ಧಾರವಾಡ

ತೇರ್ಗಡೆಗೆ ಶೇ. 50 ಅಂಕ ನಿಗದಿಯಾಗಲಿ

ಹುಬ್ಬಳ್ಳಿ: ಶಿಕ್ಷಣದ ಗುಣಮಟ್ಟ ಸುಧಾರಿಸಬೇಕಾದರೆ ತೇರ್ಗಡೆಗೆ ಪ್ರತಿಶತ 50 ಅಂಕ ನಿಗದಿಪಡಿಸಬೇಕು ಎಂದು ಇಂದಿರಾ ಗಾಂಧಿ ಅಣು ಸಂಶೋಧನಾ ಕೇಂದ್ರ (ಕಲ್ಪಕಂ)ದ ನಿವೃತ್ತ ನಿರ್ದೇಶಕ, ಪದ್ಮಶ್ರೀ ಡಾ. ಬಿ.ಎಸ್. ಭೋಜೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆಎಲ್‌ಇ ಸಂಸ್ಥೆಯ ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ನಾಲ್ಕನೇ ಸ್ವಾಯತ್ತ ಬ್ಯಾಚ್ (2010-14) ವಿದ್ಯಾರ್ಥಿಗಳಿಗೆ ಸೋಮವಾರ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಸಾಕಷ್ಟು ಮಾರ್ಗಗಳಿವೆ. ಶೇಕಡಾವಾರು ಅಂಕವನ್ನ್ನು ಶೇ. 35 ರಿಂದ 30ಕ್ಕೆ ತಗ್ಗಿಸುವುವುದರಿಂದ ಶಿಕ್ಷಣದ ಗುಣಮಟ್ಟ ಸಾಧ್ಯವಿಲ್ಲ ಎಂದರು.
ಇಂಜಿನಿಯರಿಂಗ್ ಶಿಕ್ಷಣದಲ್ಲಿ ಸುಧಾರಣೆ ತರಲು ಮಹಾರಾಷ್ಟ್ರ ಸರ್ಕಾರ ರಚಿಸಿದ ಸಮಿತಿಯೊಂದು ಹಲವು ಶಿಫಾರಸ್ಸುಗಳನ್ನು ಮಾಡಿದೆ. ಸರದಿ ಆಧಾರದಲ್ಲಿ ಕ್ರಮದಲ್ಲಿ ತರಗತಿಗಳನ್ನ್ನು ನಡೆಸುವುದನ್ನ್ನು ನಿಲ್ಲಿಸಬೇಕು, ಡಿಪ್ಲೋಮಾ ಇಂಜಿನಿಯರಿಂಗ್ ಪೂರೈಸಿದವರಿಗೆ ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೇ ಇಂಜಿನಿಯರಿಂಗ್ ಪದವಿಯ 3ನೇ ಸೆಮಿಸ್ಟರ್‌ಗೆ ಪ್ರವೇಶ ನೀಡಬೇಕು. ಇಂಜಿನಿಯರಿಂಗ್ ಶಿಕ್ಷಣದಲ್ಲಿ ಸಂಶೋಧನೆಗೆ ಆದ್ಯತೆ ನೀಡಬೇಕು. ನಕಲು ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಮಿತಿ ಸೂಚಿಸಿದೆ. ಮಹಾರಾಷ್ಟ್ರ ಸರ್ಕಾರ, ಸಮಿತಿಯ ಶಿಫಾರಸ್ಸುಗಳನ್ನ್ನು ತಕ್ಷಣ ಜಾರಿಗೆ ತರಬೇಕು ಎಂದು ಹೇಳಿದರು.
ಚೀನಾ ನಂತರ ಅತಿ ಹೆಚ್ಚು ಕಾಲೇಜು ಹಾಗೂ ವಿಶ್ವವಿದ್ಯಾಲಯ ಹೊಂದಿರುವ ಹಾಗೂ ತಾಂತ್ರಿಕ ಮಾನವ ಶಕ್ತಿ ಹೊಂದಿರುವ ವಿಶ್ವದ 3ನೇ ದೊಡ್ಡ ರಾಷ್ಟ ಭಾರತ. ಆದರೆ ಜಾಗತಿಕ ಮಟ್ಟದಲ್ಲಿ ಅಗ್ರ 200-300 ವಿಶ್ವವಿದ್ಯಾಲಯಗಳಲ್ಲಿ ಭಾರತದ ವಿವಿಗಳು ಸ್ಥಾನ ಪಡೆದಿಲ್ಲ. ಇದು ಶಿಕ್ಷಣದ ಗುಣಮಟ್ಟ ಸಾಕಷ್ಟು ಸುಧಾರಿಸಬೇಕು ಎಂಬುದಕ್ಕೆ ಸಾಕ್ಷಿ ಎಂದು ಪ್ರತಿಪಾದಿಸಿದರು. ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ವಿಶ್ರಾಂತ ಕುಲಪತಿ ಡಾ. ಎಂ.ಐ. ಸವದತ್ತಿ ಮಾತನಾಡಿ, ಉತ್ತಮ ಸಮಾಜ ನಿರ್ಮಾಣ ಕಲ್ಪನೆಯ ಸೋಷಿಯಲ್ ಇಂಜಿನಿಯರಿಂಗ್ ಇಂದಿನ ಅಗತ್ಯ. ಹಣ, ಸಂಪತ್ತು ಗಳಿಸುವುದು ಇಂಜಿನಿಯರಿಂಗ್ ಅಲ್ಲ ಎಂದರು. ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಪ್ರಾಚಾರ್ಯ ಡಾ. ಅಶೋಕ ಶೆಟ್ಟರ್, ಉಪ ಪ್ರಾಚಾರ್ಯ ಪ್ರೊ. ಬಿ.ಎಲ್. ದೇಸಾಯಿ, ಡಾ. ಪಿ.ಜಿ. ತೇವರಿ, ಡಾ. ಬಿ.ಬಿ. ಕೊಟ್ಟೂರಶೆಟ್ಟರ್ ಮತ್ತಿತರರು ಹಾಜರಿದ್ದರು.
ಬಿಇನ 1,167 ವಿದ್ಯಾರ್ಥಿಗಳಿಗೆ, ಎಂಟೆಕ್‌ನ 117 ವಿದ್ಯಾರ್ಥಿಗಳಿಗೆ, ಎಂಸಿಎನ 58 ವಿದ್ಯಾರ್ಥಿಗಳಿಗೆ, ಎಂಬಿಎನ 46 ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪದವಿ ಪ್ರದಾನ ಮಾಡಲಾಯಿತು. ವಿವಿಧ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ವರ್ಣ ಹಾಗೂ ರಜತ ಪದಕ ಪ್ರದಾನ ಮಾಡಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!