ಧಾರವಾಡ

ಬೇಂದ್ರೆ ಮಾಸ್ತರ್ ದಿನಾಚರಣೆ

ಕನ್ನಡಪ್ರಭ ವಾರ್ತೆ, ಧಾರವಾಡ, ಜ. 24
ಪ್ರತಿ ವರ್ಷ ಅಕ್ಟೋಬರ್ 5ರಂದು ವಿಶ್ವ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದ್ದು, ದ.ರಾ. ಬೇಂದ್ರೆ ಅವರೊಬ್ಬ ಶಿಕ್ಷಕರಾಗಿದ್ದ ಹಿನ್ನೆಲೆಯಲ್ಲಿ ಆ ದಿನವನ್ನು ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಪ್ರಸಕ್ತ ವರ್ಷದಿಂದ ಬೇಂದ್ರೆ ಮಾಸ್ತರ ದಿನಾಚರಣೆಯಾಗಿ ಆಚರಿಸಲು ನಿರ್ಧರಿಸಿದೆ ಎಂದು ಟ್ರಸ್ಟ್ ಅಧ್ಯಕ್ಷ ಡಾ. ಶ್ಯಾಮಸುಂದರ ಬಿದರಕುಂದಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದಿನದಂದು ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರುವ ಶಿಕ್ಷಕರನ್ನು ಗುರುತಿಸಿ ಬೇಂದ್ರೆ ಮಾಸ್ತರ ಪುರಸ್ಕಾರ ನೀಡಲಾಗುವುದು ಎಂದರು. ಇಂತಹ ಅಪರೂಪದ ಕವಿಯ ಜನ್ಮದಿನವನ್ನು ಕಳೆದ 10 ವರ್ಷಗಳಿಂದ ಪ್ರತಿ ಜ. 31ರಂದು ಟ್ರಸ್ಟ್ ವಿಶಿಷ್ಠವಾಗಿ ಆಚರಿಸುತ್ತ ಬಂದಿದೆ. ಬೇಂದ್ರೆ ಕವಿತ್ವ ಮತ್ತು ವ್ಯಕ್ತಿತ್ವ ಅರಿತು, ಅಳವಡಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದವರನ್ನು ಗುರುತಿಸಿ, ಗೌರವಿಸುವ ನಿಟ್ಟಿನಲ್ಲಿ ಬೇಂದ್ರೆ ಟ್ರಸ್ಟ್ ಬೇಂದ್ರೆ ಹೆಸರಿನ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ ಬೆಂಗಳೂರಿನ ಲೇಖಕ ಡಾ.ಎಚ್.ಎಸ್. ರಾಘವೇಂದ್ರರಾವ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು. ಬೇಂದ್ರೆ ಟ್ರಸ್ಟ್‌ನ ಇನ್ನಿತರೆ ಯೋಜನೆಗಳ ಕುರಿತು ಮಾತನಾಡಿದ ಬಿದರಕುಂದಿ, ಚಿತ್ರಕಲಾ ಶಾಲೆಗಳಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಬೇಂದ್ರೇ ಅವರ ಕವಿತೆ ವಿವರಿಸಿ, ಕವನದ ಆಶಯಗಳನ್ನು ಅನಾವರಣಗೊಳಸುವ ಹಾಗೂ ಬೇಂದ್ರೆ ಬದುಕು, ವ್ಯಕ್ತಿ ಹೀಗೆ ವಿಭಿನ್ನ ಆಯಾಮಗಳಲ್ಲಿ ಕಲಾಕೃತಿ ತಯಾರಿಸುವ ಶಿಬಿರವೊಂದನ್ನು ಮಾರ್ಚ್ ಕೊನೆ ವಾರದಲ್ಲಿ ಆಯೋಜಿಸಲು ಚಿಂತಿಸಲಾಗಿದೆ ಎಂದರು. ಹಿರಿಯ ಚಿತ್ರಕಲಾವಿದ ಎಂ.ಆರ್. ಬಾಳಿಕಾಯಿ ನೇತೃತ್ವದಲ್ಲಿ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ರೂಪಗೊಳ್ಳುವ ಕಲಾಕೃತಿಗಳು ಬೇಂದ್ರೆ ಭವನವನ್ನು ಇನ್ನಷ್ಟು ಸುಂದರಗೊಳಿಸುವ ಆಶಯವಿದೆ ಎಂದರು.
ಅಲ್ಲದೇ, ವಿವಿಧ ಕಾಲೇಜುಗಳ 30 ಜನ ಕನ್ನಡ ಉಪನ್ಯಾಸಕರನ್ನು ಆಯ್ಕೆ ಮಾಡಿ, ಭೋದನಾಪರ ಶಿಬಿರ ಆಯೋಜಿಸುವ ಯೋಜನೆ ಇದೆ. ಬೇಂದ್ರೆ ಅವರ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ, ಕಾಲೇಜುಗಳಲ್ಲಿ ಉಪನ್ಯಾಸ ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿಯೂ ಬೇಂದ್ರೆ ಸಾಹಿತ್ಯದ ಕುರಿತು ಅರಿವು ಮೂಡಿಸುವುದು ಶಿಬಿರದ ಉದ್ದೇಶ ಎಂದರು.
ಟ್ರಸ್ಟ್‌ಗೆ ಬರುವ ಅನುದಾನ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸರ್ಕಾರ ಟ್ರಸ್ಟ್‌ಗೆ ವಾರ್ಷಿಕ 12 ಲಕ್ಷ ನೀಡುತ್ತಿದೆ. ಇದೇ ಹಣದಲ್ಲಿ ವರ್ಷಪೂರ್ತಿ ಚಟುವಟಿಕೆ ನಡೆಸುವ ಜೊತೆ, ಸಿಬ್ಬಂದಿ ಸಂಬಳ, ಬೇಂದ್ರೇ ಭವನ ನಿರ್ವಹಣೆ ಮಾಡಬೇಕಿದೆ. ಆದ್ದರಿಂದ ಸಿಬ್ಬಂದಿ ವೇತನಕ್ಕಾಗಿ ವಿಶೇಷ ಅನುದಾನ ನೀಡಿದರೆ ಟ್ರಸ್ಟ್ ಇನ್ನಷ್ಟು ಕ್ರಿಯಾಶೀಲವಾಗಿ ಚಟುವಟಿಕೆ ಹಮ್ಮಿಕೊಳ್ಳಲು ಸಾಧ್ಯ. ಈ ಕುರಿತು ಮುಖ್ಯಮಂತ್ರಿ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು. ಗೋಷ್ಠಿಯಲ್ಲಿ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಬಿ.ಡಿ. ಹಿರೇಗೌಡರ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ, ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

15 ವರ್ಷದ ಹಳೆ ವಿಡಿಯೋ ಅದಂತೆ, ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': ‘ಜೈಲರ್ 2’ ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!

ನೀಲಿ ಡ್ರಮ್‌ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ