ಹುಬ್ಬಳ್ಳಿ: ಉತ್ತಮ ವಸತಿ ಸೌಲಭ್ಯ ಹಾಗೂ ವಾಣಿಜ್ಯ ಸಂಕೀರ್ಣಗಳನ್ನ್ನು ಕಟ್ಟಿ ಅಭಿವೃದ್ಧಿ ಪಡಿಸುವುದರ ಮೂಲಕ ಬಿಲ್ಡರ್ಸ್, ಡೆವೆಲಪರ್ಸ್ ಮತ್ತು ಗುತ್ತಿಗೆದಾರರು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹುಬ್ಬಳ್ಳಿ ವಲಯದ ಆದಾಯ ತೆರಿಗೆ ಇಲಾಖೆಯ ಕಮೀಷನರ್ ಗಣೇಶ ಎನ್. ಐರ್ಸ್ ಇವರು ಅಭಿಪ್ರಾಯ ಪಟ್ಟರು.
ಹುಬ್ಬಳ್ಳಿಯಲ್ಲಿ ರಿಯಲ್ ಎಸ್ಟೆಟ್ ಡೆವೆಲಪರ್ಸ್ ಅಸೋಸಿಯೆಶನ್ ಹಾಗೂ ಚಾರ್ಟರ್ಡ್ ಅಂಕೌಂಟಂಟ್ಸ್ ಸಂಸ್ಥೆಗಳ ಆಶ್ರಯದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ತೆರಿಗೆ ಕಾಯಿದೆಗಳ ತಿಳಿವಳಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಿಯಲ್ ಎಸ್ಟೆಟ್ ಉದ್ದಿಮೆದಾರರು ತೆರಿಗೆ ಇಲಾಖೆಯೊಂದಿಗೆ ಸಹಕರಿಸಬೇಕು. ಅನೇಕರು ಯಾವುದೇ ತಂಟೆ ತಕರಾರುಗಳಿಗೆ ಆಸ್ಪದ ಕೊಡದೇ ಸರ್ಕಾರದ ತೆರಿಗೆ ಇಲಾಖೆಯೊಂದಿಗೆ ಸಹಕರಿಸಿ ಜನರಿಗೆ ಉತ್ತಮ ವಸತಿ ಸೌಲಭ್ಯ ದೊರಕಿಸಿಕೊಡುತ್ತಿದ್ದಾರೆಂದರು.
ಕಳೆದ 20 ವರ್ಷಗಳಲ್ಲಿ ವಸತಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಆಗಿರುವುದನ್ನ್ನು ನಾವು ಕಾಣುತ್ತಿದ್ದೇವೆ. ಆದರೆ ಬಡವರು ಹಾಗೂ ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಉತ್ತಮ ಗುಣಮಟ್ಟದ ಹಾಗೂ ಕಡಿಮೆ ಬೆಲೆಯ ಮನೆಗಳನ್ನ್ನು ನಿರ್ಮಿಸಿ ಕೊಡಬೇಕೆಂದು ಅವರು ಸಲಹೆ ನೀಡಿದರು.
ಭಾರತದಲ್ಲಿ ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗುತ್ತಿದೆ. ಇದನ್ನ್ನು ವಸತಿಗಾಗಿ ಬಳಸಿದರೆ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ತೊಡಕಾಗುತ್ತದೆ. ಹೀಗಾಗಿ ಮೆಟ್ರೊನಗರದಲ್ಲಿ ಇರುವಂತೆ ಗಗನ ಚುಂಬಿ ಕಟ್ಟಡಗಳನ್ನ್ನು ಅಭಿವೃದ್ಧಿ ಪಡಿಸುವಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸಬೇಕೆಂದು ಅವರು ಕರೆ ನೀಡಿದರು. ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾದ ಬಿ.ಏ. ನಾಣಿಯಪ್ಪ ಮಾತನಾಡಿ, ಇಲಾಖೆಯ ಆಡಳಿತದಲ್ಲಿ ಇ-ತಂತ್ರಜ್ಞಾನ ಅಳವಡಿಸಿಕೊಂಡು ಪಾರದರ್ಶಕತೆ ತರುವಲ್ಲಿ ಪ್ರಯತ್ನ್ನಿಸಲಾಗುತ್ತಿದೆ. ಉದ್ದಿಮೆದಾರರು ತಮ್ಮ ವ್ಯವಹಾರ ವಿವರಗಳನ್ನ್ನು ಆನ್ಲೈನ್ ಮೂಲಕವೇ ಇಲಾಖೆಗೆ ಸಲ್ಲಿಸಿದರೆ ಅವುಗಳನ್ನ್ನು ಪರಿಶೀಲಿಸಿ ಇ-ಆಡಿಟ್ ವರದಿಯನ್ನ್ನು ಆನ್ಲೈನ್ ಮೂಲಕವೇ ತಯಾರಿಸಿ ಕಳಿಸಲಾಗುವುದು. ಖರೀದಿ ಹಾಗೂ ವಿಕ್ರಿಯ ವಿವರಗಳನ್ನ್ನು ಆನ್ಲೈನ್ ಮೂಲಕ ಸಲ್ಲಿಸುವುದು ಕಡ್ಡಾಯವಾಗಿದೆ. ಇದರಿಂದ ಹೆಚ್ಚಿಗೆ ಪಾವತಿಸಿದ ವ್ಯಾಟ್ ತೆರಿಗೆಯನ್ನ್ನು ಉದ್ದಿಮೆದಾರರಿಗೆ ಮರಳಿ ಪಾವತಿಸಲು ಸುಲಭವಾಗುತ್ತಿದೆ ಎಂದರು.
ಸಿ.ಎ ಸಂಸ್ಥೆಯ ಅಧ್ಯಕ್ಷ ಹಿತೇಷಕುಮಾರ ಮೋದಿ, ವೃತ್ತಿ ನಿರತರು ಹಾಗೂ ಇಲಾಖೆ ಅಧಿಕಾರಿಗಳು ಪರಸ್ಪರ ಸಹಕರಿಸಿದರೆ ತಂಟೆ ತಕರಾರುಗಳಿಲ್ಲದೇ ಕಾಯ್ದೆ, ಕಲಮುಗಳ ಪಾಲನೆಯಾಗುತ್ತದೆ. ಜತೆಗೆ ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಸಂಗ್ರಹವಾಗುತ್ತದೆ ಎಂದು ತಿಳಿಸಿದರು. ವಿಷ್ಣು ಮೇಹರವಾಡೆ, ಜಯರಾಮ ಶೆಟ್ಟಿ, ಶಿವಕುಮಾರ, ಉಪಸ್ಥಿತರಿದ್ದರು. ಸಾಯಿಪ್ರಸಾದ, ಅಶೋಕ ರಾಘವನ್, ಅನ್ನಪೂರ್ಣ ಕಾರ್ಬಾ ಪ್ರಬಂಧ ಮಂಡಿಸಿದರು.