ಹುಬ್ಬಳ್ಳಿ: ಹೊಸ ರೈಲುಗಳ ಸಂಚಾರ ಸೇರಿದಂತೆ ನೈಋತ್ಯ ರೇಲ್ವೆ ವಲಯದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಕುರಿತು ವಲಯದ ಮಹಾಪ್ರಬಂಧಕ ಪ್ರದೀಪಕುಮಾರ ಸೆಕ್ಸೇನಾ ಅವರಿಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ಇತ್ತೀಚೆಗೆ ಮನವಿ ಸಲ್ಲಿಸಲಾಯಿತು.
ಅಧ್ಯಕ್ಷ ವಸಂತ ಲದವಾ ನೇತೃತ್ವದಲ್ಲಿ ತೆರಳಿದ ಸಂಸ್ಥೆಯ ಪದಾಧಿಕಾರಿಗಳು, ಹುಬ್ಬಳ್ಳಿ-ಮುಂಬೈ ಮಧ್ಯೆ ನಿತ್ಯ ನೇರ ರೈಲು ಸಂಚಾರ, ಹುಬ್ಬಳ್ಳಿ-ಧಾರವಾಡ ನಿಲ್ದಾಣಗಳ ಅಭಿವೃದ್ಧಿ, ಓವರ್ ಬ್ರಿಜ್ಗಳ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
2014-15ನೇ ಸಾಲಿನ ರೇಲ್ವೆ ಬಜೆಟ್ನಲ್ಲಿ ಈ ಭಾಗದ ರೈಲು ಬೇಡಿಕೆಗಳ ಕುರಿತು ಈಗಾಗಲೇ ರೇಲ್ವೆ ಸಚಿವ ಡಿ.ವಿ. ಸದಾನಂದಗೌಡ ಅವರಿಗೆ ಸಲ್ಲಿಸಿರುವ ಬೇಡಿಕೆ ಪ್ರತಿಯನ್ನು ಇದೇ ಸಂದರ್ಭದಲ್ಲಿ ಪ್ರದೀಪಕುಮಾರ ಸೆಕ್ಸೇನಾ ಅವರಿಗೆ ನೀಡಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಕೆ.ಡಿ. ಕೊಟೇಕರ, ಸುಭಾಸ ಬಾಗಲಕೋಟ, ಸಿದ್ದೇಶ್ವರ ಕಮ್ಮಾರ, ಡಾ. ವಿ.ಎಸ್.ವಿ. ಪ್ರಸಾದ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.