ದಾಂಡೇಲಿ: ಕರ್ನಾಟಕ ರಾಜ್ಯ ವಕೀಲರ ಸಂಘ, ದಾಂಡೇಲಿ ನ್ಯಾಯವಾದಿಗಳ ಸಂಘ ಮತ್ತು ಸಿದ್ದಾಪುರದ ಧರ್ಮಶ್ರೀ ಫೌಂಡೇಶನ್ ಆಶ್ರಯದಲ್ಲಿ ದಾಂಡೇಲಿಯ ಸಿವಿಲ್ ನ್ಯಾಯಲಯ ಕಟ್ಟಡದಲ್ಲಿನ ವಕೀಲರ ಸಂಘದ ಸಭಾಭವನದಲ್ಲಿ ಐದು ದಿನಗಳ ಕಾನೂನು ಕಾರ್ಯಾಗಾರದ ಉದ್ಘಾಟನಾ ಸಮಾರಂಭ ನಡೆಯಿತು.
ಹುಬ್ಬಳ್ಳಿಯ ಕಾನೂನು ವಿಶ್ವ ವಿದ್ಯಾಲಯದ ಉಪ ಕುಲಪತಿ ಟಿ.ಆರ್. ಸುಬ್ರಹ್ಮಣ್ಯ ಕಾರ್ಯಾಗಾರ ಉದ್ಘಾಟಿಸಿದರು. ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಿ.ಆರ್. ರೇಣುಕೆ ಅಧ್ಯಕ್ಷತೆ ವಹಿಸಿದ್ದರು.
ದಾಂಡೇಲಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ವೇದಮೂರ್ತಿ ಬಿ.ಎಸ್., ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ನ ಸದಸ್ಯ ಎಸ್.ಎಸ್. ಮಿತ್ತಲ್ಕೋಡ ಪಾಲ್ಗೊಂಡಿದ್ದರು.
ದಾಂಡೇಲಿ ಬಾರ್ ಅಸೋಷಿಯೆಶನ್ ಅಧ್ಯಕ್ಷ ಎಂ.ಸಿ. ಹೆಗಡೆ ಸ್ವಾಗತಿಸಿದರು. ಧರ್ಮದರ್ಶಿ ಫೌಂಡೇಶನ್ನ ಅಧ್ಯಕ್ಷ ರವಿ ಹೆಗಡೆ ಹೂವಿನಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ವಿಶ್ವನಾಥ ಲಕ್ಷಟ್ಟಿ ವಂದಿಸಿದರು.
ಹುಬ್ಬಳಿ ಕಾನೂನು ವಿವಿ ಉಪ ಕುಲಪತಿ ಟಿ.ಆರ್. ಸುಬ್ರಹ್ಮಣ್ಯ ಉಪನ್ಯಾಸ ನೀಡಿದರು. ಅಜಿತ್ ಎಂ. ನಾಯಕ ಸ್ವಾಗತಿಸಿ, ಹನುಮಂತ ಕುಲಕರ್ಣಿ ನಿರೂಪಿಸಿದರು. 60ಕ್ಕೂ ಹೆಚ್ಚು ವಕೀಲರು ಇದ್ದರು.