ಹುಬ್ಬಳ್ಳಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀರಾಘವೇಂದ್ರ ಕೃಪಾಪೋಷಿತ ಸ್ತ್ರೀ ನಾಟಕ ಸಂಘದ ವತಿಯಿಂದ ಫೆ. 1ರಂದು ಸಂಜೆ 6ಕ್ಕೆ ವೀರಾಪುರ ಓಣಿಯ ಮಹಾಬಳೇಶ್ವರ ದೇವಸ್ಥಾನದಲ್ಲಿ ಒಂದೇ ಬಳ್ಳಿಯ ಹೂವುಗಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ನಾಳೆ ಅಲ್ಟ್ರಾಟೆಕ್ ಪ್ರಶಸ್ತಿ
ಹುಬ್ಬಳ್ಳಿ: ಉತ್ತರ ಕರ್ನಾಟಕದ ವಿಶಿಷ್ಟ ಕಾಂಕ್ರಿಟ್ ಕಟ್ಟಡಗಳು ಮತ್ತು ಉತ್ತಮವಾಗಿ ನಿರ್ಮಿಸಿದ ಮನೆಗಳಿಗೆ ಅಲ್ಟ್ರಾಟೆಕ್ ಸಿಮೆಂಟ್ ಪ್ರಶಸ್ತಿಯನ್ನು ಫೆ. 2ರಂದು ಸಂಜೆ 6ಕ್ಕೆ ನವೀನ್ ಹೊಟೆಲ್ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ವಿತರಿಸಲಾಗುವುದು. ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ನ ಎನ್. ಶಿವಶೈಲಂ, ಅಲ್ಟ್ರಾಟೆಕ್ ಸಿಮೆಂಟ್ ಹಿರಿಯ ಉಪಾಧ್ಯಕ್ಷ ಡಾ. ಮೋಹನ್ ಕಲಗಾಲ, ಮುಖ್ಯ ಎಂಜಿನಿಯರ್ ಓ.ಕೆ. ಸ್ವಾಮಿ ಆಗಮಿಸಲಿದ್ದಾರೆ.