ದಾವಣಗೆರೆ

ನೀರೆತ್ತುವ ಮೋಟಾರ್‌ಗೆ ಚಾಲನೆ

ಚನ್ನಗಿರಿ:  ತಾಲೂಕಿನ ಉಬ್ರಾಣಿ- ಅಮೃತಾಪುರ ಏತನೀರಾವರಿಯ ಕೆರೆಗಳಿಗೆ ನೀರು ತುಂಬಿಸುವ ಪ್ರಥಮ ಹಂತದ ಭದ್ರಾವತಿ ಬಳಿ ಇರುವ ಭದ್ರಾ ನದಿಯಿಂದ ನೀರು ಮೇಲೆತ್ತುವ ಮೋಟಾರ್ ಅನ್ನು ಸೋಮವಾರ ಚಾಲನೆ ಮಾಡಲಾಯಿತು ಎಂದು ಶಾಸಕ ವಡ್ನಾಳ್ ರಾಜಣ್ಣ ತಿಳಿಸಿದ್ದಾರೆ.
ಕಳೆದ ಹಲವಾರು ದಿನಗಳಿಂದ ಟ್ರಾನ್ಸ್‌ಫಾರ್ಮರ್ ಸುಟ್ಟು ಹೋಗಿದ್ದ ಕಾರಣ ಈ ಯೋಜನೆಗೆ ಸಂಬಂಧಪಟ್ಟ  ಕೆರೆಗಳಿಗೆ ನೀರು ಹರಿಯುವುದು ಸ್ಥಗಿತವಾಗಿತ್ತು. ಶಾಸಕರು ತಾಲೂಕಿನಲ್ಲಿ ಮಳೆ ಬಾರದೆ ಇದ್ದ ಕಾರಣ ಕೆರೆಗಳಲ್ಲಿದ್ದ ನೀರೆಲ್ಲಾ ಬತ್ತಿಹೋಗಿತ್ತು. ಇಂದಿನಿಂದ ಭದ್ರಾ ನದಿಯಿಂದ 20 ಕ್ಯುಸೆಕ್ ನೀರನ್ನು ಪ್ರತಿದಿನವೂ  ಹರಿಸಲಿದೆ. 2ನೇ ಹಂತದ ನೀರು ವಿತರಣಾ ಘಟಕವಾದ ಗಂಗೂರು ಬಳಿಯ ನೀರು ವಿತರಣಾ ಜಾಕ್‌ವೆಲ್‌ಗೆ ಬಂದು ಅಲ್ಲಿಂದ ತರೀಕೆರೆ ತಾಲೂಕು ಅಮೃತಾಪುರ ಹೋಬಳಿಗೆ ಮತ್ತು ಚನ್ನಗಿರಿ ತಾಲೂಕಿನ ಉಬ್ರಾಣಿ ಹೋಬಳಿಯ ಕೆರೆಗಳಿಗೆ ನೀರು ವಿತರಣೆಯಾಗುವುದು ಎಂದರು. ಈ ಯೋಜನೆಗೆ ಸಂಬಂಧಪಟ್ಟಂತೆ ಕೆಲವು ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ಹರಿಸಲು ಗುತ್ತಿಗೆ ದಾರರಿಂದಾ ಟೆಂಡರ್ ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಜು.24 ಕೊನೆಯ ದಿನ ನಿಗದಿಪಡಿಸಲಾಗಿದೆ. ಕೆರೆಗಳಿಗೆ ಪೈಪ್ ಅಳವಡಿಕೆಯ ಕೆಲಸವು ಆಗಸ್ಟ್ ತಿಂಗಳಿನಿಂದ ಆರಂಭವಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!