ದಾವಣಗೆರೆ: ಸಾದರ ನೌಕರರ ಬಳಗದಿಂದ ದಾವಣಗೆರೆ ನಗರ, ಗ್ರಾಮಾಂತರದ ಸಾದರ ಜನಾಂಗದ ಎಸ್ಸೆಸ್ಸೆಲ್ಸಿ, ಪಿಯುಸಿ ಕಲಾ, ವಾಣಿಜ್ಯ , ವಿಜ್ಞಾನ ವಿಷಯದ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಆ.9 ಅಂತಿಮ ದಿನ. ಅರ್ಹ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ದಾಖಲೆ ನಕಲು ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ ಕೆ. ನಾಗಪ್ಪ, ಅಧ್ಯಕ್ಷರು, ಸಾದರ ನೌಕರ ಬಳಗ, ನಂ. 1662/59, 9ನೇ ಕ್ರಾಸ್, ವಿದ್ಯಾನಗರ, ದಾವಣಗೆರೆ(ಮೊ.-98443- 69744)ಗೆ ಸಂಪರ್ಕಿಸಬಹುದು.