ಧಾರವಾಡ

ಪದವೀಧರರ ಕನಸು ಈಡೇರಿಸಲು ಬದ್ಧ

-ಬಸವರಾಜ ಹಿರೇಮಠ
ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 16
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಚುನಾವಣೆ ಎದುರಿಸುತ್ತಿದ್ದೇನೆ. ಪ್ರಾಮಾಣಿಕವಾಗಿ ಮತ ಕೇಳುತ್ತಿದ್ದು ಗೆಲವು ನಿಶ್ಚಿತವಾಗಿದೆ. ಈ ಮೂಲಕ ಪದವೀಧರರ ಕನಸು ಈಡೇರಿಸಲು ಬದ್ಧ.
'ಕನ್ನಡಪ್ರಭ' ನಡೆಸಿದ ವಿಶೇಷ ಸಂದರ್ಶನದಲ್ಲಿ ಪಶ್ಚಿಮ ಪದವೀಧರ ಮತ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪಿ.ಎಚ್. ನೀರಲಕೇರಿ ಅವರ ದೃಢವಾದ ಮಾತುಗಳಿವು. ಅಭಿವೃದ್ಧಿ ಮಂತ್ರದೊಂದಿಗೆ ಪಾರದರ್ಶಕ ಆಡಳಿತ ನೀಡಿ ಪದವೀಧರರ ಕನಸು ಈಡೇರಿಸಲು ಕಟಿಬದ್ಧನಾಗಿದ್ದೇನೆ. ಆದರೆ, ನನಗೊಂದು ಅವಕಾಶ ಕೊಡಿ ಎಂದು ನೀರಲಕೇರಿ ಮನವಿ ಮಾಡಿದರು.
ವಿಧಾನ ಪರಿಷತ್ ಸೂಕ್ಷ್ಮ ಕ್ಷೇತ್ರವಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿದ ಹಾಗೂ ಬುದ್ಧಿಜೀವಿಗಳಿಗೆ ಮೀಸಲಾಗಿದ್ದು, ಈ ಕ್ಷೇತ್ರದ ಚುನಾವಣೆಯಲ್ಲಿ ರಾಜಕೀಯದ ಆಟಕ್ಕಿಂತ ಪ್ರೀತಿಯಿಂದ ಮತಾದರರ ಮನ ಗೆಲ್ಲಬೇಕಿದೆ. ಈ ಪ್ರಯತ್ನ ನಡೆಸಿದ್ದು, ಈಗಾಗಲೇ ಕ್ಷೇತ್ರದ ಧಾರವಾಡ, ಕಾರವಾರ, ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಎಲ್ಲ ಪದವೀಧರ ಮತದಾರರನ್ನು ಮುಟ್ಟಲು ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಹೇಗಿದೆ ಪ್ರಚಾರ...
ರಾಜ್ಯದಲ್ಲಿ ಪ್ರಸ್ತುತ ಕಾಂಗ್ರೆಸ್ ಪಕ್ಷವು ಆಡಳಿತ ನಡೆಸುತ್ತಿದ್ದು, ನನ್ನ ಗೆಲವಿಗೆ ಹೆಚ್ಚಿನ ಸಹಕಾರಿಯಾಗಿದೆ. ಪಕ್ಷದ ಸಚಿವರು, ಶಾಸಕರು, ಮುಖಂಡರ ಸಹಾಯದೊಂದಿಗೆ ಕ್ಷೇತ್ರ ಪೂರ್ತಿ ಉತ್ತಮ ಪ್ರಚಾರ ನಡೆಸಿದ್ದೇನೆ. ಒಲವು ನನ್ನ ಕಡೆ ಹೊರಳುತ್ತಿದೆ. ಸಚಿವರಾದ ಎಚ್.ಕೆ. ಪಾಟೀಲರು ವಿಶೇಷವಾಗಿ ಶೇ. 50ರಷ್ಟು ಮತಗಳಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಹೆಚ್ಚಿನ ಪ್ರಚಾರ ನಡೆಸಿದ್ದಾರೆ. ಅದೇ ರೀತಿಯ ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ, ಶಾಸಕ ಪ್ರಸಾದ ಅಬ್ಬಯ್ಯ ಹಲವು ನಿರಂತರವಾಗಿ ಪ್ರಚಾರದಲ್ಲಿದ್ದಾರೆ. ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರದ ಸಾಧನೆಗಳು ಹಾಗೂ ನನ್ನ ಸಾಧನೆಗಳೊಂದಿಗೆ ಮತದಾರರ ಮುಂದೆ ಹೋಗುತ್ತಿದ್ದೇನೆ ಎಂದು ಪ್ರಚಾರದ ಕುರಿತು ಅವರು ಮಾತನಾಡಿದರು.
ಪ್ರತಿಸ್ಪರ್ಧಿ ಸಂಕನೂರ...
ನನ್ನ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ. ಆದರೂ ನನಗೆ ಗೆಲುವಿನ ವಿಶ್ವಾಸವಿದೆ. ಸಂಕನೂರ ಮತದಾರರದಿಂದ ನಾಲ್ಕು ಬಾರಿ ತಿರಸ್ಕೃತಗೊಂಡಿದ್ದು, ಮರು ಚುನಾವಣೆ ಬಯಸಿದ್ದಾರೆ. ಪದವೀಧರರು, ಬುದ್ಧಿಜೀವಿಗಳು ಸಂಕನೂರ ಅವರಿಗೆ ಮತ್ತೆ ಪುರಸ್ಕರಿಸೋದಿಲ್ಲ. ಹಾಗೆಯೇ, ವಸಂತ ಹೊರಟ್ಟಿ ತಂದೆ ಬಸವರಾಜ ಹೊರಟ್ಟಿ ಹೆಸರಿನಲ್ಲಿ ಮತ ಕೇಳುತ್ತಿದ್ದು, ಅಧಿಕಾರದ ಲಾಲಸೆ ಮತದಾರರಿಗೆ ಗೊತ್ತಾಗುತ್ತದೆ. ತಂದೆಯೊಂದಿಗೆ ಮಗನಿಗೂ ವಿಧಾನ ಪರಿಷತ್ತಿನಲ್ಲಿ ಮತದಾರರು ಅವಕಾಶ ನೀಡೋದಿಲ್ಲ ಎಂಬ ಭಾವನೆ ನನ್ನದಾಗಿದೆ. ಈ ಚುನಾವಣೆಯಲ್ಲಿ ಗೆಲವು ನನ್ನ ಕಡೆ ಹೆಚ್ಚು ವಾಲುತ್ತಿದೆ. ಅದು ನಿಶ್ಚಿತವೂ ಹೌದು ಎಂದು ನೀರಲಕೇರಿ ಮತ್ತೊಮ್ಮೆ ಸ್ಪಷ್ಪಪಡಿಸಿದರು.
ಏನೇನು ಸಾಧನೆ, ಭರವಸೆ...
ಚುನಾವಣೆಗೆ ಸ್ಪರ್ಧಿಸುವ ಮುಂಚೆ ಪದವೀಧರರಿಗೆ ಸಾಕಷ್ಟು ಕಾರ್ಯ ಮಾಡಿದ್ದೇನೆ. 8700 ಪ್ರೌಢಶಾಲಾ ಶಿಕ್ಷಕರ ನೇಮಕಾತಿ ರದ್ದು ವಿರುದ್ಧ ಹೋರಾಡಿ ಅವರಿಗೆ ಮರು ನೇಮಕಾತಿ ಮಾಡಿದ್ದೇನೆ. ಉದ್ಯೋಗ ಸರಳ ಯೋಜನೆ ಜಾರಿಗೊಳಿಸಿ ಯುವಜನಾಂಗಕ್ಕೆ ಉದ್ಯೋಗಾವಕಾಶಗಳ ಸಕಲ ಮಾಹಿತಿ ಒದಗಿಸುತ್ತಿದ್ದೇನೆ. ಅವರಿಗೆ ಮಾಹಿತಿ ನೀಡಲು  ಢಿಢಿಢಿ.್ಡಜಣ್ಟ್ಜಛಡಛ್ಠಛಟ.್ಛ್ಟಟ ವೆಬ್‌ಸೈಟ್ ಸಹ ಸ್ಥಾಪಿಸಿದ್ದೇನೆ. ಹಾಗೆಯೇ ನಾನು ಚುನಾವಣೆಯಲ್ಲಿ ಗೆಲವು ಸಾಧಿಸಿದರೆ, ಉದ್ಯೋಗ ಪ್ರಾಧಿಕಾರ ರಚನೆ, ಕರ್ನಾಟಕ ವಕೀಲರ ಪರಿಷತ್ತಿನ ವಿಭಾಗೀಯ ಕಚೇರಿಯನ್ನು ಧಾರವಾಡದಲ್ಲಿ ಸ್ಥಾಪಿಸುವುದು, ಕ್ಷೇತ್ರದ ನಾಲ್ಕು ಜಿಲ್ಲೆಗೊಂದು ವಕೀಲ ಭವನ ನಿರ್ಮಾಣ, ವಿವಿಗಳಲ್ಲಿ ಮೆರಿಟ್ ಆಧರಿಸಿ ಪ್ರವೇಶ ನೀಡುವಂತೆ ಮಾಡುವುದು, ಕೇಂದ್ರ ಸರ್ಕಾರದ ನೇಮಕಾತಿಗಳಿಗೆ ಕನ್ನಡ ಮಾಧ್ಯಮದವರಿಗೆ ಮೀಸಲಾತಿ ಜಾರಿ. ನಿರುದ್ಯೋಗ ಹಟಾವೋ ಅಭಿಯಾನ, ಪದವೀಧರರಿಗೆ ಉದ್ಯೋಗಾವಕಾಶ ಕೈಪಿಡಿ ನೀಡುವುದು, ಗ್ರಾಪಂ ಗ್ರಂಥಾಲಯಗಳಲ್ಲಿ ಉದ್ಯೋಗಾವಕಾಶಗಳ ಮಾಹಿತಿ ಹಾಗೂ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಲು ಪ್ರಯತ್ನ ಮಾಡುತ್ತೇನೆ ಎಂದು ನೀರಲಕೇರಿ ತಮ್ಮ ಮುಂದಿನ ಯೋಜನೆಗಳನ್ನು ಪ್ರಕಟಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!