ಧಾರವಾಡ

ರು. 1.18 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಹುಬ್ಬಳ್ಳಿ: ಇಲ್ಲಿಯ ಶ್ರೀ ಸಿದ್ಧಾರೂಢಮಠದಲ್ಲಿ ದರ್ಶನ ಪಡೆದು, ಪ್ರಸಾದ ನಿಲಯದಲ್ಲಿ ಕುಟುಂಬ ಸಮೇತ ಊಟ ಮಾಡುತ್ತಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲಿದ್ದ ರು. 1.18 ಲಕ್ಷ ಮೌಲ್ಯದ ಬಂಗಾರದ ಮಂಗಳಸೂತ್ರ ಮತ್ತಿತರ ಸಾಮಗ್ರಿ ಕಳ್ಳತನವಾಗಿವೆ. ಧಾರವಾಡ ತಾಲೂಕು ಸೋಮಾಪುರ ಗ್ರಾಮದ ಬಸವರಾಜ ಬೆನಕಪ್ಪ ಶಿರಗುಪ್ಪಿ ಎಂಬುವರು ಬುಧವಾರ ಮಧ್ಯಾಹ್ನ ಪತ್ನಿ ಹಾಗೂ ಸಹೋದರಿಯರ ಸಮೇತ ಶ್ರೀ ಮಠದ ಪ್ರಸಾದ ನಿಲಯದಲ್ಲಿ ಊಟ ಮಾಡುತ್ತಿದ್ದ ಸಂದರ್ಭ ಕಳ್ಳತನವಾಗಿದೆ. ಪತ್ನಿಯ ವ್ಯಾನಿಟಿ ಬ್ಯಾಗ್‌ನಲ್ಲಿ ರು. 1,18,600 ಮೌಲ್ಯದ 45 ಗ್ರಾಂ ತೂಕದ ಬಂಗಾರದ ಮಂಗಳಸೂತ್ರ, ಒಂದು ಜೊತೆ ಬಂಗಾರದ ಬೆಂಡೊಲೆ, ಡಿಜಿಟಲ್ ಕ್ಯಾಮೆರಾ, ಒಂದು ಸ್ಯಾಮಸಂಗ್ ಮೊಬೈಲ್, ನಗದು ಕಳ್ಳತನವಾಗಿವೆ. ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನದ ಸರ ಕಳ್ಳತನ
ಹುಬ್ಬಳ್ಳಿ: ಬೈಕ್ ಸವಾರನೊಬ್ಬ ಪಾದಚಾರಿ ಮಹಿಳೆ ಕೊರಳಲ್ಲಿದ್ದ ಸುಮಾರು 25 ಗ್ರಾಂನ ಬಂಗಾರದ ಸರ ಅಪಹರಿಸಿದ ಘಟನೆ ಬುಧವಾರ ರಾತ್ರಿ ಆದರ್ಶ ನಗರದಲ್ಲಿ ನಡೆದಿದೆ. ಸುನಂದಾ ಮಲ್ಲಿಕಾರ್ಜುನ ಹೊನ್ನಳ್ಳಿ (58) ಎಂಬ ಮಹಿಳೆ ರಾತ್ರಿ ಸುಮಾರು 8.30ಕ್ಕೆ ಆದರ್ಶನಗರ 2ನೇ ಕ್ರಾಸ್‌ದಲ್ಲಿ ನಡೆದುಕೊಂಡು ಬರುವಾಗ ಬೈಕ್‌ನಲ್ಲಿ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿ ಇವರ ಕೊರಳಲ್ಲಿದ್ದ ಬಂಗಾರದ ಸರ ಅಪಹರಿಸಿ ಪರಾರಿಯಾಗಿದ್ದಾನೆ. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ: ಬಂಧನ
ಹುಬ್ಬಳ್ಳಿ: ಜೂಜಾಟವಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನೇಕಾರನಗರ ನಿವಾಸಿ ಜಯರಾಮ ಪಲಮಾರೈ ಎಂದು ಗುರುತಿಸಲಾಗಿದ್ದು, ಈತ ಹಳೇಹುಬ್ಬಳ್ಳಿ ಸಂತೋಷನಗರದಲ್ಲಿ ಮಟಕಾ ಆಡುತ್ತಿದ್ದ. ಬಂಧಿತನಿಂದ ರು. 220 ನಗದು, ಮಟಕಾ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಕ್ರಮ ಮದ್ಯ ವಶ
ಹುಬ್ಬಳ್ಳಿ: ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬೆಂಡಿಗೇರಿ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಸೆಟ್ಲಮೆಂಟ್‌ನಲ್ಲಿ ಅಕ್ರಮ ಮದ್ಯ ಸಾಗಿಸುತ್ತಿದ್ದ ಯಲ್ಲಪ್ಪ ತಮ್ಮಣ್ಣ ಗದಗ ಎಂಬುವವನ್ನು ಬಂಧಿಸಿರುವ ಪೊಲೀಸರು, ಬಂಧಿತನಿಂದ ಸುಮಾರು ರು. 1885 ಮೌಲ್ಯದ ಮದ್ಯ ತುಂಬಿದ ಟೆಟ್ರಾ ಪಾಕೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಮದ್ಯದ ಬಾಟಲಿಗಳನ್ನು ಅಕ್ರಮವಾಗಿ ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳಿಬ್ಬರನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದೇಶಪಾಂಡೆ ನಗರದ ರಾಜೇಂದ್ರ ರಾಮಚಂದ್ರಸಾ ಮೇಹರವಾಡೆ ಮತ್ತು ರಣದಮ್ಮ ಕಾಲನಿ ನಿವಾಸಿ ನಾಗಯ್ಯ ಶಿವಯ್ಯ ಚಂದರಗಿಮಠ ಎಂಬುವವರೇ ಬಂಧಿತ ಆರೋಪಿಗಳು. ಜೆಸಿ ನಗರದಲ್ಲಿರುವ ತಮ್ಮ ಹೋಟೆಲ್‌ಗೆ ಬರುವ ಗಿರಾಕಿಗಳಿಗೆ ಮದ್ಯದ ಬಾಟಲಿಗಳನ್ನು ಸರಬರಾಜು ಮಾಡುತ್ತಿದ್ದಾಗ ಇಬ್ಬರೂ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ ರು. 1,050 ನಗದು ಹಾಗೂ ರು. 980 ಮೌಲ್ಯದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಪ್ರಮಾಣವಚನ ಸ್ವೀಕಾರ

ಸರ್ಕಾರದಿಂದ ಉತ್ತರ ಕೇಳುವುದು ಅರಾಜಕತೆಯಲ್ಲ: ಜೈಲಿಗೂ ಹೋಗಲು ಸಿದ್ಧ; CJP ತಿರಂಗಾ ಮೆರವಣಿಗೆಗೂ ಮುನ್ನ ಅಭಿಜೀತ್ ದೀಪ್ಕೆ!

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು