ಕನ್ನಡಪ್ರಭ ವಾರ್ತೆ, ಕುಂದಗೋಳ, ಆ. 4
ಅನಿಯಮಿತ ವಿದ್ಯುತ್ ಸರಬರಾಜು, ಲೋಡ್ ಶೆಡ್ಡಿಂಗ್ ವಿರೋಧಿಸಿ ರಾಜ್ಯ ಬಿಜೆಪಿ ರೈತ ಮೋರ್ಚಾ ತಾಲೂಕು ಘಟಕದಿಂದ ಸೋಮವಾರ ಹೆಸ್ಕಾಂ ಕಚೇರಿಗೆ ತೆರಳಿ ಹೆಸ್ಕಾಂ ಅಧಿಕಾರಿ ಅಸೂಟಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾಲತೇಶ ಶಾಗೋಟಿ ಮಾತನಾಡಿ, ರಾಜ್ಯ ಇಂಧನ ಖಾತೆ ಸಚಿವ ಡಿ.ಕೆ. ಶಿವಕುಮಾರ ಅಧಿಕಾರ ವಹಿಸಿಕೊಂಡ ಕೂಡಲೇ ರೈತರಿಗೆ ವಿದ್ಯುತ್ ಪೂರೈಸುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ಅನಿಯಮಿತ ವಿದ್ಯುತ್ ಪೂರೈಸುವುದರಿಂದ ಮತ್ತು ಗ್ರಾಮೀಣ ಪ್ರದೇಶದಲ್ಲಿ ಲೋಡ್ ಶೆಡ್ಡಿಂಗ್ ಅಳವಡಿಸಿದ್ದು, ರಾಜ್ಯದ ಜನತೆ ರೋಸಿ ಹೋಗಿದ್ದಾರೆ. ಕಾರಣ ಕೂಡಲೇ ಸರ್ಕಾರದವರು ಇನ್ನಾದರೂ ಎಚ್ಚೆತ್ತುಕೊಂಡು ಅನಿಯಮಿತ ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಕಾಡಪ್ಪ ಜಠಾರ, ಗೀರಿಶ ಹಂಚನಾಳ, ವಿ.ಕೆ. ಹುಡೇದ, ಆರ್.ವೈ. ಮಲ್ಲಿಗೌಡ್ರ, ಕಂಟೆಪ್ಪಗೌಡ್ರ. ಸಿ.ಪಿ. ಬಿಸೇರೊಟ್ಟಿ, ರಾಜು ಶಿವಳ್ಳಿ, ಕೆ.ಸಿ. ಪಾಟೀಲ, ಸಿ.ಬಿ. ಪಾಟೀಲ, ವಿಠ್ಠಲ ಚಹ್ವಾಣ, ವೈ.ಎನ್. ಪಾಟೀಲ, ಸತೀಶ ಪಾಟೀಲ ಇದ್ದರು.