ಧಾರವಾಡ

ಕಂಟ್ರಿ ಕ್ಲಬ್ ವಿರುದ್ಧ ಸದಸ್ಯರ ಆಕ್ರೋಶ

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 5
ಕಂಟ್ರಿ ಕ್ಲಬ್ ಹೆಸರಿನಡಿಯಲ್ಲಿ ಸದಸ್ಯತ್ವ ಮಾಡಿಕೊಂಡು 2 ವರ್ಷಗಳೇ ಗತಿಸುತ್ತ ಬಂದರೂ ಯಾವುದೇ ರೀತಿಯ ಸೌಲಭ್ಯ ನೀಡಲಾಗುತ್ತಿಲ್ಲ ಎಂದು ಆರೋಪಿ ಕೆಲವು ಸದಸ್ಯರು ಕ್ಲಬ್‌ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ದೇಶಪಾಂಡೆ ನಗರದಲ್ಲಿ 2008ರಲ್ಲಿ ಕಂಟ್ರಿ ಕ್ಲಬ್ ಹೆಸರಿನಡಿ ಕ್ಲಬ್‌ನ್ನು ಹುಟ್ಟು ಹಾಕಲಾಗಿತ್ತೆನ್ನಲಾಗಿದೆ. ಪ್ರತಿಯೊಬ್ಬ ಸದಸ್ಯರಿಂದ ಸುಮಾರು ರು. 35 ಸಾವಿರ ಭರಿಸಿಕೊಳ್ಳಲಾಗಿತ್ತು. ಸದಸ್ಯತ್ವ ಪಡೆದುಕೊಂಡಿರುವ ಎಲ್ಲರಿಗೂ ಮುಂಬರುವ ದಿನಗಳಲ್ಲಿ ಗೋಕುಲ ರಸ್ತೆಯಲ್ಲಿ ವಾಟರ್ ವರ್ಲ್ಡ್‌ನಲ್ಲಿ ಮನರಂಜನೆಗೆ ತೆರಳಲು ಅವಕಾಶ ಕಲ್ಪಿಸಿಕೊಡುವುದಾಗಿ ಕ್ಲಬ್‌ನ ಆಡಳಿತ ಮಂಡಳಿ ಭರವಸೆ ನೀಡಿತ್ತೆನ್ನಲಾಗಿದೆ.
ಆದರೀಗ ವಾಟರ್ ವರ್ಲ್ಡ್‌ಗೂ ಕ್ಲಬ್‌ನ ಸದಸ್ಯರಿಗೂ ಯಾವುದೇ ರೀತಿ ಸಂಬಂಧವಿಲ್ಲ ಎಂದು ಹೇಳಿಕೊಂಡಿರುವುದು ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು 'ಕನ್ನಡಪ್ರಭ'ದೊಂದಿಗೆ ಮಾತನಾಡಿ ತಿಳಿಸಿದರು.
ಏತನ್ಮಧ್ಯೆ, ಮಂಗಳವಾರ ರಾತ್ರಿ ಅದೇ ಸ್ಥಳದಲ್ಲಿ ಕಂಟ್ರಿ ವೆಕೇಶನ್ ಎಂಬ ಹೆಸರಿನಡಿಯಲ್ಲಿ ಸಭೆ ನಡೆದಿದೆ ಎಂಬ ವಿಷಯ ತಿಳಿದ ಕಾಂಗ್ರೆಸ್ ಮುಖಂಡ ಮೋಹನ ಹಿರೇಮನಿ ಸೇರಿದಂತೆ ಕೆಲವು ಅವರ ಬೆಂಬಲಿಗರು ಅಲ್ಲಿಗೆ ತೆರಳಿದ್ದರು.
ಸಭೆ ನಡೆಸುತ್ತಿದ್ದ ಕ್ಲಬ್‌ನ ಸದಸ್ಯರು ಕಂಟ್ರಿ ಕ್ಲಬ್ ಹಾಗೂ ಕಂಟ್ರಿ ವೆಕೇಶನ್‌ಗೂ ಯಾವುದೇ ರೀತಿಯ ಸಂಬಂಧವೇ ಇಲ್ಲ ಎಂದು ತಿಳಿಸಿದರೆನ್ನಲಾಗಿದೆ. ಇದರಿಂದ ಕೆಂಡಾಮಂಡಲರಾದ ಸದಸ್ಯರು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೇ, ತಕ್ಷಣಕ್ಕೆ ತಮ್ಮ ಸದಸ್ಯತ್ವದ ಹಣ ವಾಪಸ್ಸು ನೀಡಬೇಕು ಎಂದು ಒತ್ತಾಯಿಸಿದರು.
ಇದರಿಂದಾಗಿ ಕೆಲಕಾಲ ದೇಶಪಾಂಡೆನಗರ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು. ಸುದ್ದಿ ತಿಳಿಯುತ್ತಿದಂತೆಯೇ ಎಸಿಪಿ ಎ.ಆರ್. ಬಡಿಗೇರ ಮಾರ್ಗದರ್ಶನದಲ್ಲಿ ಉಪನಗರ ಠಾಣೆ ಇನ್‌ಸ್ಪೆಕ್ಟರ್ ಶ್ರೀನಿವಾಸ ಹಂಡಾ ಸ್ಥಳಕ್ಕೆ ತೆರಳಿ ಪರಿಸ್ಥಿತಿ ನಿಭಾಯಿಸಿದರಲ್ಲದೇ, ಸದಸ್ಯತ್ವ ಪಡೆದ ಸದಸ್ಯರು ಹಾಗೂ ಕ್ಲಬ್‌ನ ಆಡಳಿತ ಮಂಡಳಿಯ ಸದಸ್ಯರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ಕುರಿತಂತೆ ಸದ್ಯ ಯಾವುದೇ ರೀತಿಯ ಪ್ರಕರಣ ದಾಖಲಾಗಿಲ್ಲ ಎಂದು ಹಂಡಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!