ಚನ್ನಗಿರಿ: ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆ ಸದಸ್ಯತ್ವ ಪಡೆಯಲು ಜುಲೈ 26ಕೊನೆ ದಿನ ಎಂದು ಮಣಿಪಾಲ ಕಸ್ತೂರಬಾ ಆಸ್ಪತ್ರೆ ಮಾರುಕಟ್ಟೆ ಸಹಾಯಕ ವ್ಯವಸ್ಥಾಪಕ ಅನಿಲ್ ಜೇಕಬ್ ಹೇಳಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಕಳೆದ ವರ್ಷ 1.5 ಲಕ್ಷ ಜನರು ಮಣಿಪಾಲ್ ಯೋಜನೆ ಕಾರ್ಡ್ ಪಡೆದಿದ್ದು ಇವರ ವಿವಿಧ ಕಾಯಿಲೆಗಳ ತಪಾಸಣೆ ಮತ್ತು ಚಿಕಿತ್ಸೆಗಾಗಿ ರು. 3 ಕೋಟಿ ಸೌಲಭ್ಯ ಪಡೆದಿದ್ದಾರೆ ಎಂದು ತಿಳಿಸಿದರು. 2014ರ ಆರೋಗ್ಯ ಕಾರ್ಡ್ ನೊಂದಣಿಗೆ ಮೊಬೈಲ್ ಸಂಖ್ಯೆ 9535777349, 9663513605, 9900593487 ಸಂಖ್ಯೆ ಸಂಪರ್ಕಿಸಲು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾರುಕಟ್ಟೆ ಪ್ರತಿನಿಧಿ ಚಿತ್ರೇಶ್ ಶೆಟ್ಟಿ, ಪ್ರತಿನಿಧಿಗಳಾದ ರವೀಂದ್ರ, ಓಂಕಾರಸ್ವಾಮಿ, ಶಿವಮೂರ್ತಿ ಉಪಸ್ಥಿತರಿದ್ದರು.