರಮದಿಂದಾಗಿ ಕೆಂಚಮ್ಮ ಅಂದು ಉನ್ನತ ಶ್ರೇಣಿಯಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿ, ಇಂದು ಬಿಬಿಎಂನಲ್ಲಿ ಶೇ.71.71ರಂತೆ ಒಟ್ಟು 538 ಅಂಕ ಪಡೆದು, ಪ್ರಥಮ ಶ್ರೇಣಿಯಲ್ಲಿ ಸಾಧನೆ ಮಾಡಿದ್ದಾಳೆ. ಇಂದು ಉತ್ತಮ ಫಲಿತಾಂಶದೊಂದಿಗೆ ಸಾಧನೆ ಮಾಡಿದ್ದರೂ ಕುಟುಂಬದ ಆರ್ಥಿಕ ದುಸ್ಥಿತಿಯಿಂದಾಗಿ ಮುಂದಿನ ಓದಿನ ಬಗ್ಗೆ ಆಕೆ ಚಿಂತಿತಳಾಗಿದ್ದಾಳೆ.
ಹಳ್ಳಿಕೆರೆ ಗ್ರಾಮದಲ್ಲಿ ರಾಮಪ್ಪ, ರತ್ನಮ್ಮ ದಂಪತಿಯ 3ನೇ ಮಗಳಾದ ಶೃತಿ ಬಿಕಾಂನಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ. 5ನೇ ತರಗತಿ ಓದುವುದನ್ನು ಕೈಬಿಟ್ಟು, ಕುರಿ ಮೇಯಿಸಿಕೊಂಡು ಬರಲು ಶಾಲೆ ತೊರೆಯಬೇಕಾಯಿತು. ನಂತರ ಸಂಸ್ಥೆಯ ಕಾರ್ಯಕರ್ತರ ಮೂಲಕ ಡಾನ್ ಬಾಸ್ಕೋ ಸಂಸ್ಥೆಗೆ ಸೇರಿದ ಬಾಲಕಿ ಚಿತ್ರದುರ್ಗದ ಡಾನ್ ಬಾಸ್ಕೋ ಶಾಲೆಯ ಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಮುಗಿಸಿದಳು. ನಂತರ ಬಿಕಾಂಗೆ ದಾಖಲಾಗಿ ವ್ಯಾಸಂಗ ಮುಂದುವರಿಸಿದ ಯುವತಿ ಶೃತಿ ಇಂದು ಶೇ. 69ರಂತೆ ಅಂಕ ಗಳಿಸಿದ್ದಾಳೆ. ಎಂಕಾಂ ಓದಿ ಉನ್ನತ ನೌಕರಿ ಪಡೆಯುವ ಹಂಬಲ ಶೃತಿಯದ್ದು.
ಸಂಸ್ಥೆಯಲ್ಲಿ ಇದೇ ರೀತಿ 17 ವಿದ್ಯಾರ್ಥಿಗಳು ಬಿಎ, ಬಿಕಾಂ ಹಾಗೂ ಬಿಬಿಎಂ ಪದವಿ ಪರೀಕ್ಷೆಯಲ್ಲಿ 14 ಮಕ್ಕಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ ಐವರು ಡಿಸ್ಟಿಂಕ್ಷನ್ನಲ್ಲಿ, 7 ಜನ ಪ್ರಥಮ ಶ್ರೇಣಿಯಲ್ಲಿ, ಇಬ್ಬರು ದ್ವಿತೀಯ ಶ್ರೇಣಿಯಲ್ಲೂ ಉತ್ತೀರ್ಣರಾಗಿದ್ದಾರೆ. ಈ ಪೈಕಿ ಬಿಕಾಂನಲ್ಲಿ ಎ. ರೇಖಾ 567 ಅಂಕ, ಎನ್. ಚೇತನಕುಮಾರ 499, ಆರ್. ಶೃತಿ 483, ಪಿ. ಮಂಜುನಾಥ 421, ಸಿ. ಸಂಗೀತಾ 414 ಅಂಕ, ಬಿಬಿಎಂನಲ್ಲಿ ಎಸ್. ಹೊನ್ನಮ್ಮ 591, ಎಸ್. ಕೆಂಚಮ್ಮ 538 ಅಂಕ ಪಡೆದಿದ್ದಾರೆ.
ಬಿಎ ಪರೀಕ್ಷೆಯಲ್ಲಿ ಎಂ. ಪ್ರಭುದೇವ 479 ಅಂಕ, ಅಣ್ಣಪ್ಪ ನಾಯ್ಕ 454, ಜಿ. ಮಂಜುನಾಥ 422, ಎಸ್. ಹನುಮಂತಪ್ಪ 397, ಎ. ಕರಿಬಸಪ್ಪ 374, ಸಿ. ರಾಗಿಣಿ 356 ಅಂಕ, ಎಲ್. ನೇತ್ರಾವತಿ ಶೇ.75 ಅಂಕದೊಂದಿಗೆ ತೇರ್ಗಡೆಯಾಗಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕ ಫಾ. ಕುರಿಯಾಕೋಸ್ ತಿಳಿಸಿದ್ದಾರೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!