ದಾವಣಗೆರೆ

ಇಸ್ರೇಲ್ ದಾಳಿ ಖಂಡಿಸಿ ಪ್ರತಿಭಟನೆ

ದಾವಣಗೆರೆ: ಪ್ಯಾಲೆಸ್ತೇನ್ ಗಾಜಾ ಮೇಲೆ ಇಸ್ರೇಲ್ ಅಮಾನವೀಯ ದಾಳಿ ನಡೆಸುತ್ತಿರುವುದನ್ನು ಖಂಡಿಸಿ ಜಮಾಅತೆ- ಎ- ಇಸ್ಲಾಮಿ ಹಿಂದ್ ಸಂಘಟನೆ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
  ನಗರದ ಗಾಂಧಿ ವೃತ್ತದಲ್ಲಿ ಜಮಾ ಅತೆ- ಎ- ಇಸ್ಲಾಮಿ ಹಿಂದ್ ಸಂಘಟನೆ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಸಿ, ಮಾನವ ಸರಪಳಿ ನಿರ್ಮಿಸಲಾಯಿತು. ನಂತರ ರಸ್ತೆ ತಡೆ ನಡೆಸಿ ಪ್ರತಿಭಟಿಸಿ, ಉಪ ವಿಭಾಗಾಧಿಕಾರಿ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಸಂಘಟನೆ ಅಧ್ಯಕ್ಷ ಅಮೀರ್ ಜಾನ್, ಇಮಾಂ ಹುಸೇನ್ ಕುಂಚೂರು, ಷಫೀವುಲ್ಲಾ, ಬಾಷಾ ಸಾಬ್, ಮೈನುದ್ದೀನ್ ಸಾಬ್, ರೆಹಮಾನ್ ಸಾಬ್, ಅಯೂಬ್ ಖಾನ್, ಅಬು ಸ್ವಾಲೇಹ, ನೂರುಲ್ ಹಮೀದ್ ಮೊದಲಾದವರು  ್ದಇದ್ದರು.
ಸಾಹಿತ್ಯ ಅಧ್ಯಯನದಿಂದ ಬದುಕು ಬಂಗಾರ
ಹೊನ್ನಾಳಿ: ಸನ್ಮಾರ್ಗದಲ್ಲಿ ನಡೆಯುವುದಕ್ಕೆ ಸಾಹಿತ್ಯ ದಾರಿ ದೀಪವಾಗುವುದರಿಂದ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಸಾಹಿತ್ಯವನ್ನು ಅಧ್ಯಯನ ಮಾಡಬೇಕೆಂದು ಖ್ಯಾತ ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಹೇಳಿದರು.  
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿವಿಧ ಸಂಘಗಳ ಉದ್ಘಾಟನೆ, ಹೊಸ ಸಂಪದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಚಿಂತನಸಂತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಹಿತ್ಯ ವಿದ್ಯಾರ್ಥಿಗಳನ್ನಾಗಲಿ ಅಥವಾ ಯುವಕರನ್ನಾಗಲಿ ಅಡ್ಡ ದಾರಿಗೆ ತಳ್ಳಿದ ಉದಾಹರಣೆಗಳಿಲ್ಲ. ಆದರೆ ಇಂದು ಆಧುನಿಕತೆಯ ಹೆಸರಿನಲ್ಲಿ ಮೊಬೈಲ್ ಬಳಕೆ ಮತ್ತು ದೃಶ್ಯ ಮಾಧ್ಯಮಗಳಿಂದ ಒಳ್ಳೆಯದನ್ನು ಬಿಟ್ಟು, ಕೆಟ್ಟದನ್ನು ಪಡೆದು ಕೆಲ ಯುವ ಸಮುದಾಯ ಹಾಳಾಗಿರುವ ಘಟನೆಗಳು ನಮ್ಮ ಕಣ್ಣಮುಂದೆ ಸಾಕಷ್ಟಿದೆ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ತಾ.ಪಂ ಸದಸ್ಯ ಆರ್.ನಾಗಪ್ಪ ಮಾತನಾಡಿ, ಸರ್ಕಾರ ಇತ್ತೀಚಿಗೆ ವಿದ್ಯಾರ್ಥಿಗಳಿಗೆ ಇನ್ನಿಲ್ಲದಂಥ ಸೌಲಭ್ಯಗಳನ್ನು ಕೊಡುತ್ತಿವೆ. ಅದರ ಸದುಪಯೋಗವನ್ನು ಸದ್ಬಳಕೆ ಮಾಡಿಕೊಂಡರೆ ವಿದ್ಯಾರ್ಥಿ ಸಮಾಜ ಮುಖಿಯಾಗಿ ಕಾರ್ಯೋನ್ಮುಖನಾಗುತ್ತಾನೆ ಎಂದರು.ಪ್ರಾಚಾರ್ಯ ಬಸವರಾಜಪ್ಪ ಮಾತನಾಡಿ, ಕಾಲೇಜಿನಲ್ಲಿ ನಾವು ಅನೇಕ ಸಂಘಗಳನ್ನು ರಚನೆ ಮಾಡಿರುವ ಉದ್ದೆಶವೇ ಎಲ್ಲ ವಿದ್ಯಾರ್ಥಿಗಳು ರಚನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಲೆಂದು. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಈ ಸಂಘದಡಿಯಲ್ಲಿ ಬರುವ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.
ಕವಯಿತ್ರಿ,ನಟಿ, ನಿರ್ದೇಶಕಿ ಸರಸ್ವತಿ ಅವರು ಜಾನಪದೀಯ ಏಕವ್ಯಕ್ತಿ ಪ್ರದರ್ಶನ ಮಾಡಿದರು.
ನಿವೃತ್ತ ಉಪನ್ಯಾಸಕ ಸಿದ್ದಪ್ಪ, ಅಣ್ಣಪ್ಪ, ಉಬೇದುಲ್ಲಾ, ಬಿದರಗಡೆ ಚಂದ್ರಪ್ಪ, ಉಪನ್ಯಾಸಕ ಗೊಲ್ಲರಹಳ್ಳಿ ಮಂಜುನಾಥಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ, ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

15 ವರ್ಷದ ಹಳೆ ವಿಡಿಯೋ ಅದಂತೆ, ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್ ಗರಂ

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

'ಕುಟುಂಬದ ಕನಸು ನನಸು': ‘ಜೈಲರ್ 2’ ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!

ನೀಲಿ ಡ್ರಮ್‌ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!