ಧಾರವಾಡ

ಬಿಎಸ್‌ವೈ ಸಾಧನೆ ಗೆಲುವಿಗೆ ಸೋಪಾನ

ಹುಬ್ಬಳ್ಳಿ:  ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾದರೂ ಹುಬ್ಬಳ್ಳಿ-ಧಾರವಾಡ ಮಹಾನಗರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಪಾಲಿಕೆಗೆ ರು. 200 ಕೋಟಿ ವಿಶೇಷ ಅನುದಾನ ನೀಡಿದ್ದು ಜನತೆ ಮರೆತಿಲ್ಲ. ಇದೇ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿರುವ ಕೆಜೆಪಿ ಅಭ್ಯರ್ಥಿಗಳಿಗೆ ಗೆಲುವಿನ ಸೋಪಾನವಾಗಲಿದೆ.
ಹೀಗೆಂದು ವಿಶ್ವಾಸ ವ್ಯಕ್ತಪಡಿಸಿದವರು ಮಾಜಿ ಸಚಿವರು ಆಗಿರುವ ಕೆಜೆಪಿ ಮುಖಂಡ ಜಬ್ಬಾರಖಾನ್ ಹೊನ್ನಳ್ಳಿ.  ಮಹಾನಗರ ಪಾಲಿಕೆಯ 67 ವಾರ್ಡ್‌ಗಳ ಪೈಕಿ 65 ಕಡೆಗಳಲ್ಲಿ ಕೆಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, 35-40 ಅಭ್ಯರ್ಥಿಗಳು ಗೆಲುವು ಸಾಧಿಸುವುದು ನಿಸ್ಸಂಶ. ಸ್ಥಳೀಯ ಚುನಾವಣೆ ಹಿನ್ನಲೆಯಲ್ಲಿ 'ಕನ್ನಡಪ್ರಭ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೊನ್ನಳ್ಳಿ ಒಟ್ಟಾರೆ ಹೇಳಿದಿಷ್ಟು:
ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ರಾಜ್ಯದ ಎರಡನೇ ರಾಜಧಾನಿ ಎಂದು ಕರೆಯಿಸಿಕೊಳ್ಳುವ ಅವಳಿನಗರದ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿವಹಿಸಿದ್ದರು ಎಂಬುದಕ್ಕೆ ಬಿಎಸ್‌ವೈ ಪಾಲಿಕೆ ನೀಡಿರುವ ವಿಶೇಷ ಅನುದಾನವೇ ಸಾಕ್ಷಿಯಾಗಿದೆ. ರಾಜ್ಯದ ಇತಿಹಾಸದಲ್ಲೇ ಪಾಲಿಕೆ ಇಷ್ಟೊಂದು ದೊಡ್ಡ ಮೊತ್ತದ ಅನುದಾನ ಬಿಡುಗಡೆಯಾಗಿರಲಿಲ್ಲ.  ಈ ಅನುದಾನದಲ್ಲಿ ಅವಳಿನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳು ಆಗಿವೆ. ಆದಾಗ್ಯೂ, ಮಹಾನಗರಿಗರು ಸಮರ್ಪಕ ಕುಡಿಯುವ ತೊಂದರೆಯನ್ನೂ ಈಗಲೂ ಎದುರಿಸುತ್ತಿದ್ದಾರೆ. ಪ್ರಮುಖ ರಸ್ತೆಗಳು ಹೊಳಪು ಪಡೆದುಕೊಂಡಿವೆಯಾದರೂ ಇನ್ನೂ ಬಹುತೇಕ ಕಡೆಗಳಲ್ಲಿ ಕಚ್ಚಾ ರಸ್ತೆಗಳೇ ಕಾಣಸಿಗುತ್ತವೆ.
ಪೊಳ್ಳ ಆಶ್ವಾಸನೆ: ಬಿಎಸ್‌ವೈ ನಂತರ, ಬಿಜೆಪಿಯಲ್ಲಿ ಆಡಳಿತ ನಡೆಸುತ್ತಿರುವ ನಾಯಕರುಗಳು ಪೊಳ್ಳು ಆಶ್ವಾಸನೆಗಳನ್ನು ನೀಡಿದ್ದೇ ಅವರುಗಳ ಸಾಧನೆಯಾಗಿದೆ. ಮತದಾರರು ಈಗ ಜಾಗೃತರಾಗಿದ್ದಾರೆ. ಪಾಲಿಕೆ  ಚುನಾವಣೆಯಲ್ಲಿ ಕಮಲ ಪಕ್ಷಕ್ಕೆ ತಕ್ಕಪಾಠ ಕಲಿಸಲು ಜನರು ಉತ್ಸುಕರಾಗಿದ್ದು ಫಲಿತಾಂಶದ ನಂತರ ಬಿಜೆಪಿಯ ಬಣ್ಣ ಬಯಲಾಗಲಿದೆ.  ಜನಸಾಮಾನ್ಯರಿಗೆ ಮೂಲ ಸೌಕರ್ಯ ಒದಗಿಸಿಕೊಡುವುದೇ ಕೆಜೆಪಿಯ ಮೂಲ ಉದ್ದೇಶವಾಗಿದೆ. ಬಿಎಸ್‌ವೈ, ಕೊಟ್ಟ ಮಾತಿನಂತೆ ನಡೆದುಕೊಳ್ಳುವ ನಾಯಕರು ಎಂಬುದು ಇಡೀ ರಾಜ್ಯದ ಜನತೆಗೆ ತಿಳಿದಿದೆ. ಮೂರುವರೆ ವರ್ಷ ಸಿಎಂ ಆಗಿ ಅವರು ಕೈಗೆತ್ತಿಕೊಂಡಿರುವ ಜನಪರ ಯೋಜನೆಗಳು ಈ ಮಾತಿಗೆ ಸಾಕ್ಷಿಯಾಗಿ ನಿಲ್ಲುತ್ತವೆ. ಮೂಲ ಸೌಕರ್ಯ ದೊರಕಿಸಿಕೊಡುವ ಭರವಸೆಯನ್ನು ಮುಂದಿಟ್ಟುಕೊಂಡೇ ಮಹಾನಗರ ಪಾಲಿಕೆ ಚುನಾವಣೆಯನ್ನು ಎದುರಿಸಲಾಗುವುದು.
ಈಡೇರದ ನಿರೀಕ್ಷೆ: ಇದೇ ಭಾಗದವರು ಮುಖ್ಯಮಂತ್ರಿಯಾಗುತ್ತಿದಂತೆಯೇ ಇಲ್ಲಿನ ಜನತೆ ನೂರಾರು ಕನಸು ಕಂಡಿದ್ದರು. ಆದರೆ, ಸಿಎಂ ಶೆಟ್ಟರ್ ಅವರಿಂದ ಯಾವುದೇ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂಬ ನೋವು ಅವಳಿನಗರದ ಪ್ರತಿಯೊಬ್ಬ ಮತದಾರನಲ್ಲಿಯೂ ಇದೆ. ಶೆಟ್ಟರ್ ತಮಗೆ ಸಿಕ್ಕ ಅವಕಾಶವನ್ನು ರಾಜಕೀಯವಾಗಿ ಬೆಳೆಯಲು ಉಪಯೋಗಿಸಿಕೊಂಡಿದ್ದು ಬಿಟ್ಟರೇ ಮತ್ತೇನೂ ಮಾಡಿಲ್ಲ.  ಅವಳಿನಗರದಲ್ಲಿ ಬಹಳಷ್ಟು ಅಕ್ರಮ ಬಡಾವಣೆಗಳು ತಲೆ ಎತ್ತಿವೆ. ಕಡು ಬಡವ ಹಾಗೂ ಬಡ ವರ್ಗದ ಜನರೇ ಇಂತಹ ಪ್ರದೇಶಗಳಲ್ಲಿ ವಾಸವಾಗಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಗೊಂಡಲ್ಲಿ, ಅಕ್ರಮ ಬಡಾವಣೆಗಳನ್ನು ಸಕ್ರಮಗೊಳಿಸಲು ಆದ್ಯತೆ ನೀಡಲಾಗುವುದು. ಕೆಜೆಪಿ ಸಂಸ್ಥಾಪಕ ಬಿಎಸ್‌ವೈ, ಅತಿ ಕಡಿಮೆ ಅವಧಿಯಲ್ಲಿ ಜಾರಿಗೆ ತಂದಿರುವ ಅಭಿವೃದ್ಧಿ ಯೋಜನೆಗಳಿಂದ ಜನತೆ ಸಂತಸಗೊಂಡಿದ್ದು ಮತ್ತೇ ಅವರನ್ನೇ ಸಿಎಂ ಕುರ್ಚಿಯಲ್ಲಿ ನೋಡಬೇಕೆಂಬ ಆಸೆ ವ್ಯಕ್ತಪಡಿಸುತ್ತಿದ್ದಾರೆ.  ಈ ಸ್ಥಳೀಯ ಸಂಸ್ಥೆ ಚುನಾವಣೆಯಿಂದ ಹಿಡಿದು ವಿಧಾನಸಭೆ ಚುನಾವಣೆಯಲ್ಲಿಯೂ ಕೆಜೆಪಿ, ಮತದಾರ ಪ್ರಭುವಿನ ಆರ್ಶೀವಾದಿಂದ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!