ಧಾರವಾಡ

ಶಾಸಕರಿಂದ ಅಭಿಪ್ರಾಯ ಸಂಗ್ರಹ

ಗಜೇಂದ್ರಗಡ:  ಗಜೇಂದ್ರಗಡ ತಾಲೂಕು ರಚನೆ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವ ಸಭೆ ಶಾಸಕರ ನೇತೃತ್ವದಲ್ಲಿ ಬುಧವಾರ ಸರ್ಕಾರಿ ಡಿಪ್ಲೊಮಾ ಕಾಲೇಜಿನಲ್ಲಿ ನಡೆಯಿತು.
ಗಜೇಂದ್ರಗಡ ತಾಲೂಕು ಘೋಷಣೆ ಕುರಿತು ಸಭೆಯಲ್ಲಿ ಸಾರ್ವಜನಿಕರ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ಶಾಸಕ ಜಿ.ಎಸ್. ಪಾಟೀಲ, ಉಪವಿಭಾಗ ಅಧಿಕಾರಿ ಐ.ಜಿ. ಗದ್ಯಾಳ, ತಹಸೀಲ್ದಾರ್ ಎಂ.ಬಿ. ಬಿರಾದಾರ, ಗಜೇಂದ್ರಗಡ ವಿಶೇಷ ತಹಸೀಲ್ದಾರ್ ಪಿ.ಬಿ. ಮೇಲಿನಮನಿ, ಪುರಸಭೆ  ಅಧ್ಯಕ್ಷೆ ಕವಿತಾ ಜಾಲಿಹಾಳ, ಮುಖ್ಯಾಧಿಕಾರಿ ಹನುಮಂತಮ್ಮ, ಪಿಎಸ್‌ಐ ಎಚ್.ಆರ್. ನಡುಗಡ್ಡಿ ಜನರ ಅಭಿಪ್ರಾಯ ಸಂಗ್ರಹಿಸಿದರು.
ಉಪ ವಿಭಾಗಾಧಿಕಾರಿ ಐ.ಜಿ. ಗದ್ಯಾಳ ನಿಯೋಜಿತ ಗಜೇಂದ್ರಗಡ ತಾಲೂಕು ರಚನೆಗೆ ಒಳಪಡುವ ವ್ಯಾಪ್ತಿ ಹಾಗೂ ಆಡಳಿತಾತ್ಮಕ ಪ್ರಸ್ತಾವನೆಯ ವಿವರಣೆ ನೀಡಿದರು. ಗಜೇಂದ್ರಗಡ ಹೊಸ ತಾಲೂಕು ವ್ಯಾಪ್ತಿಗೆ ನರೇಗಲ್, ಮಾರನಬಸರಿ, ನಾಗೇಂದ್ರಗಡ, ಚಿಲಝರಿ, ಲಕ್ಕಲಕಟ್ಟಿ, ಉಣಚಗೇರಿ (ಗಜೇಂದ್ರಗಡ), ಅಮರಗಟ್ಟಿ, ಪುರ್ತಗೇರಿ, ರುದ್ರಾಪುರ, ಹಿರೇಕೊಪ್ಪ, ಮಾಟರಂಗಿ, ರಾಂಪುರ, ನಾಗರಸಕೊಪ್ಪ, ವೀರಾಪುರ, ಗೊಗೇರಿ, ಕುಂಟೋಜಿ, ರಾಜೂರ, ವದೆಗೋಳ, ಭೈರಾಪುರ, ಜಿಗೇರಿ, ಕೊಡಗಾನೂರ, ಮ್ಯಾಕಲಝರಿ, ದಿಂಡೂರ, ಗೌಡಗೇರಿ, ನಿಡಗುಂದಿ, ಬೆಣಚಮಟ್ಟಿ, ಕಳಕಾಪುರ, ಸೂಡಿ, ಬಳಗೋಡ, ಬೇವಿನಕಟ್ಟಿ, ಗುಳಗುಳಿ, ಇಟಗಿ, ದ್ಯಾಮುಣಸಿ, ಮುಶಿಗೇರಿ, ಹಿರೇಅಳಗುಂಡಿ, ಶಾಂತಗೇರಿ, ಚಿಕ್ಕಅಳಗುಂಡಿ, ನೆಲ್ಲೂರ, ಹಿರೇಕುರುಮನಾಳ, ಬೊಮ್ಮಸಾಗರ, ಕಲ್ಲಿಗನೂರ, ಸರ್ಜಾಪುರ, ಹಾಳಕೇರಿ, ಗ್ರಾಮ ಸೇರಿ ಒಟ್ಟು 43 ಗ್ರಾಮಗಳು ಸರ್ಕಾರದ ಪ್ರಸ್ತಾವನೆ ಪಟ್ಟಿಯಲ್ಲಿವೆ.
ಆದರೆ ಸಭೆಯಲ್ಲಿ ಕೆಲವರು ಬೈರಾಪುರ ತಾಂಡಾ, ಹೊಸರಾಂಪುರ, ಕೃಷ್ಣಾಪುರ, ನಾಗರಸಕೊಪ್ಪ ತಾಂಡಾ, ಕಾಲಕಾಲೇಶ್ವರ, ಪ್ಯಾಟಿ, ನಿಡಗುಂದಿಕೊಪ್ಪ ಗಜೇಂದ್ರಗಡ ತಾಲೂಕಿಗೆ ಸೇರಿಸಲು ಸಲಹೆ ನೀಡಿದರು. ಗಜೇಂದ್ರಗಡ ತಾಲೂಕು ಕೇಂದ್ರಕ್ಕೆ ನರೇಗಲ್ ಮತ್ತು ಸೂಡಿಯನ್ನು ಹೋಬಳಿ ಕೇಂದ್ರಗಳನ್ನಾಗಿ ಗುರ್ತಿಸಲಾಗಿದೆ ಎಂದು ಉಪವಿಭಾಗಾಧಿಕಾರಿಗಳು ಹೇಳಿದರು.  ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಈ ಹಿಂದೆ ನಾಲ್ಕು ಸಮಿತಿಗಳು ವರದಿ ನೀಡಿದ್ದವು. ಅದರಲ್ಲಿ ಎಂ. ವಾಸುದೇವರಾವ್, ಹುಂಡೇಕಾರ ಸಮಿತಿಗಳು ಗಜೇಂದ್ರಗಡ ತಾಲೂಕು ಕೇಂದ್ರವಾಗಲು ಅರ್ಹವಾಗಿದೆ ಎಂದು ವರದಿ ಸಲ್ಲಿಸಿದ್ದವು. ಆದರೆ ರಾಜ್ಯ ಸರ್ಕಾರ ಜನರ ನಿರೀಕ್ಷೆಯಂತೆ ತಾಲೂಕು ರಚನೆಗೆ ಮುಂದಾಗಿರುವುದು ಸಂತಸ ತಂದಿದೆ ಎಂದರು. ಪುರಸಭೆ ಸ್ಥಾಯಿ ಸಮಿತಿ ಚೇರ್‌ಮನ್ ಅಶೋಕ ವನ್ನಾಲ, ರಾಜೂರ ಗ್ರಾಪಂ ಮಾಜಿ ಉಪಾಧ್ಯಕ್ಷ ಶಶಿಧರ ಹೂಗಾರ, ದಸ್ತಗಿರಸಾಬ ಗೊಡೇಕಾರ, ಉಮೇಶ ರಾಠೋಡ ಸಲಹೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT